ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಇಳಕಲ್ಲ ತಾಲೂಕಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಬಲಕುಂದಿ ತಾಂಡಾ ಶಾಲೆಯಲ್ಲಿ “ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ” ಆಚರಿಸಲಾಯಿತು.
ಮಹಿಳೆ (Woman) ಸಮಾಜದ ಶಕ್ತಿ (Power),ಕುಟುಂಬದ ಕಣ್ಣು, ಸಮಾಜ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆ ಪ್ರಮುಖ ಪಾತ್ರ ವಹಿಸಿದ್ದಾಳೆ. ಹಿಂದಿನ ಕಾಲದಲ್ಲಿ ಬೆರಳೆಣಿಕೆಯಷ್ಟು ಮಹಿಳೆಯರು ಮಾತ್ರ ಮನೆಯಿಂದ ಹೊರಗೆ ಬಂದು ದುಡಿಯುತ್ತಿದ್ದರು. ಆದ್ರೀಗ ಕಾಲ ಬದಲಾಗಿದೆ ಮಹಿಳೆ ತಾನು ಎಲ್ಲವನ್ನೂ ನಿಭಾಯಿಸಬಲ್ಲೆ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.ಗಡಿ ಕಾಯುವುದ್ರಿಂದ ಹಿಡಿದು ಕುಟುಂಬದ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬಲ್ಲ ಶಕ್ತಿ, ತಾಳ್ಮೆ, ಉತ್ಸಾಹ, ಧೈರ್ಯ ಮಹಿಳೆಗಿದೆ. ಪುರುಷರ ಸಮಾನವಾಗಿ ನಿಂತಿರುವ ಮಹಿಳೆಯರು ಅನೇಕ ಉನ್ನತ ಹುದ್ದೆಗಳನ್ನು ಸಂಭಾಳಿಸುತ್ತಿದ್ದಾರೆ.ಎಂದು ಮುಖ್ಯ ಗುರುಗಳಾದ ಪರಶುರಾಮ ಪಮ್ಮಾರ ತಿಳಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಗುರುಮಾತೆಯವರಾದ ಶ್ರೀಮತಿ ಜಿ ಕೆ ಮಠ, ಆರ್ ಎಸ್ ಕೊಡಗಲಿ, ಪಿ ಎಸ್ ಹೊಸೂರ, ಎಂ ಎನ್ ಅರಳಿಕಟ್ಟಿ,ಎಂ ಪಿ ಚೇಗೂರ,ಎಸ್ ಎಲ್ ಜೋಗಿನ, ಎಸ್ ಎಂ ಮಲಗಿಹಾಳ, ಸಾಯಿರಾ ಹೆರಕಲ್,ಕುಮಾರಿ ಮೇಘಾ ಬೇವೂರ ಹಾಗೂ ,ಎ ಡಿ ಬಾಗವಾನ,ಎಂ ಎಸ್ ಬೀಳಗಿ ರವರು ಉಪಸ್ಥಿತರಿದ್ದರು.
Be the first to comment