ಕ.ವಿ.ವಿ ಎಂ.ಎಸ್ಸಿ ಪರೀಕ್ಷೆಯಲ್ಲಿ ಮುರುಡೇಶ್ವರದ ನಮೃತಾಗೆ ಐದು ಚಿನ್ನದ ಪದಕ

ವರದಿ:ಕುಮಾರ ನಾಯ್ಕ

ಭಟ್ಕಳ:

ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ನಡೆದ ಘಟಿಕೋತ್ಸವದಲ್ಲಿ ಮುರುಡೇಶ್ವರದ ನಮೃತಾ ಎಂಎಸ್‌ಸಿ ಸಸ್ಯಶಾಸ್ತ್ರ ವಿಷಯದಲ್ಲಿ 5 ಬಂಗಾರದ ಪದಕವನ್ನು ರಾಜ್ಯಪಾಲ ಥಾವರಚಂದ್ ಗೆಹ್ಲೊಟ್ ಅವರಿಂದ ಪಡೆದುಕೊಂಡು ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಇವಳು ಗೀತಾ ಹಾಗೂ ಉದಯ ಶೆಟ್ಟಿ ಅವರ ಮಗಳಾಗಿದ್ದು, ಮುರ್ಡೇಶ್ವರದ ಆರ್‌ಎನ್‌ಎಸ್ ವಿದ್ಯಾನಿಕೇತನದಲ್ಲಿ ಎಸ್‌ಎಸ್‌ಎಲ್‌ಸಿ, ಪದವಿಪೂರ್ವ ವ್ಯಾಸಂಗ ಮಾಡಿ ಹೊನ್ನಾವರದ ಎಸ್‌ಡಿಎಮ್ ಮಹಾವಿದ್ಯಾಲಯದಲ್ಲಿ ಬಿಎಸ್‌ಸಿ ಪದವಿ ಪಡೆದುಕೊಂಡಿದ್ದಾರೆ.

ಪ್ರತಿಭಾನ್ವಿತ ವಿದ್ಯಾರ್ಥಿಯಾಗಿರುವ ನಮೃತಾಗೆ ತಾಲೂಕು ಗಾಣಿಗ ಸೇವಾಸಂಘದ ಪರವಾಗಿ ಶ್ರೀಧರ ಶೆಟ್ಟಿ, ಸುಭಾಷ್ ಶೆಟ್ಟಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ ಸದಸ್ಯ ಪ್ರಕಾಶ ಶಿರಾಲಿ, ಗಜಾನನ ಶೆಟ್ಟಿ, ಎಂ.ಆರ್. ಮುರುಡೇಶ್ವರ,ಉಪನ್ಯಾಸಕ ರಾಜೇಶ ಶೆಟ್ಟಿ, ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Be the first to comment

Leave a Reply

Your email address will not be published.


*