ವಿದ್ಯುತ್ ಚಾರ್ಜ : ದನಕರ ಕಟ್ಟದಿರಲು ಸೂಚನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಕೊಪ್ಪಳ ಏತ ನೀರಾವರಿ ಯೋಜನೆಗೆ ಬಾಗಲಕೋಟದಿಂದ ಬಲಕುಂದಿ ಗ್ರಾಮದವರೆಗೆ ಮತ್ತು ಬಲಕುಂದಿ ಗ್ರಾಮದಿಂದ ಮರೋಳ ಗ್ರಾಮದವರೆಗೆ 220 ಕೆವಿ ಹೊಸದಾಗಿ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದ್ದು, ಅದನ್ನು ಹಾಲಿ ಇರುವ ಬಾಗಲಕೋಟ 220/110/11 ಕೆವಿ ವಿದ್ಯುತ್ ಉಪ-ಕೇಂದ್ರದಿಂದ ಉದ್ದೇಶಿತ ಬಲಕುಂದಿ 220/11 ಕೆವಿ ವಿದ್ಯುತ್ ಉಪ-ಕೇಂದ್ರದವರೆಗೆ ಮತ್ತು ಬಲಕುಂದಿಯಿಂದ ಮರೋಳ ವರೆಗೂ ಹೊಸದಾಗಿ ವಿದ್ಯುತ್ ಪ್ರಸರಣ ಮಾರ್ಗ ನಿರ್ಮಿಸಲಾಗಿದ್ದು ವಿದ್ಯುತ್ ಚಾಲನೆಗೊಳಿಸಬೇಕಾಗಿದೆ.

ಹೊಸದಾಗಿ ನಿರ್ಮಾಣ ಮಾಡಿರುವ 220ಕೆವಿ ಮಾರ್ಗದ ಉದ್ದ ಸುಮಾರು 85.00 ಕಿ.ಮೀ ಮತ್ತು ಈ ಪ್ರಸರಣ ಮಾರ್ಗವು ಹೂಲಗೇರಿ, ಕಗಲಗೊಂಬಾ, ಸೂಳಿಕೇರಿ, ನೀರಲಕೇರಿ, ಶಿರೂರ ತಾಂಡಾ, ಶಿರೂರು, ಕಮತಗಿ, ಬೇವಿನಾಳ, ಹಿರೇಮಾಗಿ, ಹಿರೇಮಾಗಿ ತಾಂಡಾ, ತಿಮ್ಮಾಪೂರ, ಹಿರೇಬಾದವಾಡಗಿ, ಹುನಗುಂದ, ಚಿಕ್ಕಬಾದವಾಡಗಿ, ಚಿತ್ವಾಡಗಿ, ಹುಚನೂರು, ಹುಲಿಗೆರೆ, ಬಲಕುಂದಿ, ತಿಮ್ಮಾಪೂರ ಮತ್ತು ಮರೋಳ ಗ್ರಾಮಗಳ ಸೀಮಾಂತರದಲ್ಲಿ ಹಾದು ಹೋಗುತ್ತಿದ್ದು, ಈ ಪ್ರಸರಣ ಮಾರ್ಗವನ್ನು ಜನವರಿ 17 ಅಥವಾ ನಂತರದ ದಿನಗಳಲ್ಲಿ ವಿದ್ಯುದ್ದೀಕರಿಸಲಾಗುವುದು.

ಸಾರ್ವಜನಿಕರು ಈ ಮೇಲೆ ತಿಳಿಸಿದ ಮಾರ್ಗಗಳ ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ, ಅವುಗಳಿಗೆ ದನಕರುಗಳನ್ನು ಕಟ್ಟುವುದಾಗಲಿ, ಹಸಿರುಬಳ್ಳಿ ಅಥವಾ ಲೋಹದ ತಂತಿಗಳನ್ನು ಎಸೆಯುವುದನ್ನಾಗಲಿ ಮಾಡಬಾರದು. ಇದರಿಂದ ಸಾರ್ವಜನಿಕರ ಆಸ್ತಿ-ಪಾಸ್ತಿ ಹಾಗೂ ಪ್ರಾಣಕ್ಕೆ ಹಾನಿಯಾಗುವ ಸಂಭವವಿರುತ್ತದೆ. ಮೇಲೆ ತಿಳಿಸಿರುವ ಯಾವುದೇ ದಷ್ಕೃತ್ಯಗಳನ್ನು ಎಸಗಿ ಅಪಘಾತ ಅಥವಾ ಹಾನಿ ಉಂಟಾದಲ್ಲಿ ಅಂತಹ ಹಾನಿಗೆ ಕೃತ್ಯಗಳನ್ನು ಎಸಗಿದವರೇ ಜವಾಬ್ದಾರರಾಗಿರುತ್ತಾರೆ ಎಂದು ಕೃಷ್ಣಾ ಭಾಗ್ಯ ಜಲ ನಿಗಮ ನಿಯಮಿತ ರೋಡಲಬಂಡಾ ನಾರಾಯಣ ಎಡದಂಡೆ ಕಾಲುವೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Be the first to comment

Leave a Reply

Your email address will not be published.


*