ಬೀಜ ಬಿತ್ತೋಣ ಅರಣ್ಯ ಬೆಳೆಸೋಣ: ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲಾ ಮಕ್ಕಳಿಂದ ಬೀಜ ಬಿತ್ತನೆ ಕಾರ್ಯಕ್ರಮ

ವರದಿ: ಶರಣಪ್ಪ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಹುನಗುಂದ ವಲಯದ ಕೆಲೂರ ಅರಣ್ಯ ವಿಭಾಗ ಹಾಗೂ ಯುಕೊ ಕ್ಲಬ್ ಅಡಿಯಲ್ಲಿ ಬ.ವಿ.ವಿ.ಸಂಘದ ಶ್ರೀ ಗುರು ಮಂಟೇಶ್ವರ ಪ್ರೌಢ ಶಾಲೆಯಲ್ಲಿ ಬೀಜ ಬಿತ್ತನೆ ಕಾರ್ಯಕ್ರಮ ಆಯೋಜನೆ ಮಾಡಿ ಮಕ್ಕಳಲ್ಲಿ ಪ್ರಕೃತಿ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಿ ಶಾಲಾ ಮಕ್ಕಳಿಂದ ಬೀಜ ಬಿತ್ತನೆ ಮಾಡಿ ಬಿತ್ತೋತ್ಸವ ಆಚರಿಸಲಾಯಿತು.

ನಶಿಸುತ್ತಿರುವ ಪರಿಸರ ಸಂರಕ್ಷಣೆ ಆಗಬೇಕಾದರೆ ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಅರಣ್ಯದಲ್ಲಿ ಕೈಗೊಂಡಿರುವ ಬೀಜೋತ್ಸವದ ಮಹತ್ವದ ಕುರಿತು ಮಾಹಿತಿ ನೀಡಿದ ಕೆಲೂರ ಅರಣ್ಯ ವೃತ್ತದ ವನಪಾಲಕರಾದ ವಿನೋಧ ಬೊಂಬಲೆಕರ್ ಪ್ರಸಕ್ತ ಪರಿಸರ ದಿನಾಚರಣೆ ಸಂದರ್ಭದಲ್ಲಿ ಅರಣ್ಯ ಇಲಾಖೆ ಈ ಬಾರಿ ಬೀಜೋತ್ಸವ ಆರಂಭಿಸಿದ್ದು, ಅತ್ಯಮೂಲ್ಯ ಮರಗಳ ಬೀಜ ಸಂಗ್ರಹಿಸಿ, ‘ಬೀಜ ಬಿತ್ತೋಣ, ಅರಣ್ಯ ಬೆಳೆಸೋಣ’ ಎಂಬ ಮಹತ್ವದ ಬೀಜೋತ್ಸವದ ಅಭಿಯಾನ ಆರಂಭಿಸಿದೆ. ಬೀಜೋತ್ಸವ ಕಾರ್ಯಕ್ರಮವು ಈ ಅಭಿಯಾನದಲ್ಲಿ ಶಾಲಾ ಕಾಲೇಜಿನ ಶಿಕ್ಷಕರು,ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ಸಾಧ್ಯವಾದಷ್ಟು ಎಲ್ಲರೂ ಅರಣ್ಯ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

‘ವನ್ಯ ಸಂಪತ್ತು ಹಾಗೂ ಪರಿಸರ ಸಂರಕ್ಷಣೆಗಾಗಿ ಅರಣ್ಯ ಪ್ರದೇಶದಲ್ಲಿ ಹೆಚ್ಚೆಚ್ಚು ಬಿತ್ತನೆ ಬೀಜಗಳನ್ನು ನಾಟಿ ಮಾಡಲಾಗುತ್ತಿದೆ.ಇಂತಹ ಪರಿಸರ ಕಾರ್ಯಕ್ರಮಗಳಿಗೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತಾಗಬೇಕು’ ಈ ಉದ್ದೇಶದಿಂದ ಹೊಂಗೆ,ಕಾಸವಾಡ,ಬೇವು,ಹಲಸು ಹಾಗೂ ಇತರೆ ಬೀಜಗಳನ್ನು ಇಂದು ಬಿತ್ತನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಎಸ್.ಬಿ.ದಾಸರ,  ಶಿಕ್ಷಕರಾದ ಎಸ್.ಬಿ.ಹೆಳವರ, ಎಸ್.ಬಿ. ಯಾವಗಲ್ಲಮಠ, ವಾಯ್.ಎಸ್.ವಾಲಿಕಾರ, ಬಿ.ಹೆಚ್.ನಾಲತವಾಡ,ಬಿ.ಎಸ್.ಕಮತರ,ಕೆ.ಎಸ್.ಬೀಳಗಿ,ಅರಣ್ಯ ರಕ್ಷಕರಾದ ದೇವರಾಜ ನಾಯ್ಕರ,ಶರಣು ಘಟ್ಟಿಗನೂರ ಹಾಗೂ ಅರಣ್ಯ ಸಿಬ್ಬಂದಿಯವರು ಭಾಗವಹಿಸಿದ್ದರು.

Be the first to comment

Leave a Reply

Your email address will not be published.


*