ಹೋಳಿ ಹಬ್ಬಕ್ಕೆ ವಿಶೇಷ ಅನುದಾನ, ಸಾಂಸ್ಕøತಿಕ ಕಾರ್ಯಕ್ರಮಆಯೋಜನೆ:ಗತವೈಭವ ನೆನಪಿಸುವ ಹೋಳಿ ಆಚರಣೆಗೆ ಡಿಸಿ ರಾಜೇಂದ್ರ ಕರೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ದೇಶದಲ್ಲಿಯೇ ಎರಡನೇ ಸ್ಥಾನ ಪಡೆದ ಬಾಗಲಕೋಟೆ ಹೋಳಿ ತನ್ನ ಗತಕಾಲದ ನೆನಪನ್ನು ಮರುಕಳುಹಿಸುವಂತೆ ಹೋಳಿ ಹಬ್ಬ ಆಚರಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಕರೆ ನೀಡಿದರು.

ಜಿಲ್ಲಾಡಳಿತ ಭವನದಲ್ಲಿರುವ ನೂತನ ಆಡಿಟೋರಿಯಂ ಹಾಲ್‍ನಲ್ಲಿಂದು ಜರುಗಿದ ಹೋಳಿ ಆಚರಣೆ ಕುರಿತ ಶಾಂತತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಕಳೆದ ಎರಡು ಮೂರು ವರ್ಷಗಳಿಂದ ಬಾಗಲಕೋಟೆ ನಗರದಲ್ಲಿ ಕೊರೊನಾ ಹಿನ್ನಲೆಯಲ್ಲಿ ಹೋಳಿ ಕಳೆಗುಂದಿತ್ತು. ಆದರೆ ಈ ವರ್ಷ ಹೋಳಿ ವೈಭವ ಮರುಕಳುಹಿಸುವಂತೆ ಆಚರಿಸಲು ಜಿಲ್ಲಾಡಳಿತದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದೆಂದು ತಿಳಿಸಿದರು.

ಈ ಭಾರಿ ಹೋಳಿ ಆಚರಣೆ ಸರಕಾರದಿಂದ 10 ಲಕ್ಷ ಅನುದಾನ ನೀಡಿದ್ದು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹೋಳಿ ಆಚರಣೆ ಸಮಿತಿ ಸಹಯೋಗದಲ್ಲಿ ಮಾರ್ಚ 16 ರಿಂದ 22 ವರೆಗೆ ಬಾಗಲಕೋಟೆ ಹೋಳಿ ಉತ್ಸವ-2022 ಆಚರಿಸಲಾಗುತ್ತಿದ್ದು, ಇದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತಿದೆ. ಹೋಳಿ ಆಚರಣೆಗಾಗಿ ತೊಂದರೆಯಾಗದಂತೆ ನಗರಸಭೆ ವತಿಯಿಂದ ಸ್ವಚ್ಛತೆ ಹಾಗೂ ನೀರಿನ ವ್ಯವಸ್ಥೆ, ಹೆಸ್ಕಾಂದಿಂದ ಬೆಳಕಿನ ವ್ಯವಸ್ಥೆ ಮಾಡಲಾಗುವುದೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ ಕಾನೂನು ಸುವ್ಯವಸ್ಥೆಗೆ ದಕ್ಕೆಯಾಗದಂತೆ ಹೋಳಿ ಹಬ್ಬ ಆಚರಿಸಬೇಕು. ಜಿಲ್ಲೆಯಾದ್ಯಂತ ಒಂದೇ ದಿನ ಹೋಳಿ ಆಚರಣೆ ಇರುವದರಿಂದ ಸಿಬ್ಬಂದಿಗಳ ಕೊರತೆ ಆಗುತ್ತಿದ್ದು, ಬಾಗಲಕೋಟೆ ಸಿಟಿ ವ್ಯಾಪ್ತಿಯಲ್ಲಿ ಹೋಳಿ ಸಮಿತಿಯವರು ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಸೇವಕರನ್ನು ನೇಮಿಸಿ ಪೊಲೀಸರ ಜೊತೆಗೆ ಸಹಕರಿಸಬೇಕು. ಸಣ್ಣ ಪುಟ್ಟ ಗೊಂದಲಗಳನ್ನು ತಾವೇ ಬಗೆಹರಿಸಿಕೊಳ್ಳುವಂತೆ ಸಮಿತಿಯವರಿಗೆ ತಿಳಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ಹೇಮಾವತಿ ಮಾತನಾಡಿ 5 ದಿನಗಳ ಕಾಲ ಬಾಗಲಕೋಟೆ ಹೋಳಿ-2022 ಆಚರಣೆಗೆ ಪ್ರತಿದಿನ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. 16 ರಂದು ಹಲಗಿ ಮೇಳದೊಂದಿಗೆ ಉದ್ಘಾಟನೆ, 17 ರಂದು ಕಾಮದಹನ, 18 ರಂದು ಕಿಲ್ಲಾ, ನವನಗರ, ವಿದ್ಯಾಗಿರಿ, 19 ರಂದು ಹಳಪೇಟೆ, ಜೈನ್‍ಪೇಟೆ, ವೆಂಕಟಪೇಟೆ ಓಣಿಗಳಲ್ಲಿ ಹಾಗೂ 20 ರಂದು ಹೊಸಪೇಟ ಓಣಿಯಲ್ಲಿ ಬಣ್ಣದಾಟ, 19 ರಂದು ಸೋಗಿನ ಬಂಡಿಗಳ ಸ್ಪರ್ಧೆಗಳು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಹೋಳಿ ಸಮಿತಿಯ ಮುಖಂಡರು ಹೋಳಿ ಉತ್ಸವದಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಕೆಲಸವೊಂದು ಬದಲಾವಣೆ ಮಾಡಲು ತಿಳಿಸಿದಾಗ ಕಾರ್ಯಕ್ರಮಗಳ ಅಂತಿಮ ಪಟ್ಟಿಯನ್ನು ಸಮಿತಿಯವರೇ ನೀಡುವಂತೆ ತಿಳಿಸಲಾಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬಿಡಿಕರ, ಡಿವಾಯ್‍ಎಸ್‍ಪಿ ನಂದರೆಡ್ಡಿ, ನಗರಸಭೆ ಪೌರಾಯುಕ್ತ ಮುನಿಷಾಮಪ್ಪ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*