ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ಬಳಿಯ ಬೀದರ ಶ್ರೀರಂಗಪಟ್ಟಣ ಹೆದ್ದಾರಿ ಹೈವೇ ಗಸ್ತು ಪೊಲೀಸರು ಆಡಿದ್ದೇ ಆಟ, ವಸೂಲಿ ಮಾಡಿದಷ್ಟೂ ಕಾಸೋ ಕಾಸು ಎಬಂತಾಗಿದೆ ಅವರ ವಸೂಲಿ ದಂಧೆ! ವಾಹನ ತಪಾಸಣೆ ನೆಪದಲ್ಲಿ ವಸೂಲಿಗಿಳಿದ ಹೈವೇ ಗಸ್ತು ಪೊಲೀಸರು ಪ್ರತಿ ವಾಹನದಿಂದ ತಲಾ 500 ರೂಪಾಯಿ ಪಡೆದು ರಶೀದಿ ನೀಡದೆ, ಅತ್ತ ಇಲಾಖೆಗೂ ವಂಚಿಸುತ್ತಿದ್ದಾರೆ ಈ ಹೆದ್ದಾರಿ ಪೊಲೀಸರು.
ದ್ವಿಚಕ್ರ ವಾಹನ, ಟ್ರ್ಯಾಕ್ಟರ್, ಗೂಡ್ಸ್ ವಾಹನ ತಡೆದು ಹಗಲು ದರೋಡೆಗೆ ಇಳಿದಿದ್ದಾರೆ. ಕೇಸ್ ಹಾಕದೆ, ರಶೀದಿಯನ್ನೂ ನೀಡದೆ ಪೊಲೀಸರ ಈ ಹಗಲು ದರೋಡೆಯಿಂದ ಬಸವಳಿದಿದ್ದೇವೆ ಎಂದು ವಾಹನ ಮಾಲೀಕರು ಬಿರುಬಿಸಿಲಿನಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ.
ವಾಹನ ಮಾಲೀಕರು ಸುರಪುರ ಹೈವೇ ಪೆಟ್ರೋಲಿಂಗ್ ಪೊಲೀಸರ ಹಗಲು ದರೋಡೆಯನ್ನು ವಿಡಿಯೋ ಮಾಡಿ ಹಲವು ಸಲ ಸೋಷಲ್ ಮಿಡೀಯಾಗಳಲ್ಲಿ ಹರಿ ಬಿಟ್ಟಿದ್ದಾರೆ. ಹೈವೆ ಪೆಟ್ರೋಲಿಂಗ ಪೊಲೀಸರ ಅಸಲಿಯತ್ತು ಜಗಜ್ಜಾಹೀರಾಗಿದೆ. ಇದು ಒಂದು ದಿನ ಕತೆಯಲ್ಲ. ವಾಹನ ತಪಾಸಣೆ ನೆಪದಲ್ಲಿ ಪ್ರತಿನಿತ್ಯವೂ ಸವಾರರಿಗೆ ಪೊಲೀಸರು ಕಿರಿಕಿರಿ ಕೊಡ್ತಿದ್ದಾರೆ. ಸುರಪುರ ಹೈವೈ ಪೆಟ್ರೋಲಿಂಗ್ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇನ್ನಾದರೂ ಹಗಲು ದರೋಡೆಗೆ ಸುರಪುರದ ಜನ ಪ್ರತಿನಿದಿಗಳು ಮತ್ತು ಶಾಸಕರು ಬ್ರೇಕ್ ಹಾಕಿ, ಹೆದ್ದಾರಿ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ವಾಹನ ಮಾಲೀಕರು ಒತ್ತಾಯ ಮಾಡುತ್ತಿದ್ದಾರೆ.
Be the first to comment