ಲಿಂಗಸುಗೂರ ವರದಿ.ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಪ್ರತ್ರಿಕಾಗೋಷ್ಠಿಯಲ್ಲಿ ‘ ಮಾತನಾಡಿದ, ಸರ್.ಎಂ.ವಿಶ್ವೇಶ್ವರಯ್ಯ .ಪಿ.ಯು. ವಿಜ್ಞಾನ ಕಾಲೇಜು ಲಿಂಗಸುಗೂರಿನ ಆಡಳಿತಾಧಿಕಾರಿಗಳು ಒಂದು ಉತ್ತಮ ಶಿಕ್ಷಣ ಸಂಸ್ಥೆ ಇದ್ದರೆ ಒಂದು.ಬದಲಾವಣೆಯಾಗುತ್ತದೆ. 2013-14ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಅಗಾಧ ಬದಲಾವಣೆಯನ್ನು ಬಯಸಿ ಕೊಂಡು ಹುಟ್ಟಿತು. ಜಿಲ್ಲೆಯು ಶಿಕ್ಷಣದಲ್ಲಿ ಹಿಂದೆ ಉಳಿದಿದೆ ಎನ್ನುವ ಹಣೆಪಟ್ಟಿಯನ್ನೇ ತೆಗೆದು ಹಾಕಿ ಉತ್ತಮ ಶಿಕ್ಷಣವನ್ನು ನೀಡಿ ರಾಜ್ಯ ದಲ್ಲಿಯೇ ಉನ್ನತ ಸ್ಥಾನದಲ್ಲಿ ಜಿಲ್ಲೆಯನ್ನು ಕೊಂಡೊಯ್ಯಬೇಕೆಂಬ ಸಾಹಸಕ್ಕೆ ಸಂಸ್ಥೆಯು ಕೈ ಹಾಕಿತು. ಆಲೋಚನೆ ಮಾಡಿ ಸುಮ್ಮನೆ ಕುಳಿತುಕೊಳ್ಳದೇ 2014-15ರಲ್ಲಿ ತಾಲೂಕಿಗೆ ವಿಜ್ಞಾನವನ್ನು ಪರಿಚಯಿಸಿದ ಮೊದಲ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಯಿತು ಎಂದರು.2016ರಲ್ಲಿ ಮೊದಲ ಬಾರಿಗೆ ಪರೀಕ್ಷೆಯಲ್ಲಿ ಉನ್ನತ ಅಂಕ ಕಾಲೇಜಿನಿಂದ ತೇರ್ಗಡೆಯಾಗಿ ಹೊರ ಬಂದ ವಿದ್ಯಾರ್ಥಿಗಳು ಜಿಲ್ಲೆಯಲ್ಲಿಯೇ ಗಮನಾರ್ಹವಾದ ಫಲಿತಾಂಶವನ್ನು ತಂದುಕೊಟ್ಟರು, ನಂತರ 5 ವರ್ಷಗಳ ಕಾಲ ನಿರಂತರವಾಗಿ ಮೇಲಿಂದ ಮೇಲೆ ಉನ್ನತ ಫಲಿತಾಂಶವನ್ನು ಕಾಲೇಜು ನೀಡುತ್ತಾ ಬಂದಿದ್ದು, ಕಾಲೇಜಿನಲ್ಲಿ ವ್ಯಾಸ೦ಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ದೊಡ್ಡ ದೊಡ್ಡ ಸ್ಥಾನಕ್ಕೆ ಹೋಗಿ ಉತ್ತಮ ಭವಿಷ್ಯ ನಿರ್ಮಿಸಿಕೊಂ ಡಿದ್ದು, 25ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಎಂಬಿಬಿಎಸ್ ಸೀಟು ಪಡೆದಿದ್ದಾರೆ. ಸಾಯಬಣ್ಣ ಎನ್ ತೆಗ್ಗಿನಮನಿ ಪ್ರತಿಭಾನ್ವೇಷಣೆ ಪರೀಕ್ಷೆ ಹಮ್ಮಿಕೊಂಡಿದ್ದು 50 ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ ನೀಡುವ ಯೋಜನೆ ಹಾಕಿಕೊಂಡಿದ್ದು, ಪರೀಕ್ಷೆಯು ಇದೇ 13ರಂದು ಬೆಳಿಗ್ಗೆ 10ಗಂ.ಗೆ ಕಾಲೇ ಜಿನಲ್ಲಿ ನಡೆಯಲಿದೆ. ವಿದ್ಯಾರ್ಥಿಗಳು ಬೆಳಿಗ್ಗೆ 10ಗಂಟೆಯೊಳಗೆ ಬಂದು ಹೆಸರು ನೊಂದಾಯಿಸಿಕೊಳ್ಳಬೇಕು, 10ನೇ . ತರಗತಿ ಮುಗಿಸಿದ ಎಲ್ಲಾ ವಿದ್ಯಾರ್ಥಿಗಳೂ ಈ ಪರೀಕ್ಷೆಯಲ್ಲಿ ಭಾಗವಹಿಸಬಹುದು, ಪರೀಕ್ಷೆಗೆ ಹಾಜರಾಗುವಾಗ ಎಸ್‌ಎಸ್‌ಎಲ್‌ಸಿ ಪ್ರವೇಶ ಪತ್ರ ಕಡ್ಡಾಯವಾಗಿ ತರಬೇಕು, ಈ ಪರೀಕ್ಷೆಯು ಪ್ರಥಮ ಪಿಯುಸಿಗೆ ಪ್ರವೇಶ ಪರೀಕ್ಷೆಯಾ ಗಿರುತ್ತದೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ 50 ವಿದ್ಯಾರ್ಥಿಗಳಲ್ಲಿ ಮೊದಲ 10 ವಿದ್ಯಾರ್ಥಿಗಳಿಗೆ 9 ಸುತ್ತಿನ ವಿಶೇಷ ರಸಪ್ರಶ್ನೆ ಕಾರ್ಯ ಕ್ರಮ ನಡೆಸಲಾ ಗುವುದು, ಅದರಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿ ಗಳಿಗೆ 20ಸಾವಿರ, ದ್ವಿತೀಯ ಸ್ಥಾನಕ್ಕೆ 10ಸಾವಿರ ರೂ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸಾವಿರ ರೂ. ಬಹುಮಾನ ನೀಡಲಾಗುವುದು
ಪರೀಕ್ಷೆಗೆ ತಮ್ಮ ಹೆಸರನ್ನು ನೊಂದಾಯಿಸುವ ವಿದ್ಯಾರ್ಥಿಗಳು 8951633963 ಸಂಖ್ಯೆಗೆ ಕರೆಮಾಡಿ ಅಥವಾ ವಾಟ್ಸಪ್‌ಗೆ ಮೆಸೇಜ್ ಮಾಡಿ ಹೆಸರು.ನೊಂದಾಯಿಸಿಕೊಳ್ಳಬೇಕೆಂದು ಕಾಲೇಜಿನ ಆಡಳಿತಾಧಿಕಾರಿ ರಮೇಶ ತೆಗ್ಗಿನಮನಿ ಹೇಳಿದರು ಈ ಸಂದರ್ಭದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗದವರಾದ ರಾಘವೇಂದ್ರ.ಮಹ್ಮದ ಆಜರುದ್ದಿನ. ಗುರುರಾಜ.ಚಂದ್ರಶೇಖರ.ವಿರೇಶ್. ಪ್ರತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Be the first to comment