ಕಲಬುರಗಿ: ನಗರದ ರಾಮ ಮಂದಿರ ಸಮೀಪದ ಜಿಡಿಎ ಲೇಔಟ್ ನಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯ ಭವನದಲ್ಲಿ ಡಿಸೆಂಬರ್ 1 ರಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಕಾರ್ಯಕಾರಣಿ ಹಾಗೂ ಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ತಿಳಿಸಿದರು.
ಇದೇ ಸಂದರ್ಭದಲ್ಲಿ ಅಗಲಿದ ಕೋಲಿ ಸಮಾಜ ಹಿರಿಯ ಬಂಡಾಯ ಸಾಹಿತಿ ಡಾ. ಚನ್ನಣ್ಣ ವಾಲೀಕಾರ ರವರ ಆತ್ಮಕ್ಕೆ ಮೌನಾಚರಣೆಯ ಮೂಲಕ ಶಾಂತಿ ಕೋರಲಾಯಿತು
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಎರಡೂ ದಶಕಗಳ ಬಳಿಕ ಅಖಿಲ ಭಾರತೀಯ ಕೋಲಿ ಸಮಾಜದ ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರ್ನಾಟಕ ರಾಜ್ಯಕ್ಕೆ ಒಲಿದು ಬಂದಿದ್ದು, ಅದರಲ್ಲೂ ಕಲಬುರಗಿಯಲ್ಲಿ 2ನೇ ಬಾರಿ ಆತಿಥ್ಯ ವಹಿಸಿಕೊಂಡಿರುವುದು ಸಂತಸದ ವಿಚಾರ ಎಂದರು.
ಕೋಲಿ ಸಮಾಜವನ್ನು ST ಗೆ ಸೇರಿಸಬೇಕು ಎಂಬುದು ನಮ್ಮ ನಿಲುವಾಗಿದೆ ಎಂದು ಅವರು ತಿಳಿಸಿದರು. ದೇಶದ 16 ರಾಜ್ಯಗಳಲ್ಲಿ SC 9 ರಾಜ್ಯಗಳಲ್ಲಿ ST ಮೀಸಲಾತಿ ಹೊಂದಿರುವ ಸಮಾಜವು ಈ ರಾಜ್ಯದಲ್ಲಿ ಮಾತ್ರ ಹಿಂದುಳಿದ ಪ್ರವರ್ಗ 1 ಕ್ಕೆ ಸೇರಿಸಲಾಗಿದೆ. ಕೇಂದ್ರ ಸರಕಾರದ ಮೇಲೆ ಒತ್ತಡ ತರುವುದಕ್ಕಾಗಿ ಈ ರಾಷ್ಟ್ರೀಯ ಕಾರ್ಯಕಾರಣಿ ಆಯೋಜಿಸಲಾಗಿದೆ ಎಂದರು.
ನಿಮ್ಮ ಆರ್ಥಿಕ ಸಹಾಯ ದಿಂದ ಮಾತ್ರ ಮಾಧ್ಯಮವನ್ನು ಪಾರದರ್ಶಕವಾಗಿ ಮುನ್ನಡೆಸಲು ಸಾಧ್ಯ
ಮಾಧ್ಯಮ ಮುನ್ನೆಡೆಯಲ್ಲು ನಿವು 100,500,1000,2500,5000 ಕ್ಕೂ ಹೆಚ್ಚುನ ದೇಣಿಗೆ ಸಹಾಯ ನೀಡಬಹುದು
ಅಂಬಿಗ ನ್ಯೂಸ್ ಟಿವಿ ಗೆ ಸಹಾಯ ನೀಡಲು ಈ ಕೇಳಗಿನ ಕೋಡ ಬಳಸಿ ಆನ್ ಲೈನ್ ದೇಣಿಗೆ ನೀಡಬಹುದು
Be the first to comment