ಅಣ್ಣಂದಿರಿಂದಲೆ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಅವರೆಲ್ಲಾ ಒಂದೇ ತಾಯಿ ಮಕ್ಕಳು, ಅವರಲ್ಲಿ ಮಗಳು ತಮ್ಮ ತಂದೆಯನ್ನು ಜೋಪಾನ ಮಾಡಿಕೊಂಡು ಹೊರಟಿದ್ದಳು, ಆದ್ರೆ ಆಕೆಯ ಅಣ್ಣಂದಿರು ಮಾತ್ರ ತಮ್ಮ ಪಾಲಿಗೆ ಬರಬೇಕಾಗಿದ್ದ ಆಸ್ತಿ ವಿಚಾರವಾಗಿ ಆಗಾಗ ಗಲಾಟೆ ಮಾಡ್ತಿದ್ರು.ಆದ್ರೆ ಇದು ಬಗೆಹರಿಯದೇ ಹೋದಾಗ ಕೊನೆಗೆ ತಂಗಿಯ ಮೇಲೆ ಸ್ವಂತ ಅಣ್ಣಂದಿರೇ ಮಾರಣಾಂತಿಕ ಹಲ್ಲೆ ನಡೆಸಿದ್ರು. ಆಸ್ತಿಗಾಗಿ ಒಡಹುಟ್ಟಿದ ತಂಗಿಯ ಮೇಲೆ ಇಂತಹವೊಂದು ದಾಳಿ ನಡೆದಿತ್ತು.

ಬಾಗಲಕೋಟೆ : ಜಿಲ್ಲೆಯ ಅಮೀನಗಡ ಪಟ್ಟಣದ ಹಿರೇಮಠ ಎಂಬುವವರ ಕುಟುಂಬಕ್ಕೆ ಸೇರಿದ ಮನೆತನದಲ್ಲಿ ಆಸ್ತಿಗಾಗಿ ಸ್ವಂತ ಒಡಹುಟ್ಟಿದ ಅಣ್ಣಂದಿರಿಂದಲೇ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಮಹಿಳೆಯೊಬ್ಬಳು ರಕ್ತದ ಮಡುವಿನಲ್ಲಿ ಗೋಳಾಡುತ್ತಾ ಅಂಬುಲೆನ್ಸ್​ ಮೂಲಕ ಆಸ್ಪತ್ರೆಗೆ ಸೇರಿಸಿರುವ ಘಟನೆ ನಡೆದಿತ್ತು.

ಅಡಿವೆಯ್ಯ ಹಿರೇಮಠ ಎಂಬುವವರ ಮಕ್ಕಳಾದ ಕುಮಾರಸ್ವಾಮಿ ಮತ್ತು ಚಂದ್ರಶೇಖರಯ್ಯ ಎಂಬುವವರು ತಮ್ಮ ತಂಗಿಯಾದ ಕವಿತಾಳ ಮೇಲೆ ರಾತ್ರಿ ಹರಿತವಾದ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು.ಊರಿಗೆ ಹೋಗಿ ಮರಳಿ ಅಮೀನಗಡಕ್ಕೆ ಬಂದು ಇನ್ನೇನು ಮನೆ ಸೇರಬೇಕೆನ್ನುವಷ್ಟರಲ್ಲಿ ಅಣ್ಣಂದಿರಾದ ಕುಮಾರಸ್ವಾಮಿ ಮತ್ತು ಚಂದ್ರಶೇಖರಯ್ಯ ಹಲ್ಲೆ ಮಾಡಲು ಮುಂದಾದರು.ತಕ್ಷಣ ಸ್ಥಳದಲ್ಲೇ ಎಚ್ಚೆತ್ತುಕೊಂಡ ಕವಿತಾ ಆ ಸ್ಥಳದಿಂದ ಕಾಲ್ಕಿತ್ತು ಓಡಿದ್ದಾಳೆ.ಆದರೂ ಆಕೆಯ ಬೆನ್ನಟ್ಟಿದ್ದ ಸಹೋದರರು ಹರಿತವಾದ ಅಸ್ತ್ರದಿಂದ ಹೊಡೆದಾಗ ರಕ್ತ ಸುರಿಯುತ್ತಿದ್ದರೂ ಕವಿತಾ ಓಡಿ ಹೋಗಿ ಪರಾರಿಯಾಗಿದ್ದಾಳೆ.

ಇತ್ತ ಘಟನೆ ತಿಳಿಯುತ್ತಲೇ ಓಡೋಡಿ ಬಂದ ಕವಿತಾಳ ತಮ್ಮ ಶ್ರೀಕಂಠಯ್ಯ ಆಕೆಯನ್ನ ಪಾರು ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾನೆ. ಈ ಮದ್ಯೆ ಬಹಳಷ್ಟು ಪೆಟ್ಟಾಗಿ ರಕ್ತ ಬೀಳುತ್ತಿದ್ದರಿಂದ ಕವಿತಾ ರಕ್ತದ ಮಡುವಿನಲ್ಲಿದ್ದಳು.

ಬಟ್ಟೆಗಳೆಲ್ಲಾ ರಕ್ತಸಿಕ್ತಗಳಾಗಿದ್ದವು, ಇವುಗಳ ಮಧ್ಯೆಯೇ ಕವಿತಾಳನ್ನ ಆಂಬುಲೆನ್ಸ್​ ಮೂಲಕ ಅಮೀನಗಡದಿಂದ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ಕರೆತಂದು ದಾಖಲಿಸಲಾಯಿತು. ಈ ವೇಳೆ ಗಾಯಗೊಂಡ ಕವಿತಾಳಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕವಿತಾ, ನಮ್ಮ ತಂದೆ-ತಾಯಿಯರನ್ನ ನಾನೇ ನೋಡಿಕೊಂಡು ಹೋಗುತ್ತಿದ್ದೇನೆ, ಅಣ್ಣಂದಿರು ಇಬ್ಬರೂ ಆಸ್ತಿ ವಿಚಾರವಾಗಿ ಆಗಾಗ ಬಂದು ಗಲಾಟೆ ಮಾಡುತ್ತಿದ್ದರು, ನಮ್ಮ ಸ್ವಂತ ಅಣ್ಣ ಕುಮಾರಸ್ವಾಮಿ ವಕೀಲನಾಗಿದ್ದು, ಆಸ್ತಿ ತನಗೆ ಪೂರ್ಣವಾಗಿ ಸಿಕ್ಕಿಲ್ಲವೆಂಬ ಮನೋಭಾವನೆ ಹೊಂದಿ ಇನ್ನೊಬ್ಬ ಸಹೋದರ ಚಂದ್ರಶೇಖರನೊಂದಿಗೆ ಸೇರಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆಂದು ತಿಳಿಸಿದ್ದಾಳೆ.

Be the first to comment

Leave a Reply

Your email address will not be published.


*