ಕಲಬುರಗಿ| ಚೌಡಯ್ಯ ವಚನಗಳಲ್ಲಿ ಬದುಕಿನ ಸೂತ್ರ: ವಿಧಾನ ಪರಿಷತ್ ಸದಸ್ಯ ತಿಪಣ್ಣಪ್ಪ ಕಮಕನೂರ.

ವರದಿ: ಅಮರೇಶ ಕಾಮನಕೇರಿ


ನಿಜಶರಣ ಜಯಂತೋತ್ಸವ 21-01-2020


ಕಲಬುರಗಿ: ‘ಅಂಬಿಗರ ಚೌಡಯ್ಯ ತಮ್ಮ ವಚನಗಳ ಮೂಲಕ ಸಮಾನತೆ ಮತ್ತು ಸಹೋದರತೆಯನ್ನು ಸಾರಿದ್ದಾರೆ. ನೇರ ನುಡಿಯ ವಚನಕಾರರಾದ ಅವರು ಒಂದು ಜಾತಿ ಅಥವಾ ಕುಲಕ್ಕೆ ಸೀಮಿತವಾದವರಲ್ಲ. ಅವರ ವಚನಗಳಲ್ಲಿ ಬದುಕಿನ ಸೂತ್ರಗಳಿದ್ದು, ಅವುಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು’ ಎಂದು ಅಪಾರ ಜೀಲ್ಲಾಧಿಕಾಗಳು ಹೇಳಿದರು. ಕಾರ್ಯಕ್ರಮ ದಿವ್ಯ ಸಾನಿದ್ಯವನು ತೋನಸನಹಳ್ಳಿ ಅಲ್ಲಮ ಪ್ರಭು ಪೀಠ ಶ್ರೀ ಮಲ್ಲಣ್ಣಪ್ಪ ಮುತ್ಯಾ ವಹಿಸಿಕೊಂಡಿದರು

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ವತಿಯಿಂದ ಇಲ್ಲಿನ ಡಾ.ಎಸ ಎಂ ಪಂಡಿತ  ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ನಿಜಶರಣ ಅಂಬಿಗರ ಚೌಡಯ್ಯ’ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಗೌತಮ ಬುದ್ಧ, ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ್ ನಡೆದ ದಾರಿಯಲ್ಲಿ ನಡೆಯಬೇಕು. 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯು ಜಾತಿ ತಾರತಮ್ಯದ ವಿರುದ್ಧದ ಧ್ವನಿಯಾಗಿತ್ತು. ಚೌಡಯ್ಯನವರು ಜಾತಿಯನ್ನು ಸ್ಪಷ್ಟವಾಗಿ ವಿರೋಧಿಸಿದವರು. ಕನ್ನಡದ ಮೊಟ್ಟಮೊದಲ ಬಂಡಾಯ ಕವಿಯೂ ಹೌದು’ ಎಂದು ಸ್ಮರಿಸಿದರು.

‘ತಮ್ಮ ವಚನಗಳ ಮೂಲಕ ಜನಸಾಮಾನ್ಯರಲ್ಲಿನ ಮೂಢನಂಬಿಕೆಗಳನ್ನು ಹಾಗೂ ಅರ್ಥವಿಲ್ಲದ ಆಚರಣೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಅವರು ಶರಣ ಮಾತ್ರವಲ್ಲ ಅನೇಕ ಪವಾಡಗಳನ್ನು ಮಾಡಿದವರು. ಅಂಬಿಗಸ್ಥ ಸಮಾಜ ನಂಬಿಗಸ್ಥ ಸಮಾಜ’ ಎಂದರು.

ಸಮಾಜದ ಮುಖಂಡ ತಿಪಣ್ಣಪ್ಪ ಕಮಕನೂರ ಮಾತನಾಡಿ, ‘ಜಯಂತಿ ಆಚರಣೆ ಕಾರ್ಯಕ್ರಮಗಳ ಮೂಲಕ ಶರಣರ ವಿಚಾರಗಳು ನಾಡಿನ ತುಂಬಾ ಪ್ರಚಾರವಾಗುತ್ತಿವೆ. ಇದು ಸಂತಸದ ಸಂಗತಿ’ ನಮ್ಮ ಸಮಾಜ ದಿಮಂತ ನಾಯಕ ವಿಠ್ಠಲ ಹೆರೂರವರ ಸಮಾಜ ಸಲುವಾಗಿ ದುಡಿದು ನಮಗೆ ದಾರಿ ತೋರಿಸಿದವರ ಸಮಾಜವನ್ನು ಎಸ ಟಿ ಮಾಡಬೇಕೆಂದು ನಿರಂತ ಹೊರಾಟ ಮಾಡಿದ್ದಾರೆ ಅವರ ಕನಸನ್ನು ನನಸು ಮಾಡವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಹೇಳಿದರು.

ನಿಜಶರಣ ಜಯಂತೋತ್ಸವ ವಿಶೇಷ ಉಪನ್ಯಾಸವನ್ನು ಡಾ. ರಾಘವೇಂದ್ರ ಗುಡಗುಂಟಿ ನೀಡಿದರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ,ಅಧಿಕಾರಿಗಳು ಮುಖಂಡರಾದ ಶಿವಶರಣಪ್ಪ ಕೂಬಾಳ, ರಮೇಶ ನಾಟಿಕಾರ, ಇಂದಾರ ಶಕ್ತಿ, ಬಸವರಾಜ ಬೂದಿಹಾಳ, ದಿಗಂಬರ ಕಾಡುಲಿ, ಸಂತೋಷ ಬೆಣ್ಣೂರ,ಕೋಲಿ ಸಮಾಜದ ಜೀಲ್ಲಾಧ್ಯಕ್ಷ ವಸಂತ ನರಿಬೋಳ, ಇದ್ದರು.

ಇದಕ್ಕೂ ಮುನ್ನ ಗಂಗಾ ನಗರದಿಂದ ಆರಂಮುಖಂಡ ನಿಜಶರಣ ಅಂಬಿಗರ ಚೌಡಯ್ಯ ನವರ ಫೋಟೊ ಮೆರವಣಣಿಗೆ ಚಾಲನೆಯನ್ನು ಶಾಸಕ ಪ್ರಿಯಾಂಕ ಖರ್ಗೆ ಚಾಲನೆ ನೀಡಿದರು. ಸಮಾಜದ ಯುವ ಮುಖಂಡರು ಹಾಜರಿದ್ದರು.


Be the first to comment

Leave a Reply

Your email address will not be published.


*