ಯಡ್ರಾಮಿ :- ಶಾಸಕರಾದ ಡಾ. ಅಜಯ್ ಸಿಂಗ್ ಅವರು ಮಳ್ಳಿ ಹಾಗೂ ಬಿರಾಳ ಗ್ರಾಮ ವ್ಯಾಪ್ತಿಗೆ ಬರುವ ವಿವಿಧ ಕಾಮಗಾರಿಗಳಿಗೆ ಚಾಲನೆ ಗೊಳಿಸಿ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರ ಕುಂದುಕೊರತೆಗಳ ಅಹವಾಲು ಸ್ವೀಕಾರ ಮಾಡಿದರು ಹಾಗೂ ಸ್ಥಳದಲ್ಲೇ ಪರಿಹಾರ ಕೊಡುವ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಫೋನಿನಲ್ಲಿ ಮಾತನಾಡಿ ಸ್ಥಳದಲ್ಲಿ ಪರಿಹಾರ ನೀಡಿದರು ಇದೇ ವೇಳೆ ಮಾತನಾಡಿದ ಡಾ. ಅಜಯ್ ಸಿಂಗ್ ಅವರು ರಾಜ್ಯದ ಮುಖ್ಯಮಂತ್ರಿ ಅವರು ಈ ಭಾಗಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಲ್ಲಾ ಅನುದಾನದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಯಾವುದೇ ಪ್ರಗತಿ ಕಾರ್ಯದಲ್ಲಿ ಅವರು ಸಹಕಾರ ನೀಡುತ್ತಿಲ್ಲ.
ವಿಪರ್ಯಾಸದ ಸಂಗತಿ ಏನೆಂದರೆ ಶಾಸಕರ ಅನುದಾನವನ್ನು ಸ್ಥಗಿತಗೊಳಿಸಿದ್ದಾರೆ. ಹೇಗೆ ನಾವು ಅಭಿವೃದ್ಧಿ ಕಾರ್ಯಗಳು ಮಾಡಲು ಆಗ್ತಾ ಇಲ್ಲ.
ಬಿಜೆಪಿ ಸರ್ಕಾರ ಬಂದು 4 ವರ್ಷ ಪೂರ್ಣಗೊಳಿಸಿದೆ ಆದರೆ ಅವರ ಅಭಿವೃದ್ಧಿಕಾರ್ಯಗಳನ್ನು ಯಾವುದೇ ರೀತಿ ಮಾಡಿಲ್ಲ ಜಾತಿ ಜಾತಿಗಳ ಮಧ್ಯೆ ವೈಷಮ್ಯವನ್ನು ಹುಟ್ಟಿಸುವಂತ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಷ ವ್ಯಕ್ತಪಡಿಸಿದರು.
ಈ ಸಂದರ್ಬ ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಮಲ್ಲನಗೌಡ ಪಾಟೀಲ್, ಯುವ ಕಾಂಗ್ರೆಸ್ ಮೋರ್ಚಾದ ತಾಲೂಕ ಅಧ್ಯಕ್ಷರು ಸಂತೋಷ್ ಯಾದಗಿರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಬಸನಗೌಡ ಮಾಲಿಪಾಟೀಲ್ ಹಾಗೂ ಕಾಂಗ್ರೆಸ್ ಮುಖಂಡರಾದ ದಯಾನಂದ್ ಚಿಕ್ಕಮಠ್, ಹಳ್ಳೆಪ್ಪ ನಾಟಿಕರ್, ಹಾಗೂ ಗ್ರಾಮದ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು
Be the first to comment