ರಾಜ್ಯ ಸುದ್ದಿಗಳು
ಬೆಂಗಳೂರು:ಕರ್ನಾಟಕ ಪ್ರೆಸ್ ಕ್ಲಬ್ ರಾಜ್ಯದಲ್ಲಿ ಸುಮಾರು 3000ಕ್ಕೂ ಹೆಚ್ಚು ಪತ್ರಿಕಾ ಮಾಧ್ಯಮದ ಸದಸ್ಯರನ್ನು ಒಳಗೊಂಡಿದೆ. ಕರೋನಾದಂತಹ ಮಹಾಮಾರಿ ಸಂದರ್ಭದಲ್ಲಿ 30000 ಕ್ಕೂ ಹೆಚ್ಚು ಆಹಾರದ ಕಿಟ್ ಗಳನ್ನು ರಾಜ್ಯದಲ್ಲಿ ಪತ್ರಕರ್ತರಿಗೆ ವಿತರಣೆ ಮಾಡಿ ಅನೇಕ ಸಾಮಾಜಿಕ ಕಾರ್ಯಗಳೊಂದಿಗೆ ಮುನ್ನುಗ್ಗುತಿರುವ ಪತ್ರಿಕಾ ಮಾಧ್ಯಮದ ಸದಸ್ಯರ ಒಂದು ಕುಟುಂಬವಾಗಿದೆ.
ಪ್ರಸ್ತಕ 2022 ನೆ ಸಾಲಿನ ರಾಜ್ಯ ಪದಾಧಿಕಾರಿಗಳ ಆಯ್ಕೆಯನ್ನು ಇತ್ತೀಚಿಗೆ ಬೆಂಗಳೂರಿನ ಪ್ರಧಾನ ಕಚೇರಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ . 2022 ನೇ ಸಾಲಿನ ರಾಜ್ಯ ಸಲಹಾ ಸಮಿತಿಯ ಗೌರವಾಧ್ಯಕ್ಷರಾಗಿ ಡಾ. ಎ.ಡಿ ಕೋಟ್ನಾಳ , ಸಲಹಾ ಸಮಿತಿಯ ರಾಜ್ಯ ಅಧ್ಯಕ್ಷರಾಗಿ ಡಾ. ಎಸ್.ಎಸ್ ಪಾಟೀಲ್, ಸಮಿತಿಯ ಗೌರವಾದ್ಯಕ್ಷರಾಗಿ ಎ.ತಿಪ್ಪೇಸ್ವಾಮಿ, ರಾಜ್ಯ ಅಧ್ಯಕ್ಷರಾಗಿ ಎಚ್.ಜಿ.ರಮೇಶ್, ಕಾರ್ಯಾಧ್ಯಕ್ಷರಾಗಿ ಬಿ.ಖಜಾಹುಸೇನ್ ಮತ್ತು ಯಲ್ಲಪ್ಪ ಕಟ್ಟಿಕಾರ,ರಾಜ್ಯ ಉಪಾಧ್ಯಕ್ಷರಾಗಿ ಕೆ.ಎಂ.ಶಿವುಸ್ವಾಮಿ,ಯುವರಾಜ್,ಶ್ವೇತಾ ನಾಗರಾಜ್,ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಎಂ,ಕೋಶಾಧ್ಯಕ್ಷರಾಗಿ ನಾಗರಾಜ್ ಪಟ್ಟಮದ್,ಸಂಘಟನಾ ಕಾರ್ಯದರ್ಶಿ ಆಗಿ ಕೆ.ಟಿ.ಮೋಹನ್,ಮೋಹನ ಕುಮಾರ, ಕಾರ್ಯದರ್ಶಿಯಾಗಿ ಗಂಗಾಧರ,ರಾಜ್ಯ ಕಾರ್ಯಕಾರಿ ಸಮಿತಿ ನಿರ್ದೇಶಕರಾಗಿ ಕುಮಾರ್ ನಾಯ್ಕ ಭಟ್ಕಳ, ನಾಗತಿಹಳ್ಳಿ , ಎಂ. ಅಶೋಕ್ , ಉಮೇಶ್ ಎಂ.ಕೆ,ಸುಭಾಶ್ಚಂದ್ರ ಹಾವೇರಿ, ಸಲಹಾ ಸಮಿತಿ ಕಾರ್ಯದರ್ಶಿಯಾಗಿ ಎಸ್.ಎಂ. ಬಸವರಾಜು,ಸಲಹಾ ಸಮಿತಿ ಸದಸ್ಯರಾಗಿ ಡಿ.ಅಬ್ದುಲ್.ರಪಿ, ಎಚ್.ಬಿ.ಚೌದರಿ, ಎಂ ಸುರೇಶ್ ಆಯ್ಕೆ ಆಗಿದ್ದಾರೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ದಯಾನಂದ ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment