ದಾರ್ಶನಿಕ ಶರಣರನ್ನು ಸ್ಮರಿಸುವುದು ಇಂದಿನ ಪಿಳೀಗೆಗೆ ದಾರಿದೀಪ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

ದೇವನಹಳ್ಳಿ 

ಸಮಾಜದಲ್ಲಿ ತಮ್ಮದೇ ಆದ ರೀತಿಯಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ ದಾರ್ಶನಿಕ ಶರಣರನ್ನು ಸ್ಮರಿಸುವುದು ಇಂದಿನ ಸಮಾಜದ ಪಿಳೀಗೆಗೆ ದಾರಿದೀಪವಾಗಿದೆ ಎಂದು ಬಿಕೆಎಸ್ ಪ್ರತಿಷ್ಠಾನದ ಅಧ್ಯಕ್ಷ ಬಿ.ಕೆ.ಶಿವಪ್ಪ ತಿಳಿಸಿದರು.ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಸಮೀಪದಲ್ಲಿ ಬಿಕೆಎಸ್ ಪ್ರತಿಷ್ಠಾನ ಕುಂದಾಣ ಗ್ರಾಪಂ ಘಟಕ ವತಿಯಿಂದ ಹಮ್ಮಿಕೊಂಡಿದ್ದ ದಾಸ ಶ್ರೇಷ್ಠರಾದ ಅಂಬಿಗರ ಚೌಡಯ್ಯ ಮತ್ತು ಮಡಿವಾಳ ಮಾಚಯ್ಯನವರ ಜಯಂತಿಯ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ೧೨ನೇ ಶತಮಾನದಲ್ಲಿ ಬಸವಣ್ಣನವರ ಸಮಕಾಲಿನವರಾದ ಮಡಿವಾಳ ಮಾಚಯ್ಯನವರು ಸಮಾಜದಲ್ಲಿನ ಅಸಮಾನತೆ, ಶೋಷಣೆ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅದರಂತೆ ಹಲವಾರು ಮಹಾನ್ ವ್ಯಕ್ತಿಗಳ ದಾರ್ಶನೀಕರಾಗಿ ಇಡೀ ಸಮಾಜದಲ್ಲಿ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಯಾವುದೇ ಸಮುದಾಯ ಕೀಳಲ್ಲ, ಮೇಲಲ್ಲ, ಎಲ್ಲಾ ಸಮುದಾಯದಗಳು ಒಂದೇ ಎಂಬ ಭಾವನೆಯನ್ನು ಬಿತ್ತಿದ ಶರಣರು ಆಗಿದ್ದಾರೆ. ಯಾವುದೇ ಸಮುದಾಯ ಆಗಲೀ ಅವರವರ ಕಾಯಕಗಳಿಗೆ ಬದ್ಧರಾಗಿರುತ್ತಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಹಲವಾರು ಹೋರಾಟಗಳನ್ನು ಮಾಡಿ, ವಚನ ಸಾಹಿತ್ಯದ ಮೂಲಕ ಜನಜಾಗೃತಿ ಮೂಡಿಸುವುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ ಮಹಾನ್ ಪುರುಷರಾಗಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು. 

CHETAN KENDULI

ದಾರ್ಶನೀಕರ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಪ್ರತಿ ಧರ್ಮದಲ್ಲಿ ಪ್ರತೀತಿ ಹೊಂದಿದ ಹಲವಾರು ಸಮಾಜಮುಖಿಯರ ಜೀವನ ಚರಿತ್ರೆಗಳನ್ನು ಪುಸ್ತಕಗಳಿಂದ ತಿಳಿದುಕೊಳ್ಳುವಂತಾಗಬೇಕು. ಸಮಾಜದಲ್ಲಿ ಹೇಗೆ ಬದುಕು ನಡೆಸಬೇಕು. ನಾವು ಬದುಕಿರುವಾಗಲೇ ಏನನ್ನಾದರೂ ಸಾಧನೆ ಮಾಡುವುದರ ಮೂಲಕ ಸಮಾಜಕ್ಕೆ ಒಳಿತು ಮಾಡುವ ಮನೋಭಾವ ಪ್ರತಿ ಯುವಕರಲ್ಲಿ ಇರಬೇಕು ಎಂದು ಸಲಹೆ ಮಾಡಿದರು. ಈ ವೇಳೆಯಲ್ಲಿ ಬಿಕೆಎಸ್ ಪ್ರತಿಷ್ಠಾನದ ಮಹಿಳಾ ತಾಲೂಕು ಅಧ್ಯಕ್ಷೆ ಅನುರಾಧ ಅಶೋಕ್, ನಿಕಟ ಪೂರ್ವ ಅಧ್ಯಕ್ಷೆ ವಿಜಯ ಯೋಗೇಶ್‌ಗೌಡ, ಸಂಘಟನಾ ಕಾರ್ಯದರ್ಶಿ ಅನಿತಾ ಮೋಹನ್, ಕುಂದಾಣ ಹೋಬಳಿ ಅಧ್ಯಕ್ಷ ಜಾಲಿಗೆ ವೆಂಕಟೇಶ್, ಉಪಾಧ್ಯಕ್ಷ ಮೋಹನ್, ಪ್ರಧಾನ ಕಾರ್ಯದರ್ಶಿ ಜಯಕುಮಾರ್, ನಿಕಟಪೂರ್ವ ಕಾರ್ಯದರ್ಶಿ ರವಿಕುಮಾರ್, ಖಜಾಂಚಿ ಮಧುಕುಮಾರ್, ಮಂಜುನಾಥ್, ಕುಂದಾಣ ಗ್ರಾಪಂ ಘಟಕ ಅಧ್ಯಕ್ಷ ಗೋವಿಂದಸ್ವಾಮಿ, ಅಂಬರೀಶ್, ರಾಜೇಶ್, ಹಾಗೂ ಪದಾಧಿಕಾರಿಗಳು ಇದ್ದರು.

Be the first to comment

Leave a Reply

Your email address will not be published.


*