ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಬೆಂಗಳೂರು. ಮತ್ತು ಗ್ರಾಮೀಣ ಅಭಿವೃದ್ಧಿ ಪರಿಸರ ಜಾಗೃತಿ ಸಂಸ್ಥೆ ಬಾಗಲಕೋಟೆ ಇವರ ಸಹಯೋಗದಲ್ಲಿ ಬಾಗಲಕೋಟೆ ಸಂಜೀವಿನಿ ಒಕ್ಕೂಟದ 30 ಮಹಿಳೆಯರಿಗೆ ಘನತ್ಯಾಜ್ಯ ನಿರ್ವಹಣೆ ಬಗ್ಗೆ ಐದು ದಿನದ ವಸತಿಯುತ ತರಬೇತಿ ಕಾರ್ಯಗಾರವನ್ನು ಜಿಲ್ಲಾ ಪಂಚಾಯತ್ ಸಂಪನ್ಮೂಲ ಕೇಂದ್ರ ಬಾಗಲಕೋಟೆಯಲ್ಲಿ ನಡೆಸಲಾಯಿತು.
ತರಬೇತಿ ಉದ್ಘಾಟಕರಾಗಿ ಶ್ರೀ ಉಮಾಶಂಕರ್ ಎನ್ ಪಿ. ಎಂ ಜಿ ಐ ಆರ್ ಇ ಡಿ ಬೆಂಗಳೂರು ಅವರು ಗಿಡಕ್ಕೆ ನೀರುಣಿಸುವುದರ ಮೂಲಕ ನೆರವೇರಿಸಿಕೊಟ್ಟರು.ನಂತರ ಐದು ದಿನದ ತರಬೇತಿಯು ಅತಿ ಮುಖ್ಯವಾಗಿದ್ದು ಸಂಘದ ಮಹಿಳೆಯರು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.
ಶ್ರೀ ರಮೇಶ್ ಅಂಗಡಿ ಎನ್ ಆರ್ ಎಲ್ ಎಮ್ ತಾಲೂಕ ಸಂಯೋಜಕರು ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಗ್ರಾಮ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆ ನಿಮ್ಮಿಂದಲೇ ಪ್ರಾರಂಭವಾಗಲಿ ಈ ತರಬೇತಿಯ ಸದುಪಯೋಗ ಎಲ್ಲಾ ಗ್ರಾಮದ ಸಂಜೀವಿನಿ ಒಕ್ಕೂಟದ ಮಹಿಳೆಯರು ಪಡೆದುಕೊಳ್ಳಲಿ ಮತ್ತು ನಮ್ಮ ಗ್ರಾಮದ ಸ್ವಚ್ಛತೆ ನಮ್ಮ ಜವಾಬ್ದಾರಿಯನ್ನು ತಿಳಿಸಿಕೊಟ್ಟರು.
ಶ್ರೀ ಜಿ ಎನ್ ಸಿಂಹ ನಿರ್ದೇಶಕರು ರೀಚ್ ಸಂಸ್ಥೆ ಈ ಐದು ದಿನದ ತರಬೇತಿಯಲ್ಲಿ ಮೂರು ದಿನದ ಕ್ಷೇತ್ರಭೇಟಿ ಅಂದರೆ ಎರಡು ಘನತ್ಯಾಜ್ಯ ನಿರ್ವಹಣಾ ಘಟಕ ಒಂದು ಎರೆಹುಳು ಘಟಕ ಒಳಗೊಂಡಿರುತ್ತದೆ ಮತ್ತು ಅದರ ಮಾಹಿತಿಯನ್ನು ತರಬೇತಿ ಕಾರ್ಯಗಾರದಲ್ಲಿ ನೀಡಲಾಗುತ್ತದೆ. ಇದರ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಂಡು ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ನಿರ್ಮಾಣಗೊಂಡ ಘನತ್ಯಾಜ್ಯ ನಿರ್ವಹಣಾ ಘಟಕದ ಎಲ್ಲಾ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಲು ಈ ತರಬೇತಿಯು ಸಹಕಾರಿಯಾಗಲಿದೆ ಎಂದು ತಿಳಿಸಿಕೊಟ್ಟರು.ಶ್ರೀ ವೈಕೆ ಪಾರ್ಸಿ ಎಚ್ ಆರ್ ಡಿ ಜಿಲ್ಲಾ ಸಂಯೋಜಕರು ಬಾಗಲಕೋಟೆ ರವರು ಮಹಿಳೆಯರ ನೈರ್ಮಲ್ಯ ಸ್ವಚ್ಛತೆ ಬಗ್ಗೆ ಮತ್ತು ಗ್ರಾಮದ ಸ್ವಚ್ಛತೆ ಬಗ್ಗೆ ಮಾಹಿತಿಯನ್ನು ನೀಡಿದರು.
ಇಂದು ಈ ಘನ ತ್ಯಾಜ್ಯ ನಿರ್ವಹಣೆಯ ಐದು ದಿನದ ಮುಕ್ತಾಯ ಸಮಾರಂಭವನ್ನು ತರಬೇತಿ ಪಡೆದ ಸಂಘದ ಮಹಿಳೆಯರ ಅನುಭವ ಹಂಚಿಕೆಯನ್ನು ಮಾಡಿಕೊಳ್ಳಲಾಯಿತು. ಕೊನೆಯದಾಗಿ ಸಂಘದ ಮಹಿಳೆಯರ ಕೆಲವೊಂದು ಭವಿಷ್ಯದ ಕಾರ್ಯನಿರ್ವಹಣೆಯ ಮಾಹಿತಿಯನ್ನು ತಿಳಿಸುತ್ತಾ ಎಲ್ಲಾ ಸಂಘದ ಮಹಿಳೆಯರಿಗೂ ಪ್ರಮಾಣಪತ್ರವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಮತ್ತು ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೇಖಾ ಬಡಿಗೇರ್, ಶ್ರೀ ಬಸವರಾಜ್ ಚಳಿಗೇರಿ ಮತ್ತು ಶ್ರೀಮತಿ ಶಾರದಾ ಭಜಂತ್ರಿಯವರು ಉಪಸ್ಥಿತರಿದ್ದರು.
Be the first to comment