ಜಿಲ್ಲಾ ಸುದ್ದಿಗಳು
ಮಸ್ಕಿ
ಪಟ್ಟಣದ ಗಾಂಧೀ ನಗರದ ಡಾಕ್ಟರ. ಬಿ. ಆರ್ ಅಂಬೇಡ್ಕರ್ ರವರ ಪುತ್ತಳಿಯ ಮುಂಭಾಗದಲ್ಲಿ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಕರ್ನಾಟಕದ ಅಂಬೇಡ್ಕರ್ ಎಂದೇ ಕರೆಯಲ್ಪಡುವ ದಲಿತ ಸಂಘರ್ಷ ಸಮಿತಿಯ ಸ್ಥಾಪಕರಾದ ಪ್ರೊ.ಬಿ. ಕೃಷ್ಣಪ್ಪ ರವರ 84 ನೇ ಜನ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮತ್ತು ಪೂಜೆ ಪುರಸ್ಕಾರ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ
ಪ್ರೊ.ಬಿ.ಕೃಷ್ಣಪ್ಪ ಬೂಸ ಹಗರಣದ ನಂತರ ಶೋಷಿತರಿಗೆ ಪ್ರತ್ಯೇಕ ಸಂಘಟನೆಯ ಅಗತ್ಯವಿದೆ ಎಂದರಿತು ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕಿದರು. ಈ ಸಂಘಟನೆ ಇಂದಿಗೂ ಬಹು ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ತನ್ನ ಹೋರಾಟ ಮುಂದುವರಿಸಿದೆ. ದೂರದೃಷ್ಟಿಯ ಕಲ್ಪನೆ, ಸಮಾಜಮುಖಿ ಆಲೋಚನೆ ಮೈಗೂಡಿಸಿಕೊಂಡಿದ್ದ ಪ್ರೊ.ಬಿ.ಕೃಷ್ಣಪ್ಪ ಅವರು ಶೋಷಿತರ ಶ್ರೇಯಸ್ಸಿಗೆ ಪ್ರತ್ಯೇಕ ಸಂಘಟನೆ ಹುಟ್ಟುಹಾಕಿದ ಸಾಮಾಜಿಕ ಚಿಂತಕ ಎಂದು ಸಾಹಿತಿ ಪ್ರೊ.ಸಣ್ಣರಾಮ ಬಣ್ಣಿಸಿದ್ದನ್ನ ನಾವು ನೋಡಬಹುದು ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಹನುಮಂತಪ್ಪ ವೆಂಕಟಾಪುರ ನೆರೆದ ಜನತೆಗೆ ತಿಳಿಸಿದರು.
ನಂತರ ಕರ್ನಾಟಕದ ಗಾಂಧಿ ಪ್ರೋ. ಬಿ. ಕೃಷ್ಣಪ್ಪ ರವರಿಗೆ ಜಯಕಾರದ ಘೋಷಣೆಯನ್ನು ಕೂಗಿದರು.ಇದೇ ಸಂದರ್ಭದಲ್ಲಿದಾನಪ್ಪ ಸಿ. ನಿಲೋಗಲ್ ಡಾ. ಬಾಬು ಜಗಜೀವನರಾಂ ಪ್ರಶಸ್ತಿ ಪುರಸ್ಕೃತರು, ಶರಣಪ್ಪ ಹಿರಿಯ ಮುಖಂಡರು, ನೀಲಕಂಠಪ್ಪ ಭಜಂತ್ರಿ, ಶ್ರೀಕಾಂತ್ ಮುರಾರಿ, ಮಲ್ಲಯ್ಯ ಬಳ್ಳಾ ದಲಿತ ಮುಖಂಡರು, ಮಲ್ಲಯ್ಯ ಮುರಾರಿ ಪುರಸಭೆ ಸದಸ್ಯರು, ಮೌನೇಶ್ ಬಡಿಗೇರ್ ಸುಲ್ತಾನಪುರ, ಅಶೋಕ ಮುರಾರಿ,ಬಸವರಾಜ ಯು.ಉದ್ಬಾಳ ಕರವೇ ಅಧ್ಯಕ್ಷರು, ದುರ್ಗರಾಜ್ ವಟಗಲ್ ಕರವೇ ಅಧ್ಯಕ್ಷರು,ಹನುಮಂತ ಮೆದಿಕಿನಾಳ, ಮಲ್ಲಿಕ್ ಮುರಾರಿ, ಸೇರಿದಂತೆ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.
Be the first to comment