ಸಮುದಾಯದ ಸಹಭಾಗಿತ್ವದೊಂದಿಗೆ ಶಾಲೆಯ ಸಂಪೂರ್ಣ ಸ್ವಚ್ಚತಾ ಕಾರ್ಯ ಕೈಗೊಂಡಿದ್ದು ಪ್ರಶಂಸನೀಯ-ಬೆಳ್ಳೆನವರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ ಸರ್ವ ವಿಜಯ ಸೇವಾ ಸಂಸ್ಥೆ,ಗ್ರಾಮ‌ ಪಂಚಾಯತಿ ಬಲಕುಂದಿ ಹಾಗೂ ಶಾಲೆಯ ಸಿಬ್ಬಂದಿ ಬಳಗದ ಸಹಯೋಗದೊಂದಿಗೆ ಶಾಲಾ ಸ್ವಚ್ಚತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಬಾಗಲಕೋಟೆ:ಇಳಕಲ್ಲ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾದಲ್ಲಿ ಸ್ವಚ್ವತಾ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಶ್ರಮದಾನದಲ್ಲಿ ಭಾಗವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಹಾದೇವ ಜಿ ಬೆಳ್ಳೆನವರ ಸರ್ವ ವಿಜಯ ಸೇವಾ ಸಂಸ್ಥೆ, ಗ್ರಾಮ ಪಂಚಾಯತಿ ಬಲಕುಂದಿ ಹಾಗೂ ಶಾಲಾ ಸಿಬ್ಬಂದಿ ಸಮುದಾಯದ ಸಹಭಾಗಿತ್ವದೊಂದಿಗೆ ಶಾಲಾ ಸ್ವಚ್ಚತಾ ಕಾರ್ಯದಲ್ಲಿ ಪಾಲ್ಗೊಂಡು, ಶಾಲಾ ಸ್ವಚ್ಚತಾ ಕಾರ್ಯ ಮಾಡಿದ್ದು ಮಾದರಿ ಹಾಗೂ ಪ್ರಶಂಸನೀಯ ಕಾರ್ಯ ಎಂದು ಹೇಳಿದರು.ಕರೋನಾದ ಕಲಿಕಾ ಕೊರತೆಯನ್ನು ನೀಗಿಸಲು ಕಲಿಕಾ ಚೇತರಿಕೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು ಯಶಸ್ವಿಗೊಳಿಸಲು‌ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ, ಇಳಕಲ್ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ ಶಾಲೆಗಳು ನಾಳೆಯಿಂದ ಪ್ರಾರಂಭವಾಗುತ್ತಿದ್ದು ಶಾಲೆಯ ಶ್ರಮದಾನಕ್ಕಾಗಿ ಕೈಜೋಡಿಸಿದ ಸರ್ವ ವಿಜಯ ಸೇವಾ ಸಂಸ್ಥೆಯ ಪದಾಧಿಕಾರಿಗಳಿಗೆ, ಗ್ರಾಮ‌ ಪಂಚಾಯತಿ ಸರ್ವ ಸದಸ್ಯರಿಗೆ, ಯುವಕರಿಗೆ,ತಾಯಂದಿರಿಗೆ ಶಾಲೆಯ ವತಿಯಿಂದ ಧನ್ಯವಾದ ತಿಳಿಸಿದರು.

ಸರ್ವ ವಿಜಯ ಸೇವಾ ಸಂಸ್ಥೆಯ ನೂತನ ಘಟಕವನ್ನು ಇದೇ ಸಂದರ್ಭದಲ್ಲಿ ಬಲಕುಂದಿ ತಾಂಡಾ ದಲ್ಲಿ ಶ್ರಮದಾನ ಮಾಡುವುದರೊಂದಿಗೆ ಉದ್ಘಾಟಿಸಲಾಯಿತು.ಸರ್ವ ವಿಜಯ ಸೇವಾ ಸಂಸ್ಥೆಯ ಹನುಮಂತ ಚುಂಚಾ ಮಾತನಾಡಿ ಶಾಲಾ ಪರಿಸರವನ್ನು ಸ್ವಚ್ಛವಾಗಿಡಲು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳಾದ ಬಾಲರೆಡ್ಡಿ,ಎಂ ಎಸ್ ಗೌಡರ,ಗ್ರಾಮ‌ ಪಂಚಾಯತಿ ಕಾರ್ಯದರ್ಶಿ ಜೆ ಬಿ ಮೆಳ್ಳಿ ಗ್ರಾಮ‌ಪಂಚಾಯತಿ ಸದಸ್ಯರಾದ ದೊಡ್ಡಪ್ಪ ಕಾರಭಾರಿ,ಶ್ರೀನಿವಾಸ ರಾಠೋಡ,ರಮೇಶ ಜಾಧವ,ವಿಜಯಮಹಾಂತೇಶ ರಾಠೋಡ,ನೀಲವ್ವ ಮೆಣಸಗೇರಿ,ಗಾಯತ್ರಿ ಪವಾರ,ಮಂಜುಳಾ ರಾಠೋಡ,ಯಲ್ಲಾಲಿಂಗ ಮಾಗಿ,ಸಂತೋಷ ಗೌಡರ,ನಾಗರಾಜ‌ ಪವಾರ,ಶ್ರೀನಿವಾಸ ಜಾಧವ, ಶಾಲೆಯ ಸಿಬ್ಬಂದಿಗಳಾದ ಎಂ ಎಸ್ ಬೀಳಗಿ,ಎ ಡಿ ಬಾಗವಾನ,ಶ್ರೀಮತಿ ಜಿ‌ ಕೆ‌ ಮಠ, ಶ್ರೀಮತಿ ಎಂ ಪಿ ಚೇಗೂರ, ಶ್ರೀಮತಿ ಎಂ ಎನ್ ಅರಳಿಕಟ್ಟಿ,ಶ್ರೀಮತಿ ಆರ್ ಎಸ್ ಕೊಡಗಲಿ, ಶ್ರೀಮತಿ ಎಸ್ ಎಲ್ ಜೋಗಿನ,ಶ್ರೀಮತಿ ಪಿ ಎಸ್ ಹೊಸೂರ, ಶ್ರೀಮತಿಎಸ್ ಎಂ‌ ಮಲಗಿಹಾಳ ಹಾಗೂ ಶ್ರಮದಾನಕ್ಕಾಗಿ ಊರಿನ ಯುವಕರು, ಮಹಿಳೆಯರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*