ಭಟ್ಕಳ:
ತಾಲೂಕಿನ ಮುಟ್ಟಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ತಲಾಂದ ಗ್ರಾಮದ ಮಾಲ್ಕಿ ಜಮೀನಿನ ಗುಡ್ಡವೊಂದರಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾದ ಘಟನೆ ನಡೆದಿದೆ. ಯಾರೋ ದುಷ್ಕರ್ಮಿಗಳು ಈ ಮಹಿಳೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಸಂದೇಹ ವ್ಯಕ್ತವಾಗಿದೆ. ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆ ಇಂದ ತಿಳಿದು ಬರಬೇಕಾಗಿದೆ.
ಮೃತ ದೇಹ ಕೊಳೆತ ಸ್ಥಿತಿಯಲ್ಲಿದ್ದು ಗುರುತು ಮತ್ತೆ ಹಚ್ಚದ ಸ್ಥಿತಿಯಲ್ಲಿದ್ದೆ. ಮೃತ ಮಹಿಳೆ ಅಂದಾಜು 30 ರಿಂದ 40 ವರ್ಷ ಎಂದು ಅಂದಾಜಿಸಲಾಗಿದೆ. ಅಲ್ಲಿನ ಸ್ಥಳೀಯರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ, ಸಿ.ಪಿ.ಐ ಮಾಹಾಬಲೇಶ್ವರ ನಾಯ್ಕ, ಪಿ.ಎಸ್.ಐ ಗಳಾದ ರತ್ನ ಕೆ ಹಾಗೂ ಸುಮಾ ಆಚಾರ್ಯ ಭೇಟಿ ನೀಡಿ ಪರಿಶೀಲಿಸಿ ಮೃತ ಮಹಿಳೆಯ ಮೃತ ದೇಹವವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದು . ಪೊಲೀಸ ತನಿಖೆ ಚುರುಕುಗೊಂಡಿದೆ.
ಮೇಲ್ನೋಟಕ್ಕೆ ಶನಿವಾರ ಸಂಜೆ ಗುಳ್ಮಿ ಕ್ರಾಸನಲ್ಲಿರುವ ಅಂಗಡಿ ಸಮೀಪ ಈ ಮಹಿಳೆಯನ್ನು ವ್ಯಕ್ತಿಯೋರ್ವ ಬೈಕ್ ನಲ್ಲಿ ಕರೆದುಕೊಂಡು ಬಂದು ಅಲ್ಲಿಂದ ತಲಾಂದ ಗ್ರಾಮದ ನಿರ್ಜನ ಪ್ರದೇಶಕ್ಕೆ ಆಟೋ ಒಂದರಲ್ಲಿ ಕರೆದುಕೊಂಡು ಹೋಗಿ ಬಿಟ್ಟಿರುವ ಬಗ್ಗೆ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎಂದು ಸಾರ್ವಜನಿಕರು ಪಟ್ಟಣದ ತುಂಬೆಲ್ಲಾ ಮಾತನಾಡಿಕೊಳ್ಳಿತಿದ್ದಾರೆ.
Be the first to comment