ಉಡುಪಿ ; ಕುಂದಾಪುರ ಖಾರ್ವಿಕೇರೆಯ ಈಜು ಪ್ರತಿಭೆ, ಭಂಡಾರ್್ಸ ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿ ಸಂಪತ್ ಡಿ ಖಾರ್ವಿ ಕಾಲಿಗೆ ಸರಪಳಿ ಕಟ್ಟಿಕೊಂಡು 25
ಕಿ.ಮಿ ನದಿಯಲ್ಲಿ ಈಜುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಭಾನುವಾರ ಮದ್ಯಾಹ್ನ 2 ಗಂಟೆಗೆ ಬಸ್ರೂರು ರೈಲು ಸೇತುವೆ ಬಳಿ ಯಿಂದ ಪಂಚ ಗಂಗಾವಳಿ ನದಿಗೆ ಇಳಿದು ಈಜಲು ಆರಂಬಿಸಿದ ಸಂಪತ್ ಸಂಜೆ 5 ಗಂಟೆ 5 ನಿಮಿಷಕ್ಕೆ 25 ಕಿ.ಮಿ ದೂರದ ಗಂಗೊಳ್ಳಿ ಬಂದರಿಗೆ ತಲುಪಿದ್ದಾರೆ.
ಸಂಪತ್ ಅವರು ನದಿಯಲ್ಲಿ ಸಾಗಿದ ಹಾಯುದ್ದಕ್ಕು ದೋಣಿಯಲ್ಲಿ ಹಿಂಬಾಲಿಸಿದ ಅಭಿಮಾನಿಗಳು ಡೋಲು ಚಂಡೆ ವಾದನಗಳನ್ನು ಬಾರಿಸುವ ಮೂಲಕ ಸಂಪತ್ ಅವರನ್ನು ಹುರಿದುಂಬಿಸಿದರು.
ತೀರದ ಉದ್ದಕ್ಕೂ ಕಾದು ಕುಂತಿದ್ದ ಸಾವಿರಾರು ಸಾರ್ವಜನಿಕರು ಸಂಪತ್ ಅವರ ಸಾಹಸನವನ್ನು ಕಣ್ತುಂಬಿಕೊಂಡು ಹರಸಿದರು.
ಸಂಪತ್ ಅವರ ತಂದೆ ದೇವರಾಯ್ ಖಾರ್ವಿ ಮಿನುಗಾರರಾಗಿದ್ದು, ಪಂಚಗಂಗಾವಳಿ ನದಿ ತೀರದ ನಿವಾಸಿಯಾಗಿದ್ದಾರೆ.
ಸಂಪತ್ ತಂದೆ ದೇವರಾಯ್ ಮಗ ಏಳನೆ ತರಗತಿಯಲ್ಲಿ ಇರುವಾಗಲೇ ಮನೆ ಎದುರಿನ ಪಂಚಗಂಗಾವಳಿ ನದಿಯಲ್ಲಿ ಈಜು ತರಬೇತಿ ನೀಡಿದ್ದರು. ಸಂಪತ್ ಚಿಕ್ಕಪ್ಪ ದಯಾನಂದ ಖಾರ್ವಿ ಕೂಡ ಬೆಂಗಳೂರಿನಲ್ಲಿ ಖ್ಯಾತ ಈಜು ತರಬೇತುದಾರರಾಗಿದ್ದು, ಸಂಪತ್ ಸಾಧನೆಗೆ ಅವರ ಕಾಣಿಕೆಯು ಇದೆ.
ಸಂಪತ್ ಕಾಲಿಗೆ ಸರಳಿಪಳಿಕಟ್ಟಿಕೊಂಡು ಈಜುತ್ತಿರುವ ವೇಳೆಯಲ್ಲಿ ಅವರ ತಂದೆ ದೆವರಾಯ್
ಸಂಪತ್ ಹಿಂದೆಯೇ ಈಜಿಕೊಂಡು ಮಗನಿಗೆ ಲೈಪಗಾರ್ಡ್ ಆಗಿ ಹಾದಿಯೂದ್ದಕ್ಕು ಮಗನಿಗೆ ಪ್ರೊತ್ಸಾಹ ನೀಡುತ್ತಲೆ ಸಾಗಿದರು. ದೇವರಾಯ್ ಜೊತೆಗೆ ಮೂವರು ಈಜೂಗಾರರು ಕೂಡ ಸಂಪತ್ ರಕ್ಷಣೆಗೆ ಈಜೂತ್ತಲೆ ದಾರಿ ತೊರಿಸುತ್ತ ಸಾಗಿದರು
.
ಈಜಿ ಗಂಗೊಳ್ಳಿ ಬಂದರು ತಲುಪಿದ ಸಂಪತ್ಗೆ ಸಮ್ಮಾನ ಮಾಡಲಾಯಿತು. ಗಂಗೊಳ್ಳಿ ಠಾಣಾದಿಕಾರಿ ವಾಸಪ್ಪನಾಯ್ಕ್ ಕಾಲಿಗೆ ತೊಡಿಸಿದ್ದ ಸರಪಳಿ ಬೀಗವನ್ನು ತೆಗೆದು ಶುಭಹಾರೈಸಿದರು.
Be the first to comment