ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ನಗರದ ಬಸವೇಶ್ವರ ವೃತ್ತದಲ್ಲಿ ಶ್ರೀ ಬಸವಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ
ಕುಮಟಗಿ ಶೋರೂಮ್ ಸಂಸ್ಥೆಯ ಕಾರ್ಯಾಲಯದಲ್ಲಿ 889ನೇ ಜಯಂತಿಯನ್ನು ಆಚರಣೆ ಮಾಡಲಾಯಿತು.
ಮುಖ್ಯ ವಕ್ತಾರರಾಗಿ ಪ್ರಾಧ್ಯಾಪಕರಾದ ಸುಭಾಸ್ ತಿಪ್ಪನ್ನವರ್ ಬಸವಣ್ಣನವರು ಹಲವು ಸಾಮಾಜಿಕ ಸುಧಾರಣಾ ಕಾರ್ಯಗಳಿಂದಲೇ ಪ್ರಸಿದ್ಧಿ ಯಾದವರು. ಸಮಾಜ ಜಾತಿ ವ್ಯವಸ್ಥೆಯಿಂದ ಸಂಪೂರ್ಣವಾಗಿ ಮುಕ್ತವಾಗಿರಬೇಕು.ಸಮಾನತೆ ಇರಬೇಕು ಎಂದು ಬಯಸಿದ್ದ ಅವರು, ಅದಕ್ಕಾಗಿಯೇ ಶ್ರಮಿಸಿದರು ಎಂದು ತಿಳಿಸಿದರು.
ವಿಶ್ವಗುರು ಬಸವಣ್ಣನವರು ಜ್ಞಾನದ ದೀಪ ಹರಿಸಿದ ಮಹಾನ್ ಮಾನವತಾವಾದಿ.ಇವರ ತತ್ವ ಆದರ್ಶಗಳು ಇಂದಿಗೂ ಪಾಠ,ಬದುಕಿಗೆ ದಾರಿ ಎಂದು ಮುಖ್ಯ ಅತಿಥಿ ಡಾ.ಪ್ರಭುಸ್ವಾಮಿ ಮಠ ಅವರು ಮಾತನಾಡಿದರು.
ಪ್ರತಿಷ್ಠಿತ ಬಸವೇಶ್ವರ ಬ್ಯಾಂಕಿನ ಅಧ್ಯಕ್ಷರಾದ ಪ್ರಕಾಶ ತೆಪಶೆಟ್ಟಿ ಮಾತನಾಡಿ ಮಹಾಪುರುಷರ ಜಯಂತಿ ಹಬ್ಬ-ಹರಿದಿನಗಳು ಹಿರಿಯರಾದ ನಮಗೆಲ್ಲಾ ಮಾರ್ಗದರ್ಶನ. ಅಂತವರ ಆಚರಣೆ ಜೀವನದಲ್ಲಿ ದಾರಿದೀಪ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ್ ಚರಂತಿಮಠ,ಕಾಮಧೇನು ಸಂಸ್ಥೆಯ ಅಧ್ಯಕ್ಷರು ರವಿ ಕುಮಟಗಿ,ನಿರ್ದೇಶಕ ಸಂತೋಷ ಹೋಕ್ರಾಣಿ, ಕಾರ್ಯದರ್ಶಿ ವಿಜಯ ಸುಲಾಖೆ, ಖಜಾಂಚಿ ಶಿವು ಮೈಲ್ನಾಡ,ಅಶೋಕ್ ಮುತ್ತಿನಮಠ,ಬಸವರಾಜ್ ಕಟಗೇರಿ,ರಾಜು ಗೌಳಿ,ವಿಠ್ಠಲ ಮಾರ್ಕೋಡ,ಆನಂದ ಜಿಗಜಿನ್ನಿ, ಬಸವರಾಜ ಪಾಟೀಲ,ಸಂಜಯ ಪವಾರ,ಶಂಕರ ಗನೇಕಲ್ಲ ,ಗಣೇಶ ಸುರಪುರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Be the first to comment