ಬಿರುಗಾಳಿ ಸಹಿತ ಮಳೆ:ಗಾಳಿಯ ರಭಸಕ್ಕೆ ಹಾರಿಹೋದ ಶೆಡ್ ಗಳ ಮೇಲ್ಚಾವಣಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಮೊದಲೇ ತೀವ್ರ ಸಂಕಷ್ಟ ಎದುರಿಸುತ್ತಿದ್ದ ಜನರೆಲ್ಲಾ ಇದೀಗ ಮತ್ತೇ ಮಳೆ ಅವಾಂತರದಿಂದ ಕಂಗೆಡುವಂತಾಗಿದೆ.

ಬಾಗಲಕೋಟೆ:ಜಿಲ್ಲೆಯಾದ್ಯಂತ ಅಲ್ಲಲ್ಲಿ ಅಕಾಲಿಕವಾಗಿ ಮಳೆ ಸುರಿಯುತ್ತಿರೋ ಹಿನ್ನೆಲೆಯಲ್ಲಿ ಕೆಲವಡೆ ಗುಡುಗು ಮಿಂಚು ಸಹಿತ ರಭಸದ ಗಾಳಿಯೊಂದಿಗೆ ಬಿರುಸಿನ ಮಳೆಯಾಗಿದ್ದು, ಇದರಿಂದ ಹಲವು ಮನೆಗಳ ಪತ್ರಾಸ ಹಾರಿ ಹೋಗಿದ್ದರೆ ಇನ್ನೊಂದೆಡೆ ಬಹುತೇಕ ಹೊಲ-ಗದ್ದೆಗಳಲ್ಲಿನ ಬೆಳೆಗಳೆಲ್ಲಾ ಹಾನಿಯಾಗಿದೆ.

ಬಿರುಗಾಳಿ ಸಮೇತ ಭಾರಿ ಮಳೆ‌ ಆಗಿದ್ದರಿಂದ ಬಾಗಲಕೋಟೆ ‌ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಸಾಕಷ್ಟು ಹಾನಿ ಉಂಟಾಗಿದೆ. ಮಳೆ ಅವಾಂತರ ದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ತಡರಾತ್ರಿ ಸುರಿದ ಗಾಳಿ ಮಳೆಗೆ ಯಿಂದಾಗಿ ತಗಡಿನ ಶೆಡ್ ಗಳು ಹಾರಿ ಹೋಗಿವೆ. ಬೀಳಗಿ ತಾಲೂಕು ಹಳೆ‌ಕೊರ್ತಿ ಗ್ರಾಮದಲ್ಲಿ ಈ ಘಟನೆ ‌ನಡೆದಿದೆ.

 

ಬಿರುಗಾಳಿ ಸಹಿತ ಮಳೆ ಆಗಿದ್ದರಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ತಗಡಿನ ಶೆಡ್ ದಲ್ಲಿ ಮಕ್ಕಳು-ಮರಿಗಳೊಂದಿಗೆ ವಾಸ ಇದ್ದ ಕುಟುಂಬದವರು ಭಯ‌ಭೀತರಾಗಿ ಶಾಲೆ ಹಾಗೂ ದೇವಾಲಯ ಬಳಿ ಹೋಗಿ ರಕ್ಷಣೆ ಮಾಡಿಕೊಂಡಿದ್ದಾರೆ. ಬಸವೇಶ್ವರ ದೇವಸ್ಥಾನದ ಮೇಲ್ಚಾವಣಿ ಸೇರಿದಂತೆ 30ಕ್ಕೂ ಹೆಚ್ಚು ಶೆಡ್‌ಗಳು ಹಾನಿಯಾಗಿದೆ. ಇದರಿಂದ ಶೆಡ್ನಲ್ಲಿ ವಾಸ ಮಾಡುತ್ತಿರುವವರು ಬೀದಿ ಪಾಲಾಗಿದ್ದಾರೆ. ಗಾಳಿಯ ರಭಸಕ್ಕೆ ಶೆಡ್‌ಗಳು ನೂರಾರು ಮೀಟರ್‌ ದೂರಕ್ಕೆ ಮೇಲ್ಛಾವಣಿ ಶೀಟ್ ಗಳು ಹಾರಿ ಹೋಗಿವೆ. ಸುದೈವವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Be the first to comment

Leave a Reply

Your email address will not be published.


*