ಜಿಲ್ಲಾ ಸುದ್ದಿಗಳು
ಬಾಗಲಕೋಟೆ: ಕೋವಿಡ್-19 ಮೂರನೇ ಅಲೆ ಪ್ರಾರಂಭವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ವೃದ್ದಿಸುವ ಆಯುರ್ವೇದ ಔಷಧಿಗಳನ್ನು ಪಡೆಯುವಂತೆ ಜಿ.ಪಂ ಸಿಇಓ ಟಿ.ಭೂಬಾಲನ್ ತಿಳಿಸಿದರು.
ಬಾದಾಮಿ ತಾಲೂಕಿನ ಕೆಂದೂರ ಎಲ್.ಟಿ ಗ್ರಾಮದ ಸಮುದಾಯ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆಯುಷ್ ಇಲಾಖೆ, ತಕ್ಷಶೀಲಾ ಸಾಮಾಜಿಕ ಹಾಗೂ ಮಹಿಳಾ ಅಭಿವೃದ್ಧಿ ಸಂಸ್ಥೆ, ನಂದಿಕೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಆಯುಷ್ ಸೇವಾ ಗ್ರಾಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ತಪ್ಪದೇ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಮೇಲಿಂದ ಮೇಲೆ ಕೈಗಳನ್ನು ಸಾಬೂನಿನಿಂದ ತೊಳೆದುಕೊಳ್ಳಬೇಕು. ಕಡ್ಡಾಯವಾಗಿ ಎಲ್ಲರೂ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು ಅಂದಾಗ ಮಾತ್ರ ಕೋವಿಡ್-19 ನಿಯಂತ್ರಣದಲ್ಲಿಡಲು ಸಾಧ್ಯವಾಗುತ್ತದೆ ಎಂದರು.
ಸಾವಿರಾರು ವರ್ಷಗಳ ಹಿಂದಿನ ಇತಿಹಾಸ ವಿರುವ ಆಯುರ್ವೇದ ಪದ್ದತಿಯಲ್ಲಿನ ಔಷಧಿಯುಕ್ತ ಗುಣವಿರುವ ಅರಿಶಿನ, ಮೇಣಸು ಇನ್ನಿತರ ಮನೆಯಲ್ಲಿ ಸಿಗುವಂತ ಸಾಂಬರ್ ಪದಾರ್ಥಗಳನ್ನು ಉಪಯೋಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಅರಿಶಿನ ಹಾಲು ಸಕ್ಕರೆ ಈ 03 ಪದಾರ್ಥಗಳನ್ನು ಸೇರಿಸಿಕೊಂಡು ಸೇವಿಸಿದಲ್ಲಿ ರೋಗ ನಿರೋಧಕ ಶಕ್ತಿಯು ವೃದ್ಧಿಯಾಗಿ ಕೋವಿಡ್-19 ಹಾಗೂ ಇನ್ನಿತರ ಬೇರೆ ಕಾಯಿಲೆಗಳು ಬರದಂತೆ ತಡೆಗಟ್ಟುವ ಶಕ್ತಿಯನ್ನು ಈ ಆಯುರ್ವೇದ ಔಷದ ಹೊಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ ಅಧಿಕಾರಿ ಡಾ.ಅಕ್ಕಮಹಾದೇವಿ ಗಾಣಿಗೇರ ಆಯುಷ್ ಸೇವಾ ಗ್ರಾಮದ ರೂಪ ರೇಷ ಹಾಗೂ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಮನೆ ಮದ್ದು ಬಗ್ಗೆ ತಿಳುವಳಿಕೆ, ಯೋಗ, ಆಯುಷ್ ಆರೋಗ್ಯ ಜಾಗೃತೆ, ದಿನ ಚರ್ಯ, ಋತು ಚರ್ಯ, ಆರೋಗ್ಯ ಕರ ಜೀವನ ಶೈಲಿ, ವೈದ್ಯಕೀಯ ಪರೀಕ್ಷೆ, ಔಷಧಿ ವಿತರಣೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮಾಹಿತಿಯನ್ನು ವೈದ್ಯಾಧಿಕಾರಿಗಳು ಪ್ರತಿಯೊಂದು ಪಲಾನುಭವಿಗಳ ಮನೆಗೆ ಭೇಟಿ ನೀಡಿ, ಮನೆ ಮನೆಗೆ ಆಯುರ್ವೇದವನ್ನು ಮುಖ್ಯ ವಾಹಿಣಿಗೆ ತರುವ ಉದ್ದೆಶದಿಂದ ಈ ಆಯುಷ್ ಸೇವಾ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು, ಇದರ ಪ್ರಯೋಜನೆಯನ್ನು ಪಡೆದುಕೊಳ್ಳಲು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿ.ಪಂ ಸಿಇಓ ಟಿ.ಭೂಬಾಲನ್ ಆಯುಷ್ ಇಲಾಖೆಯ ಐ.ಇ.ಸಿ ವಸ್ತುಗಳಾದ ಐಡಿ ಕಾರ್ಡ, ಕೇಸ್ ಶಿಟ್, ಪೋಸ್ಟರ್ಸ್ ಹಾಗೂ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಕಿಟ್ ಹಾಗೂ ಔಷಧಿ ಸಸಿಗಳನ್ನು ಸಾಂಕೇತಿಕವಾಗಿ ಪಲಾನುಭವಿಗಳಿಗೆ ವಿತರಿಸಿದರು. ಕಾರ್ಯಕ್ರಮದಲ್ಲಿ ಕೆಂದೂರ ಗ್ರಾ.ಪಂ ಸದಸ್ಯ ಹೇಮಂತ ದೊಡ್ಡಮನಿ, ಹುನಗುಂದ ಆಯುಷ ಆಸ್ಪತ್ತೆಯ ಹಿರಿಯ ವೈದ್ಯಾಧಿಕಾರಿ ಡಾ.ಚಂದ್ರಕಾಂತ ರಕ್ಕಸಗಿ, ವೈದ್ಯಾಧಿಕಾರಿ ಡಾ.ಶಿವಾನಂದ ನಿಡಗುಂದಿ ಸೇರಿದಂತೆ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬಾಗವಹಿಸಿದ್ದರು.
ವೈದ್ಯಾಧಿಕಾರಿಳು ಪಲಾನುಭವಿಗಳ ಮನೆ ಮನೆಗೆ ಭೇಟಿ ನೀಡಿ ಆರೋಗ್ಯ ಒಟ್ಟು 150 ರೋಗಿಗಳನ್ನು ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಯಿತು. ಬಹುತೇಕ ರೋಗಿಗಳು ಸಂದಿ, ಶೂಲ ವ್ಯಾಧಿಯಿಂದ ಬಳಲುತ್ತಿರುವುದು ಕಂಡುಬಂದಿತು. ಆಯ್ದ ಸಂದಿ ಶೂಲವ್ಯಾಧಿ ಇರುವ ರೋಗಿಗಳನ್ನು ಸರ್ಕಾರಿ ಆಯುರ್ವೇದ ಆಸ್ಪತ್ರೆ ಹೆಚ್ಚಿನ ಚಿಕಿತ್ಸೆಗಾಗಿ ರೇಪರ್ ಮಾಡಲಾಯಿತು.
Be the first to comment