ಬಾಲ್ಯ ವಿವಾಹ ಪ್ರಕರಣ:16 ವರ್ಷದ ಬಾಲಕಿಯೊಂದಿಗೆ 23 ವರ್ಷದ ಯುವಕನ ಮದುವೆ!

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಸಂಚಿತ ಎಂಬ ಹೆಸರಿನ (ಹೆಸರು ಬದಲಿಸಿದೆ), 16 ವರ್ಷದ ಬಾಲಕಿ ಸಾ. ಕೊರ್ತಿ, ತಾ.ಬೀಳಗಿ ಜಿ.ಬಾಗಲಕೋಟ ಇವಳ ಜೊತೆ 23 ವರ್ಷದ ಪರಶುರಾಮ ಅಂಬಿಗೇರ (ತಂದೆ – ದೇವೇಂದ್ರ,) ಬಾಗಲಕೋಟೆ ಇವರೊಂದಿಗೆ ದಿನಾಂಕ 24/04/2022 ರಂದು ಬೆಳಿಗ್ಗೆ 12 ಗಂಟೆಗೆ ಇಟಗಿ ಭೀಮವ್ವ ದೇವಸ್ಥಾನ ಗದ್ದನಕೇರಿ ಕ್ರಾಸ್‌ನಲ್ಲಿ ಬಾಲ್ಯವಿವಾಹ ಮಾಡುತ್ತಾರೆ ಎಂಬ ವಿಷಯ ರೀಚ್ ಸಂಸ್ಥೆಯ ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿ ಮಾಹಿತಿಯನ್ನು 23/04/2022 ರ ರಾತ್ರಿ 11 ಕ್ಕೆ ತಿಳಿಸಲಾಗಿದೆ.

ಇಲಾಖೆಯ ಸಹಯೋಗದಲ್ಲಿ ASI ಕೆ.ಆರ್. ಪಠಾಣ್ ಹವಾಲ್ದಾರ್ ಎಸ್.ಎಸ್.ರಾಂಪುರ, ಪೊಲೀಸ್ ಸಿಬ್ಬಂದಿ,ದೀಪಾ ಕಮತೆ,ಅಂಗನವಾಡಿ ಮೇಲ್ವಿಚಾರಕರು,ಸಂತೋಷ ಕುಮಾರ ತೇಲಿ ಕಂದಾಯ ಇಲಾಖೆ ಮತ್ತು ಶೈಲಾ ಮೆಣಸಿಗಿ ಮಕ್ಕಳ ಸಹಾಯವಾಣಿ 1098 ಸಿಬ್ಬಂದಿ ಮದುವೆ ಸ್ಥಳ ಹಮಾಲರ ಕಾಲೋನಿ ಬಾಗಲಕೋಟೆಗೆ ಹೋಗಲಾಯಿತು.

ಮದುವೆಗೆ ಎಲ್ಲಾ ತಯಾರಿ ಪೆಂಡಾಲ್,ಊಟದ ವ್ಯವಸ್ಥೆ, ಅರಿಶಿನ ಶಾಸ್ತ್ರ, ಮಾಡುತ್ತಿದ್ದು, ಮಗುವಿಗೆ ತಾಯಿ ಇಲ್ಲ ತಂದೆ ಕೊರ್ತಿ ಪಂಚಾಯಿತಿಯಲ್ಲಿ ವಾಟರ್ ಮ್ಯಾನ್ ಆಗಿ ಕೆಲಸ ಮಾಡುತ್ತಾರೆಂದು ಮಗುವಿನ ಮದುವೆಯನ್ನು ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಮಾಡುತ್ತಿದ್ದಾರೆಂದು ತಿಳಿದು ಬಂತು.

ಮಗುವಿನ ಪೋಷಕರಿಗೆ ಮತ್ತು ಹುಡುಗನ ಪಾಲಕರಿಗೆ ಹಾಗೂ ಹಿರಿಯರಿಗೆ ಬಾಲ್ಯ ವಿವಾಹ ದಿಂದಾಗುವ ದುಸ್ಪರಿಣಾಮಗಳ ಬಗ್ಗೆ ತಿಳಿಸಿ ಅವರಿಗೆ ಬಾಲ್ಯವಿವಾಹದ ಕುರಿತು ತಿಳಿಸುತ್ತಾ 2 ಲಕ್ಷ ದಂಡ ಮತ್ತು 1 ರಿಂದ 2 ವರ್ಷದವರೆಗೂ ಜೈಲು ಶಿಕ್ಷೆ ಇದೆ, ಬಾಲ್ಯವಿವಾಹ ನಿಷೇಧಿಸಲಾಗಿದೆ, 2018ರ ನಂತರದ ಬಾಲ್ಯವಿವಾಹಗಳು ಮದುವೆಗಳೇ ಅಲ್ಲ,ಅಮಾನ್ಯವಾಗಿದ್ದು ಮಗುವಿನ ಮುಂದಿನ ಜೀವನದಲ್ಲಿ ಕಾನೂನಿನ ಪ್ರಕಾರ ಅತ್ಯಾಚಾರವೆಂದೆ ಪರಿಗಣಿಸಿ ಪೋಕ್ಸೋ ಅಡಿ ದಾಖಲಾಗುತ್ತದೆಂದು ಅರಿವನ್ನು ನೀಡಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೌಖಿಕ ಆದೇಶದಂತೆ ಮಗುವನ್ನು ರಕ್ಷಣೆ ಮಾಡಿ ಕೋವಿಡ್ 19 ಟೆಸ್ಟ್ ಮಾಡಿಸಿ ಬಾಲಕಿಯರ ಬಾಲಮಂದಿರದಲ್ಲಿ ಅಭಿರಕ್ಷಣೆಗೆ ಬಿಡಲಾಯಿತು.

Be the first to comment

Leave a Reply

Your email address will not be published.


*