ಗುಡೂರ
ಇಳಕಲ್ ತಾಲೂಕಿನ ಗುಡೂರ (ಎಸ್ ಸಿ) ಗ್ರಾಮದ ಸರಕಾರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ ಯಲ್ಲಿ ನೊತನ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ಹಾಗೂ ಗಣ್ಯರಿಗೆ ಸತ್ಕಾರ ಸಮಾರಂಭ ಜರುಗಿತು.
ಅತಿಥಿಗಳಾಗಿ ಆಗಿಮಿಸಿದ ವಿ. ಪಿ. ಭೋವಿ ಬಿ ಆರ್ ಪಿ ಪ್ರೌಢ ವಿಭಾಗ ಹುನಗುಂದ ಇವರು ಇವತ್ತಿನ ತಾಂತ್ರಿಕಯುಗದಲ್ಲಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಮತ್ತು ಸಮೂಹ ಮಾಧ್ಯಮಗಳನ್ನು ಉಪಯೋಗಿಸಿ ಮಕ್ಕಳ ಉನ್ನತ ಮಟ್ಟದ ಕಲಿಕೆಗೆ ಪೂರಕವಾದ ಶೈಕ್ಷಣಿಕ ವಾತಾವರಣವನ್ನು ಗ್ರಾಮೀಣ ಪ್ರದೇಶದಲ್ಲಿ ಕಲ್ಪಿಸಿದ್ದು ಮತ್ತು ಗುಡೂರಿನ ಹಿರಿಯರು ಯುವಕರು ಅನೇಕ ದಾನಗಳನ್ನು ನೀಡಿದ್ದು ಅವರ ಶೈಕ್ಷಣಿಕ ಕಾಳಜಿಗೆ ಎಷ್ಟು ಅಭಿನಂದನೆಗಳನ್ನು ಸಲ್ಲಿಸಿದರು ಅದು ಕಡಿಮೆ.ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ಆಸಕ್ತಿ ಸೇವಾ ಮನೋಭಾವನೆ ಮತ್ತೊಬ್ಬರಿಗೆ ಮಾದರಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಶಶಿಕಾಂತ ಭಜಂತ್ರಿ ಅಧ್ಯಕ್ಷರು ಸೌಹಾರ್ಧ ಬ್ಯಾಂಕ್ ಇವರು ಪ್ರೋಜೆಕ್ಟರ ಕೊಡುಗೆ,ಯುಪಿಎಸ್ ಕೊಡುಗೆ ಮುತ್ತು ಮುರಡಿ,ಎಮ್.ಡಿ.ದಲಬಂಜನ್ ಸಿಸಿ ಕ್ಯಾಮರಾ ಕೊಡುಗೆ ನೀಡಿದರು.ಶಾಲೆಗೆ ಮೈಕ್ ಸೆಟ್,ಊಟದ ತಟ್ಟೆ ಕಾಣಿಕೆ ನೀಡಿದ ಮುತ್ತುಮುರಡಿ, ಯಮನೂರ ಗಾಜಿ ವಿಶಾಲ ಕಂಪ್ಯೂಟರ್, ವೀರೇಶ ಮಂತ್ರಿ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಜಿ ವೈ ಅಲೂರ ಬಿ ಆರ್ ಪಿ ಪ್ರಾಥಮಿಕ ವಿಭಾಗ ಹುನಗುಂದ ಎಮ್. ಸಿ ತಿಪ್ಪಣ್ಣವರ ಸಿ ಆ ರ್. ಪಿ ಗುಡೂರ ಎಸ್.ಆರ್ ಹೊದ್ಳುರ ಬಿ. ಆಯ್ ಆರ್ ಪಿ ಹುನಗುಂದ. ರವಿ ಕಾಳಿಗಿ ಸಿ ಆರ್ ಪಿ ಚಿಕನಾಳ ಮತ್ತು ಹಣಮಂತ ಹನುಮನಾಳ ಉಪಸ್ಥಿತರಿದ್ದರು.ಎನ್. ಎನ್ ಕೆಂಗಲ್ಲ ಪ್ರ. ಮುಖ್ಯೋಪಾಧ್ಯಾಯರು ಅಧ್ಯಕ್ಷ ಸ್ಥಾನ ವಹಿಸಿದ್ದರು ಶಿಕ್ಷಕ ಸಿಬ್ಬಂದಿ ಮಕ್ಕಳು ಉಪಸ್ಥಿತರಿದ್ದರು.ಅಶೋಕಕೆಂಧೂಳಿ ಕಾರ್ಯಕ್ರಮ ನಿರೂಪಿದರು. ಪ್ರಾಸ್ತಾವಿಕ ನುಡಿಗಳನ್ನು ಪಿ. ಎಚ್.ತಳವಾರ ವ್ಯಕ್ತಪಡಿಸಿದರು.
Be the first to comment