ಬಸವಪ್ರಿಯ ಹಡಪದ ಅಪ್ಪಣ್ಣ ಸಮಾಜದಿಂದ ನೂತನ ಜಿಲ್ಲಾ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ.

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ಜಿಲ್ಲಾ ಸುದ್ದಿಗಳು 

ಮಸ್ಕಿ

ಮಸ್ಕಿಯಲ್ಲಿ ಮೊದಲಬಾರಿಗೆ ನ ಭೂತೋ ನ ಭವಿಷತ್ ಎನ್ನುವಂತೆ ನಿಮ್ಮೆಲ್ಲರ ಸಹಕಾರದಿಂದ ಜಿಲ್ಲಾ ಹಡಪದ ಅಪ್ಪಣ್ಣ ಸಮಾವೇಶವನ್ನು ಮಾಡಿದೆವು.ಈ ಬಾರಿಯೂ ಎರಡನೇ ಅವಧಿಗೆ ಜಿಲ್ಲಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೀರಿ, ನಿಮ್ಮೆಲ್ಲರ ಸಹಕಾರ ಇದೇರೀತಿ ಇದ್ದರೆ ಉತ್ತಮ ಕೆಲಸಗಳನ್ನು ಮಾಡಿ, ನಮ್ಮ ಸಮಾಜವನ್ನು ಎಸ್,ಟಿ, ವರ್ಗಕ್ಕೆ ಸೇರಿಸುವ ಮತ್ತು ಹಡಪದ ಅಪ್ಪಣ್ಣ ಪ್ರಾಧಿಕಾರ ಸ್ಥಾಪಿಸುವ ಹಾಗೂ ತಾಲೂಕಿಗೊಂದು ಸಮುದಾಯ ಭವನ, ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯ.

CHETAN KENDULI

ನಮ್ಮ ಕಾಯಕ ಮಾಡುವ ಎಲ್ಲಾ ಜನರಿಗೆ ಉಚಿತ ನಿವೇಷನ ಮುಂತಾದ ಸೌಲಭ್ಯಗಳನ್ನು ಕಲ್ಪಿಸುವ ಪ್ರಯತ್ನ ರಾಜ್ಯ ಸಮಿತಿಯ ಸಹಯೋಗದಲ್ಲಿ ಮಾಡೋಣ.ಅದಕ್ಕೆ ನಾವೆಲ್ಲರೂ ಒಗ್ಗಟ್ಟಾಗಬೇಕಿದೆ ಎಂದು ರಾಯಚೂರು ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಬಳೇಶ ಹಡಪದ ಬಳಗಾನೂರು ಹೇಳಿದರು.ಮಂಗಳವಾರ ಸಂಜೆ ಮಸ್ಕಿ ತಾಲೂಕಾ ಬಸವಪ್ರಿಯ ಹಡಪದ ಅಪ್ಪಣ್ಣ ಸಂಘದಿಂದ ಆಯೋಜಿಸಲಾಗಿದ್ದ ನೂತನ ಅಧ್ಯಕ್ಷ ಉಪಾಧ್ಯಕ್ಷ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಂತರ ನೂತನ ಜಿಲ್ಲಾ ಉಪಾಧದಯಕ್ಷರಾಗಿ ಆಯ್ಕೆಯಾಗಿರುವ ಗದ್ದೆಪ್ಪ ಜಕ್ಕೇರ್ ಮಡು ಮಾತನಾಡಿ ನಮ್ಮ ಸಮಾಜ ಶೈಕ್ಷಣಿಕ,ಸಾಮಾಜಿಕ,ರಾಜಕೀಯ,ಆರ್ಥಿಕವಾಗಿ ಸಬಲರಾಗಬೇಕು, ಒಗ್ಗಟ್ಟಾಗಿ ಹೋರಾಡಿ ಸಂವಿಧಾನಾತ್ಮಕ ಸೌಲಭ್ಯಗಳನ್ನು ಪಡೆಯಬೇಕೆಂದು ಕರೆಕೊಟ್ಟರು.ತದನಂತರ ಕರ್ನಾಟಕ ಪತ್ರಿಕೋಧ್ಯಮರತ್ನ ಮತ್ತು ಕರುನಾಡ ನಕ್ಷತ್ರ ರಾಜ್ಯ ರತ್ನ ವಿಭೂಷಣ ಪ್ರಶಸ್ತಿ ಪುರಸ್ಕೃತ ಸುರೇಶ ಬಳಗಾನೂರು ಮಾತನಾಡಿ,ಹಡಪದ ಸಮಾಜ ಕಾಯಕಜೀವಿಗಳಿರುವ ಸಮಾಜ,ಸ್ವಂತ ಪರಿಶ್ರಮದಲ್ಲಿ ಪ್ರಾಮಾಣಿಕವಾಗಿ ಜೀವಿಸುತ್ತಿರುವ ಸಂಪನ್ನ ಸಮಾಜ.

ಆದರೆ ಒಗ್ಗಟ್ಟಿನ ಕೊರತೆಯಿಂದ ಸಮಾಜದಲ್ಲಿ ಶಿಕ್ಷಣ,ಆರ್ಥಿಕಬೆಳವಣಿಗೆ, ರಾಜಕೀಯ ಅವಕಾಶಗಳು ದಕ್ಕುತ್ತಿಲ್ಲ.ಆದರೂ ಅಂದಿಗೂ ಇಂದಿಗೂ ಗಮನಾರ್ಹ ಬದಲಾವಣೆಯನ್ನು ಕಂಡಿದೆ. ನನ್ನ ಈ ಸಣ್ಣ ಸಾಧನೆಯನ್ನು ಗುರುತಿಸಿ ಗೌರವಿಸುತ್ತಿರುವದು ನಿಜಕ್ಕೂ ಸಂತೋಷದಾಯಕ ವಿಷಯ.ನಿಮ್ಮ ಪ್ರೀತಿ ಹೀಗೇ ಇರಲಿ. ನಿಮ್ಮ ಅಭಿವೃದ್ದಿಗಾಗಿ ನನ್ನ ಕೈಲಾದ ಪ್ರಯತ್ನ ಮಾಡುವೆ ಎಂದರು.ಈ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ಶಿಕ್ಷಕ ಮಹಾಂತೇಶ ಅಗ್ರಹಾರ ಆಡಿದರೆ, ಸುರೇಶ ಕಟ್ಟಿಮನಿ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು.

ಶಿಕ್ಷಕ ಯಮನೂರಪ್ಪ ಕಟ್ಟಿಮನಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಸ್ಕಿ ತಾಲೂಕಾ ಬಸವಪ್ರಿಯ ಹಡಪದ ಅಪ್ಪಣ್ಣ ಸಂಘದ ಅಧ್ಯಕ್ಷರಾದ ಗುಂಡಪ್ಪ ಹಡಪದ,ಉಪಾಧ್ಯಕ್ಷರಾದ ಚಂದ್ರಶೇಖರ ಸಾನಬಾಳ,ಮತ್ತು ಮಾಜಿ ಅಧ್ಯಕ್ಷರು ಹಾಗೂ ನಿವೃತ್ತ ಕೆ,ಎಸ್,ಆರ್,ಟಿ,ಸಿ, ಅಧಿಕಾರಿಗಳೂ ಆಗಿರುವ ಬಸ್ಸಣ್ಣ ಹಡಪದ ವೆಂಕಟೇಶ ಮ್ಯಾಕಲದೊಡ್ಡಿ ಅಮರೇಶ ಟೇಲರ್ ಮಹಾದೇವ ಕವಿತಾಳ, ದೇವರಾಜ,ಶರಣಬಸವ ಉದ್ಬಾಳ,ಸೇರಿದಂತೆ ಹಡಪದ ಸಮಾಜದ ಹಲವರಿದ್ದರು.

Be the first to comment

Leave a Reply

Your email address will not be published.


*