ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಹುನಗುಂದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಹಿಂದಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ೨೦೨೦- ೨೧ ನೇ ಸಾಲಿನ ಶುಲ್ಕ ವಿನಾಯಿತಿ ಮಂಜೂರ ಮಾಡಿ ವಿದ್ಯಾರ್ಥಿಗಳ ಬ್ಯಾಂಕ ಖಾತೆಗಳಿಗೆ ಜಮಾ ಮಾಡಲಾಗಿದೆ ಆದರೆ ಕೆಲವು ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ ಸಂಖ್ಯೆ ಜೋಡಣೆ ಮಾಡದೇ ಇರುವುದರಿಂದ ಮಂಜೂರಾದ ಮೊತ್ತ ಬ್ಯಾಂಕ್ ಖಾತೆಗೆ ಜಮಾ ಆಗಿರುವುದಿಲ್ಲ ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಮಂಜೂರು ಆಗದೇ ಇರುವ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ಕಾಲೇಜುಗಳ ಪ್ರಕಟಣಾ ಫಲಕದಲ್ಲಿ ಪ್ರಕಟಿಸಲಾಗಿದೆ ಹಾಗೂ ಸಂಭಂದಿಸಿದ ಪ್ರಾಚಾರ್ಯರಿಗೂ ಪಟ್ಟಿಯನ್ನು ನೀಡಲಾಗಿದೆ ಅಂತಹ ವಿದ್ಯಾರ್ಥಿಗಳು ಕೂಡಲೇ ತಮ್ಮ ಬ್ಯಾಂಕ ಖಾತೆ ಇರುವ ಬ್ಯಾಂಕುಗಳಿಗೆ ಹೋಗಿ ತಮ್ಮ ಆದಾರ ಸಂಖ್ಯೆಯನ್ನು ಬ್ಯಾಂಕ ಖಾತೆಗೆ ಜೋಡಣೆ ಮಾಡಿಸುವುದು.
ಇಲ್ಲದಿದ್ದರೆ ಮಂಜೂರಾದ ಶುಲ್ಕು ವಿನಾಯಿತಿ ತಾನಾಗಿಯೇ ರದ್ದಾಗುತ್ತದೆ ಎಂದು ಈ ಹಿಂದೆ ಪ್ರಕಟಣೆ ಹೊರಡಿಸಲಾಗಿತ್ತು. ಆದರೂ ಇನ್ನೂ ಕೆಲವು ವಿದ್ಯಾರ್ಥಿಗಳು ಆಧಾರ ಜೋಡಣೆ ಮಾಡಿಸಿರುವುದಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಕೂಡಲೇ ಸಂಬಂಧಿಸಿದ ಬ್ಯಾಂಕಗೆ ಬೇಟಿ ನೀಡಿ ದಿನಾಂಕ:- ೩೧/೦೧/೨೦೨೨ ರ ರೊಳಗೆ ಬ್ಯಾಂಕ್ ಖಾತೆಗ ಆದಾರ ಸಂಖ್ಯೆ ಜೋಡಣೆ ಮಾಡಿ NPCI ಮ್ಯಾಪಿಂಗ್ ಮಾಡಿಸುವುದು. ಆಧಾರ ಜೋಡಣೆ ಆಗದಿದ್ದರೆ ಮಂಜೂರಾಗಿರುವ ವಿದ್ಯಾರ್ಥಿ ವೇತನ ತನ್ನಿಂದ ತಾನೇ ರದ್ದಾಗುತ್ತದೆ ಎಂದು ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ತಾಲೂಕ ಹಿಂದುಳಿದ ವರ್ಗಗಳ ಕಲ್ಯಣಾಧಿಕಾರಿಗಳ ಕಛೇರಿ ಹಾಗೂ ಮೊಬೈಲ್ ಸಂಖ್ಯೆ. 84978 50515, 8971281463, 7259805428 ಗೆ ಸಂಪರ್ಕಿಸಲು ತಿಳಿಸಿದೆ.
Be the first to comment