ಶ್ರೀ ತಿಪ್ಪಣ್ಣ ಕಂಠೆಪ್ಪ ಹೇರೂರ ಅನುದಾನಿತ ಪ್ರೌಢಶಾಲೆ ಆವರಣ ಹಾಗೂ ಸನ್ಮಾನ ಶ್ರೀ ವಿಠ್ಠಲ್ ಹೇರೂರ ಶಕ್ತಿಕೇಂದ್ರ ದೇವಲಗಾಣಗಾಪುರದಲ್ಲಿ ನವೆಂಬರ್ 14 &15 ರಂದು ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಆಯೋಜಿನೆ
ಬೆಂಗಳೂರು:: ಈ ನೇಮಕಾತಿ ಶಿಬಿರದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಅರುಣ್ ಕುಮಾರ್ ಪಾಟೀಲ್ ಮಾತನಾಡಿ ಹೇರೂರ ಶಿಕ್ಷಣ ಸಂಸ್ಥೆಯವರು ಈ ಭಾಗದ ಬಡ ನಿರುದ್ಯೋಗ ಯುವಕರನ್ನು ಶಿಕ್ಷಣದ ಜೊತೆಗೆ ಉದ್ಯೋಗ ಕೊಡಿ ಸುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಹಾಗೂ ಇದೇ ಸಂದರ್ಭದಲ್ಲಿ ಶ್ರೀ ಗೌಡಪ್ಪಗೌಡ ಪಾಟೀಲ ವಡ್ಡಳ್ಳಿ ಹಾಗೂ ಶಿವಶರಣಪ್ಪಗೌಡ ಪಾಟೀಲರು ಮಾತನಾಡಿ
ವಿಠ್ಠಲ್ ಹೇರೂರ ಅವರ ಆಶಯದಂತೆ ನಿರುದ್ಯೋಗ ಸಮಸ್ಯೆ ಅತ್ಯಂತ ಹೆಚ್ಚಾಗಿರುವ ಗ್ರಾಮೀಣ ಭಾಗದ ಯುವಕರಿಗೆ ಕರೆಯಿಸಿ ಸಮಾಲೋಚನೆ ಮಾಡಿ ಅವರವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ದೊರಕಿಸಿ ಕೊಟ್ಟಂತಹ ಹೇರೂರ ಶಿಕ್ಷಣ ಸಂಸ್ಥೆಯವರ ಕಾರ್ಯ ತುಂಬಾ ಹೆಮ್ಮೆಯ ಸಂಗತಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಉದ್ಯೋಗ ಮೇಳದಲ್ಲಿ ಸುರಕ್ಷಾ ಜವಾನ್ ಹಾಗೂ ಸೂಪರ್ ವೈಸರ್ ಗಳ ಒಟ್ಟು 208 ಯುವಕರು ಆಯ್ಕೆ ಯಾಗಿದ್ದು ಕಲಬುರಗಿ ಜಿಲ್ಲೆಯ ಅಫಜಲಪುರ,ಆಳಂದ’ಚಿಂಚೋಳಿ,ಸೇಡಂ,ಚಿತ್ತಾಪುರ,
ಹಾಗೂ ಜೇವರ್ಗಿ ತಾಲ್ಲೂಕಿನ ಅಭ್ಯರ್ಥಿಗಳು ಹಾಗೂ ಯಾದಗಿರಿ ಜಿಲ್ಲೆಯಿಂದ ಅಲ್ಲದೆ ಗಡಿ ರಾಜ್ಯವಾದ ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕಿನ ಉದ್ಯೋಗಾಕಾಂಕ್ಷಿಗಳು ಕೂಡ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಭಗವಂತಪ್ಪ ಹೇರೂರು , ಕಾರ್ಯದರ್ಶಿಗಳಾದ ಲಕ್ಷ್ಮಣ ಹೇರೂರ’ ಪ್ರಾಂಶುಪಾಲರಾದ ಶ್ರೀ ರಾಜಶೇಖರ್ ತಲಾರಿ,
ಸಿದ್ಧಾರ್ಥ ಡಾಲಿ,ಶರಣಪ್ಪ ಗಲಗಲಿ ,ಉದಯ ಕುಮಾರ್ ಭಟ್ ಪೂಜಾರಿ,ಸಂಗಣ್ಣ ಹಸರಗುಂಡಗಿ,ದೇವು ಶಂಬೇವಾಡ, ದಿಗಂಬರ್ ಡಾಂಗೆ,ರಘು ಬೆಳಗುಂಪಿ, ಮಹೇಶ್ ಚಳಗೇರಿ, ಮಹಾಂತೇಶ್ ಹಾಲಗಡ್ಲಿ ಬಸವರಾಜ ಫುಲಾರಿ,ಶಿವಶರಣ ವಾಲಿ ,ಗುರು ದಾಸ್ ,ದತ್ತು ನಡುವಿನಕೇರಿ,ಶಿವಕುಮಾರ್ ,ಅಶೋಕ್ ಭೋವಿ,ಗಣೇಶ ರಾಠೋಡ್ ,ವೈಭವ್ ಹೇರೂರು, ರವಿ ದಣ್ಣೂರ ಉಪಸ್ಥಿತರಿದ್ದರು
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000,10000,50000,1 ಲಕ್ಷ. ದೇಣಿಗೆ ಸಹಾಯ ನೀಡಬಹುದು
ಗೂಗಲ್ ಪೇ ಪೋನ ಪೇ ಮೂಲಕ ಕೂಡ ನೀಡಬಹುದು 9008329745
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment