ಪತ್ರಕರ್ತ ಕಿರಣ್ ಪೂಜಾರಿಯ ವಿರುದ್ಧ ಸುಳ್ಳು ಕೇಸ್ ಹಾಕಿ ಅರೆಸ್ಟ್ ಮಾಡಿಸಿದ ನಕಲಿ ಅಲೋಪತಿ BAMS ವೈದ್ಯ ಚಂದ್ರಶೇಖರ್ ಶೆಟ್ಟಿ ವಿರುದ್ಧ ಜಿಲ್ಲಾಧಿಕಾರಿಯಿಂದ FIR!!!

ವರದಿ:ಅಂಬಿಗ ನ್ಯೂಸ್ ತಂಡ

ಉಡುಪಿ:

ನಕಲಿ ಅಲೋಪತಿ ವೈದ್ಯಕೀಯದ ಬೆನ್ನು ಮುರಿದು ಜನರನ್ನ ನಿಜವಾದ ಆರೋಗ್ಯದ ಕಡೆಗೆ ಕೊಂಡೊಯ್ಯುವ ಹೋರಾಟದ ಮುನ್ನೆಲೆಯಾಗಿ ಹೋದ ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಕಾಳಜಿಯ ಪರ ಹೋರಾಟಗಾರ ಕಿರಣ್ ಪೂಜಾರಿಯವರು ನೀಡಿದ ದಾಖಲೆಯನ್ನು ಪರಿಶೀಲಿಸಿ ನಕಲಿ ಬಿಎಂಎಸ್ ವೈದ್ಯ ಚಂದ್ರಶೇಖರ್ ಶೆಟ್ಟಿಯ ವಿರುದ್ಧ ಜಿಲ್ಲಾ ಆರೋಗ್ಯ ಅಧಿಕಾರಿ ಡಾಕ್ಟರ್ ನಾಗಭೂಷಣ್ ಉಡುಪ ಸಲ್ಲಿಸಿದ ಮಾಹಿತಿಯ ಮೇರೆಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ FIR ದಾಖಲಿಸಿ 5 ಮೆಂಬರ್ ಕಮಿಟಿಯನ್ನು ಮುಂದಿನ ತನಿಖೆಗೆ ನಿಯೋಜಿಸಲಾಗಿದ್ದು ಹಾಗೆಯೇ ಇನ್ನುಳಿದ 10 ನಕಲಿ ಅಲೋಪತಿ ವೈದ್ಯರ ಮೇಲೆ ಇದೇ ರೀತಿಯ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಇನ್ನಾದರೂ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯಾಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ ಇಂತಹ ನಕಲಿ ಅಲೋಪತಿ ವೈದ್ಯರ ವಿರುದ್ಧ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳುವುದೇ ಎನ್ನುವುದು ಸಾರ್ವಜನಿಕರ ಆಶಯ. ಮೂಲಗಳ ಪ್ರಕಾರ ಇನ್ನು ಸರಿಸುಮಾರು 25 ನಕಲಿ ಅಲೋಪತಿ ವೈದ್ಯರ ವಿರುದ್ಧ ಶೀಘ್ರದಲ್ಲೇ ಅಕ್ರಮದ ಬಗ್ಗೆ ದಾಖಲೆಗಳು ಜಿಲ್ಲಾ ಆಡಳಿತದ ಕೈಸೇರಲಿದೆ.

CHETAN KENDULI

ಆದಷ್ಟು ಬೇಗ ಈ ನಕಲಿ ಅಲೋಪತಿ ವೈದ್ಯರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಇವರ ಪರವಾನಿಗೆಯನ್ನು ರದ್ದು ಮಾಡಿ. ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಇಂತಹ ಹೇಯ ಕೃತ್ಯಕ್ಕೆ ಮುಂದಾದ ನಕಲಿ ಅಲೋಪತಿ ವೈದ್ಯರಿಗೆ ಕಠಿಣ ಕಾನೂನು ಕ್ರಮ ಕೈಗೊಂಡು ರಾಜ್ಯಕ್ಕೆ ಮಾದರಿಯಾಗಬೇಕಾಗಿದೆ. ನಿಷ್ಠಾವಂತ ಪತ್ರಕರ್ತರ ಮೇಲೆ ರಾಜಕೀಯ ಪ್ರಭಾವ ಬಳಸಿ ಸುಳ್ಳು ಕೇಸ್ ದಾಖಲಿಸಿ ಮೆರೆದವರ ವಿರುದ್ಧವೇ ಜಿಲ್ಲಾಧಿಕಾರಿ ಕೂರ್ಮಾರಾವ್ FIR ಮಾಡಿ 5 ಮೆಂಬರ್ ತನಿಖೆ ತಂಡವನ್ನು ನೇಮಿಸಿದ್ದು ಶ್ಲಾಘನೀಯ.

ಅಲ್ಲದೇ ಡ್ರಗ್ ಕಂಟ್ರೋಲರ್ (ADC) ಕೆ. ವಿ. ನಾಗರಾಜ್ ತಿಳಿಸಿದಂತೆ ಈಗಾಗಲೇ ನಕಲಿ ಅಲೋಪತಿ ವೈದ್ಯರಿಗೆ ಅಲೋಪತಿ ಔಷಧವನ್ನು ನೀಡುತ್ತಿದ್ದ ಕೆಲವು ಔಷಧಿ ಡಿಸ್ಟ್ರಿಬ್ಯೂಟರ್ ಪರವಾನಿಗೆಯನ್ನು ಅಮಾನತು ಮಾಡಿಲಾಗಿದೆ ಎನ್ನಲಾಗಿದೆ. ಈಗ ನಕಲಿ ಅಲೋಪತಿ ವೈದ್ಯರ ಪಾಡು ಹರೋಹರ. ಇನ್ನಾದರೂ ಜಿಲ್ಲಾಡಳಿತ ಕೂಡಲೇ ಅವರು ಕಲಿತ ವಿದ್ಯೆಯಲ್ಲಿ ಕೆಲಸ ಮಾಡಿಕೊಂಡು ಕೆಪಿಎಂಇ ಆಕ್ಟ್ ಅಡಿಯಲ್ಲಿ ಬರುವ ನಿಯಮಾವಳಿಗಳನ್ನು ಚಾಚುತಪ್ಪದೇ ಪಾಲಿಸಬೇಕೆಂದು ಅಧಿಕೃತವಾಗಿ ಘೋಷಿಸ ಬೇಕೆಂಬುದು ಸಾರ್ವಜನಿಕರ ಅಹವಾಲಾಗಿದೆ.

Be the first to comment

Leave a Reply

Your email address will not be published.


*