ವಿಡಿಯೋ ಸರ್ವೆಲನ್ಸ್ ತಂಡ ರಚನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಕರ್ನಾಟಕ ವಿಧಾನ ಪರಿಷತ್ತಿನ ವಾಯುವ್ಯ ಶಿಕ್ಷಕರ ಮತ್ತು ಪದವೀಧರ ಮತಕ್ಷೇತ್ರದ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲೆಯ 9 ತಾಲೂಕುಗಳಲ್ಲಿ ವಿಡಿಯೋ ಸರ್ವೆಲೆನ್ಸ್ ತಂಡಗಳನ್ನು ರಚನೆ ಮಾಡಿ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಟಿ.ಭೂಬಾಲನ್ ಆದೇಶ ಹೊರಡಿಸಿದ್ದಾರೆ.


ಬಾಗಲಕೋಟೆ ತಾಲೂಕಿಗೆ ಕೃಷಿ ಸಹಾಯಕ ನಿರ್ದೇಶಕ ಪಾಂಡಪ್ಪ ಲಮಾಣಿ (9448339627), ಪಂಚಾಯತ ರಾಜ್ ಇಂಜಿನೀಯರ್ ವಿಭಾಗದ ಎಸ್‍ಡಿಎ ಸಂತೋಷ ನಿಡುಗುತ್ತಿ (8861559767), ಬಾದಾಮಿ ತಾಲೂಕಿಗೆ ಎಪಿಎಂಸಿ ಕಾರ್ಯದರ್ಶಿ ರವಿ ರಾಠೋಡ (9164794469), ಟಿ.ಎಂಸಿ ಕಚೇರಿ ವ್ಯವಸ್ಥಾಪಕ ಎ.ಎಚ್.ಮುದ್ದೇಬಿಹಾಳ (9845518256), ಹುನಗುಂದ ತಾಲೂಕಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಂ.ಖ್ಯಾಡಿ (9480695003), ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಎಫ್‍ಡಿಎ ಡಿ.ಜಿ.ನ್ಯಾಯಕೋಡಿ (9901179505), ಇಲಕಲ್ಲ ತಾಲೂಕಿಗೆ ನಗರಸಭೆ ಓಎಂ ಎನ್.ಎಂ.ಕಂದಗಲ್ಲ (9380338028), ನಗರಸಭೆ ಎಸ್‍ಡಿಎ ವಿನಾಯಕ ಮುದಗಲ್ಲ (9108259361).

ಗುಳೇದಗುಡ್ಡ ತಾಲೂಕಿಗೆ ಟಿಎಂಸಿ ಮುಖ್ಯಾಧಿಕಾರಿ ಎಫ್.ಎನ್.ಹುಲ್ಲಿಕೇರಿ (9986520829), ಟಿಎಂಸಿ ಆರ್‍ಓ ಬಸವರಾಜ ಬಲಗನ್ನವರ (9886424360),ಜಮಖಂಡಿ ತಾಲೂಕಿಗೆ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಬುಜರುಕ (8277933572), ಪಿ.ಆರ್.ಇ.ಡಿ ಎಸ್.ಡಿ.ಎ ಮಹಾದೇವ ಪಾಟೀಲ (7892272190), ಮುಧೋಳ ತಾಲೂಕಿಗೆ ಸಿಎಂಸಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಬಿ.ಪಾಟೀಲ (9591716956),ಸಿಎಂಸಿ ಹಿರಿಯ ಎಸ್‍ಐ ಎಸ್.ಎಚ್.ಬೆಳ್ಳಿಕಾಟಿ (7899381666), ಬೀಳಗಿ ತಾಲೂಕಿಗೆ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಐ.ಕೆ.ಗುಡದಾರಿ (9448672281), ಲೋಕೋಪಯೋಗಿ ಇಲಾಖೆಯ ಎಸ್‍ಡಿಎ ಸಂತೋಷ ಹಿಪ್ಪರಗಿ (9845068356), ರಬಕವಿ-ಬನಹಟ್ಟಿ ತಾಲೂಕಿಗೆ ಸಿಎಂಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಆರ್.ಆರ್.ಕುಲಕರ್ಣಿ (9448853102), ಸಿಎಂಸಿ ಎಸ್‍ಡಿಎ ಬಿ.ಎಸ್.ಹೊಸೂರ (9741329055), ಗ್ರಾ.ಪಂ ಪಿಡಿಓ ವಿ.ಆರ್.ಅಮೀನಗಡ (9663390202) ಅವರನ್ನು ನೇಮಕ ಮಾಡಲಾಗಿದೆ.

Be the first to comment

Leave a Reply

Your email address will not be published.


*