ಉತ್ತರ ಕನ್ನಡ ಜಿಲ್ಲೆಯ ಶಿರಸಿ ಗ್ರಾಮೀಣ ಪೊಲೀಸರ ಕಾರ್ಯಾಚರಣೆ..ಅಡಿಕೆ ಕಳ್ಳನ ಬಂಧನ. ಸುಮಾರು 12 ಕ್ವಿಂಟಲ್ ಚಾಲಿ ಅಡಿಕೆಯ ಜಪ್ತು, ಕೃತ್ಯಕ್ಕೆ ಉಪಯೋಗಿಸಿದ ಪ್ಯಾಸೆಂಜರ್ ಆಟೋ ರಿಕ್ಷಾ ವಶಕ್ಕೆ..

ವರದಿ:ಕುಮಾರ ನಾಯ್ಕ

ಶಿರಸಿ

CHETAN KENDULI

ದಿನಾಂಕ 23.5. 2022 ರಂದು ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯ ಹುಲೇಕಲ್ ಗ್ರಾಮದಲ್ಲಿ ಯಾರೋ ಕಳ್ಳರು ಪಿರ್ಯಾದಿ ಮಂಜುನಾಥ ತಂದೆ ಬಸಪ್ಪ ಗೌಡರ್ ಪ್ರಾಯ 59 ವರ್ಷ ಕೃಷಿ ಕೆಲಸ ಕೊಟ್ಟಿಗೆಮನೆ, ಗ್ರಾಮ ಹುಲೇಕಲ್ ವಾಸಿಯ ವಾಸದ ಮನೆಯ ಪಕ್ಕದ ಕೊಟ್ಟಿಗೆ ಮನೆಯಲ್ಲಿ ಸಂಗ್ರಹಿಸಿಟ್ಟ ಸುಮಾರು 12 ಕ್ವಿಂಟಲ್ ಸಿಪ್ಪೆ ಚಾಲಿ ಅಡಿಕೆ ಹಾಗೂ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 1ಕ್ವಿಂಟಲ್ ಕೆಂಪಡಿಕೆ ಹೀಗೆ ಒಟ್ಟು ₹ 4,60,000 ಮೌಲ್ಯದ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ನೀಡಿದ ದೂರನ್ನು PSI ಶ್ಯಾಮ್ ವಿ. ಪಾವಸ್ಕರ್ ರವರು ಕೇಸು ದಾಖಲಿಸಿ ಕೊಂಡಿದ್ದು, ತನಿಖೆ ಮುಂದುವರಿದಿರುತ್ತದೆ.

ಈ ದಿನ ದಿನಾಂಕ 24.5.2022 ರಂದು ಸದರಿ ಪ್ರಕರಣದ ಎರಡನೇ ಆರೋಪಿ ರಾಘವೇಂದ್ರ ಪರಮಾನಂದ ಶಿರಹಟ್ಟಿ,ಪ್ರಾಯ 33 ವರ್ಷ, ಆಟೋರಿಕ್ಷಾ ಚಾಲಕ,ಎಸಳೆ, ಶಿರಸಿ ಈತನನ್ನು ದಸ್ತಗಿರಿ ಮಾಡಿ, ಈತನಿಂದ ಕಳ್ಳತನವಾಗಿದ್ದ ಸುಮಾರು 12 ಕ್ವಿಂಟಲ್ ಸಿಪ್ಪೆ ಚಾಲಿ ಅಡಿಕೆ ಯನ್ನು ಹಾಗೂ ಕೃತ್ಯಕ್ಕೆ ಬಳಸಿದ ಪ್ಯಾಸೆಂಜರ್ ಆಟೋ ರಿಕ್ಷಾವನ್ನು ಜಪ್ತು ಪಡಿಸಿಕೊಳ್ಳಲಾಗಿರುತ್ತದೆ..

  ಸದರಿ ಕೇಸಿನ 1 ನೇ ಆರೋಪಿ  ತಲೆಮಾರೆಸಿಕೊಡಿರುತ್ತಾನೆ…

ಈ ಕಾರ್ಯಾಚರಣೆಯು ಮಾನ್ಯ ಡಾ. ಶ್ರೀಮತಿ ಸುಮನ್ ಡಿ. ಪೆನ್ನೇಕರ್, ಪೊಲೀಸ್ ಅಧೀಕ್ಷಕರು ಉತ್ತರಕನ್ನಡ ಜಿಲ್ಲೆ, ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಬದರಿನಾಥ್ ಎಸ್, ಮಾನ್ಯ ಪೊಲೀಸ್ ಉಪಾಧೀಕ್ಷಕರುಗಳಾದ ಶ್ರೀ ರವಿ ಡಿ. ನಾಯ್ಕ್, ಶ್ರೀ ಕೆ. ಎಲ್.ಗಣೇಶ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ರಾಮಚಂದ್ರ ನಾಯಕ, ಪೊಲೀಸ್ ವೃತ್ತ ನಿರೀಕ್ಷಕರು, ಶಿರಸಿ ರವರ ನೇತೃತ್ವದಲ್ಲಿ ಶಿರಸಿ ಗ್ರಾಮೀಣ ಠಾಣೆಯ ಪಿಎಸ್ಐ ರವರು ಗಳಾದ ಶ್ರೀ ಈರಯ್ಯ ಡಿ. ಯೆನ್, PSI ಶ್ರೀ ಶ್ಯಾಮ್ ವಿ ಪಾವಸ್ಕರ್, ಪ್ರೊಬೆಷನರಿ ಪಿಎಸ್ಐ ದೇವೇಂದ್ರ ನಾಯ್ಕ್ ಗ್ರಾಮೀಣ ಠಾಣಾ ಸಿಬ್ಬಂದಿಗಳಾದ ಚೇತನ, ಗಣಪತಿ, ಮಾದೇವ, ಸುರೇಶ, ಕುಬೇರಪ್ಪ, ಪ್ರದೀಪ್ , ಶ್ರೀಧರ್, ಪಾಂಡು, ರಾವ್ ಸಾಹೇಬ್ ಕಿತ್ತೂರು, ಜಾವೀದ್, ಸಂತೋಷ್, ರಾಮದೇವ್ ರವರುಗಳು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*