ಜಿಲ್ಲಾ ಸುದ್ದಿಗಳು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಶಾಖೆ ಇಳಕಲ್ ಹಾಗೂ ಹುನಗುಂದ ವತಿಯಿಂದ ನೌಕರರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕೇಂದ್ರ ಸಂಘದ ನಿರ್ದೇಶನದ ಮೇರೆಗೆ ಹುನಗುಂದ ಮತಕ್ಷೇತ್ರದ ಮಾನ್ಯ ಶಾಸಕರಾದ ಸನ್ಮಾನ್ಯಶ್ರೀ ದೊಡ್ಡನಗೌಡ ಜಿ ಪಾಟೀಲ ರವರಿಗೆ ಮನವಿ ಸಲ್ಲಿಸಲಾಯಿತು.
ಬಾಗಲಕೋಟೆ:
ಪ್ರಮುಖ ಬೇಡಿಕೆಗಳು
1) ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮಾನವಾದ ವೇತನ ಹಾಗೂ ಭತ್ಯೆಗಳನ್ನು ಜಾರಿಗೊಳಿಸುವುದು.
2) ನೂತನ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ
3) ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಮಾಡುವ ಬಗ್ಗೆ
4) ಪ್ರಾಥಮಿಕ ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಜ್ವಲಂತ ಸಮಸ್ಯೆಗಳ ಬಗ್ಗೆ ಮಾನ್ಯ ಶಾಸಕರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.
ಹುನಗುಂದ ತಾಲೂಕಿನ ಅಧ್ಯಕ್ಷರಾದ ಸಂಗಣ್ಣ ಹಂಡಿ ಸರ್ವರನ್ನು ಸ್ವಾಗತಿಸಿದರು.ಇಳಕಲ್ ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ಮನವಿಯನ್ನು ಮಂಡಿಸಿದರು.
ಶಾಸಕರಾದ ದೊಡ್ಡನಗೌಡ ಪಾಟೀಲರು ಮಾತನಾಡಿ ಸರ್ಕಾರಿ ನೌಕರರ ಪ್ರಮುಖ ಬೇಡಿಕಗಳ ಬಗ್ಗೆ ಈಗಾಗಲೆ ಪರಿಶೀಲಿಸಿದ್ದು, ಮತ್ತೊಮ್ಮೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿ ಶಿಫಾರಸ್ಸು ಪತ್ರವನ್ನು ಸಹ ನೀಡಿದರು.
ಈ ಸಂದರ್ಭದಲ್ಲಿ ನೌಕರ ಸಂಘದ ಎರಡು ತಾಲೂಕಿನ ಪದಾಧಿಕಾರಿಗಳಾದ ಗುಂಡಪ್ಪ ಕುರಿ,ಎಂ ಎಚ್ ಗೌಡರ,ಎಸ್ ಎನ್ ಗಡೇದ,ಮಠಪತಿ,ಈಶ್ವರ ಗೌಡರ ಹಾಗೂ ಎಲ್ಲಾ ಹಂತದ ನೌಕರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರಾದ ಸಿ ಎಸ್ ಕೊಣ್ಣೂರ, ಆರ್ ಎನ್ ಮಾಸರಡ್ಡಿ,ಎಸ್ ಬಿ ಶೀಲವಂತರ, ಶರಣಬಸು ಕೊಣ್ಣೂರ,ಶಂಕರ ಲಮಾಣಿ, ಸಂಗಮೇಶ ಪಾಟೀಲ ಪದಾಧಿಕಾರಿಗಳಾದ ಎ ಜಿ ರಾಂಪೂರ,ಎಂ ಎಸ್ ಬೀಳಗಿ,ಎಸ್ ಕೆ ಬಂಡರಗಲ್, ಡಿ ಎಂ ಬಾಗವಾನ ಹಾಗೂ ಎಲ್ಲಾ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳು, ಸದಸ್ಯರು ಹಾಗೂ ಸರಕಾರಿ ನೌಕರರು ಉಪಸ್ಥಿತರಿದ್ದರು.
Be the first to comment