ಭಟ್ಕಳ
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿತ್ತು. ಗುರುವಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಭಟ್ಕಳಕ್ಕೆ ಆಗಮಿಸಿ ತಾಲೂಕ ಆಡಳಿತ ಮತ್ತು ಪುರಸಭೆ ಅಧ್ಯಕ್ಷರನ್ನೊಳಗೊಂಡ ಸಮಿತಿಯೊಂದಿಗೆ ಭಟ್ಕಳ ಸಹಾಯಕ ಆಯುಕ್ತರ ಕಚೇರಿಯಲ್ಲಿ ಸಭೆ ನಡೆಸಿದ್ರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸರಕಾರಿ ಕಚೇರಿಯಲ್ಲಿ ಉರ್ದು ಬಾಷೇ ನಾಮಫಲಕ ಅಳವಡಿಸಲು ಕಾನೂನಿನಲ್ಲಿ ಅವಕಾಶವಿಲ್ಲ, ಮತ್ತು ಸರಕಾರದ ಅನುಮತಿ ಇಲ್ಲ. ಕನ್ನಡ ಮತ್ತು ಆಂಗ್ಲ ಭಾಷೆ ಮಾತ್ರ ಬಳಸಲು ಅನುಮತಿ ಇದೆ . ಆದ ಕಾರಣ ಈ ಕೂಡಲೇ ಭಟ್ಕಳ ಪುರಸಭೆಯಲ್ಲಿ ಅಳವಡಿಸಿರುವ ಉರ್ದು ನಾಮಫಲಕ ತೆರವುಗೊಳಿಸಲು ಆದೇಶ ಮಾಡಿರುವುದಾಗಿ ತಿಳಿಸಿದರು. ಜಿಲ್ಲಾಧಿಕಾರಿ ಆದೇಶ ಆದ ಕೂಡಲೇ ಭಟ್ಕಳ ಪುರಸಭೆಯಲ್ಲಿ ಅಳವಡಿಸಿರುವ ಉರ್ದು ನಾಮಫಲಕ ತೆರವು ಮಾಡಲಾಗಿತ್ತು. ಈ ವಿಚಾರವಾಗಿ ವಿಶ್ವದರ್ಶನ ದಿನ ಪತ್ರಿಕೆ ಜಿಲ್ಲಾ ವರದಿಗಾರರು ಭಟ್ಕಳ ವಿಧಾನಸಭಾ ಜೆ.ಡಿ.ಎಸ್ ಅಧ್ಯಕ್ಷ ಇನಾಯಿತುಲ್ಲ ಶಾಬಂದ್ರಿ ಅವರನ್ನು ಸಂಪರ್ಕಿಸಿದಾಗ ಅವರು ಮಾತನಾಡಿ ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್ ಖಾಸಿಮ್ ಅವರ ಅವಸರದ ನಿರ್ಣಯವೇ ಭಟ್ಕಳದಲ್ಲಿ ಭಾಷಾ ವಿವಾದ ಸ್ರಷ್ಟಿಯಾಗಲು ಕಾರಣ ಎಂದು ತಿಳಿಸಿದರು. ಪುರಸಭೆ ಅಧ್ಯಕ್ಷರು ಸಭೆಯಲ್ಲಿ ಠರಾವು ಪಾಸ ಮಾಡಿ , ಜಿಲ್ಲಾಧಿಕಾರಿ ಗೆ ಕಳುಹಿಸಿ ,ಸರಕಾರದ ಅನುಮತಿ ಪಡೆದು ಉರ್ದು ನಾಮಫಲಕ ಅಳವಡಿಸಬೇಕಿತ್ತು.
ಈ ವಿಚಾರದಲ್ಲಿ ಪುರಸಭೆ ಅಧ್ಯಕ್ಷರು ಎಡವಿದ್ದಾರೆ , ಅವರು ಸರರಿಯಾದ ನಿಯಮ ಪಾಲನೆ ಮಾಡಿಲ್ಲ ಆದರಿಂದ ಭಟ್ಕಳದಲ್ಲಿ ಭುಗಿಲೆದ್ದ ಭಾಷಾ ವಿವಾದಕ್ಕೆ ಭಟ್ಕಳ ಪುರಸಭೆ ಅಧ್ಯಕ್ಷ ಪರ್ವೇಜ್ ಖಾಸಿಮ್ ಸಂಪೂರ್ಣ ಹೊಣೆಗಾರರು ಎಂದು ತಿಳಿಸಿದರು. ಭಟ್ಕಳದ ಹಳೆ ಮೀನು ಮಾರುಕಟ್ಟೆಯನ್ನು , ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವಂತೆ ನಿನ್ನೆ ನಡೆದ ಸಭೆಯಲ್ಲಿ ತಾವು ಜಿಲ್ಲಾಧಿಕಾರಿಗಳಿಗೆ ತಾಕೀತು ಮಾಡಿದ್ದು , ಜಿಲ್ಲಾಧಿಕಾರಿಗಳು ಅತಿ ಶೀಘ್ರ ಈ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ ಇದು ಖುಷಿ ವಿಚಾರ ಎಂದು ತಿಳಿಸಿದ್ದಾರೆ.ಭಟ್ಕಳದಲ್ಲಿ ಮಾಡಲು ಸಾಕಷ್ಟು ಕೆಲಸ ಇದೆ , ಅದನ್ನು ಬಿಟ್ಟು ಪುರಸಭಾ ಅಧ್ಯಕ್ಷರು, ಯಾವುದೇ ನಿಯಮ ಪಾಲಿಸದೆ ಅವಸರ ಮಾಡಿ ಪುರಸಭೆಗೆ ಉರ್ದು ನಾಮಫಲಕ ಹಾಕಿ , ಶಾಂತಿಯಿಂದ ಇದ್ದ ನಮ್ಮ ಭಟ್ಕಳದ ಜನರಲ್ಲಿ ಭಾಷಾ ವಿವಾದ ಹುಟ್ಟು ಹಾಕಿ ಗೊಂದಲ ಮಾಡಿದರು ಎಂದು ತಿಳಿಸಿದರು.
Be the first to comment