ರಾಜ್ಯ ಸುದ್ದಿಗಳು
ಬೆಂಗಳೂರು:
ಮುಖ್ಯ ಲೋಕಾಯುಕ್ತರಾಗಿ ನೇಮಕಗೊಂಡು ರಾಜ್ಯಪಾಲರಿಂದ ಪ್ರಮಾಣ ವಚನ ಸ್ವೀಕರಿಸಿ ಹುದ್ದೆ ಅಲಂಕರಿಸಿದ ಉಚ್ಛ ನ್ಯಾಯಾಲಯ ನಿವೃತ್ತ ನ್ಯಾಯಾಧೀಶರಾದ ಬಿ.ಎಸ್.ಪಾಟೀಲ್(ಪಡೇಕನೂರ) ರವರಿಗೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಅವರ ಆಪ್ತ ಸ್ನೇಹದ ವಕೀಲರ ಬಳಗ ಬುಧವಾರ ಶುಭಾಶಯ ಕೋರಿದರು.
ಅವರ ಸತತ ಪರಿಶ್ರಮ, ಅಧ್ಯಯನ, ಕಾನೂನು ಪಾಂಡಿತ್ಯ ದೊಂದಿಗೆ ಸಾಮಾಜಿಕ ಕಳಕಳಿ ಮೆಚ್ಚುವಂಥದ್ದು. ಈ ಗೌರವಾನ್ವಿತ ಹುದ್ದೆ ಅಲಂಕರಿಸಿರುವದು ನಮ್ಮ ಅಖಂಡ ವಿಜಯಪುರ ಜಿಲ್ಲೆಗೆ ಹೆಮ್ಮೆ ತಂದಿದೆ, ಅದರಲ್ಲೂ ಮುದ್ದೇಬಿಹಾಳ ಭಾಗದ ಜನತೆಗೆ ಅತ್ಯಂತ ಸಂತೋಷ ಉಂಟು ಮಾಡಿದೆ ಎಂದು ಅವರ ಆಪ್ತ ಸ್ನೇಹಿತರು, ಹಿರಿಯ ನ್ಯಾಯವಾದಿಗಳಾದ ನಾಗಠಾಣ ರವರು ಅಭಿಪ್ರಾಯಪಟ್ಟರು.
ಹಿರಿಯ ನ್ಯಾಯವಾದಿ, ನಿಕಟವರ್ತಿಗಳಾದ ಎಂ.ಎಸ್.ನಾವಾದಗಿ, ಉತ್ತರಕರ್ನಾಟಕ ದ ಬಗೆಗಿರುವ ಕಾಳಜಿ, ಬಡ ಕಕ್ಷಿದಾರ ಬಗೆಗಿನ ಅನುಕಂಪ, ತ್ವರಿತ ನ್ಯಾಯ ಒದಗಿಸುವ ಅವರ ಕಾರ್ಯಶೈಲಿ ಕುರಿತು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುದ್ದೇಬಿಹಾಳದ ನ್ಯಾಯವಾದಿಗಳಾದ ಪಟ್ಟಣಶೆಟ್ಟಿ, ಜೇಸಿ ಸಂಸ್ಥೆ ಯ ಮಾಜಿ ಅಧ್ಯಕ್ಷರಾದ ಅರವಿಂದ ಜಮಖಂಡಿ, ಉದ್ಯಮಿ ಸಂಗಮ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.
Be the first to comment