ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ನವನಗರದ ಸೇಕ್ಟರ-05 ರಲ್ಲಿ ಇಂದು ಹೊಲಿಗೆ ಹಾಗೂ ಬ್ಯೂಟಿಪಾರ್ಲರ್ ತರಬೇತಿ ಯನ್ನು ಮಲ್ಲಿಕಾರ್ಜುನ ಚರಂತಿಮಠ ಇವರು ಉದ್ಘಾಟಿಸಿದರು.
ಮಹಿಳೆಯರು ಸ್ವಾವಲಂಬಿ ಯಾಗಿ ಹೊಲಿಗೆ ಹಾಗೂ ಬ್ಯೂಟಿಪಾರ್ಲರ್ ತರಬೇತಿ ಪಡೆದುಕೊಂಡು ಆರ್ಥಿಕತೆಯಿಂದ ಬಲಿಷ್ಟರಾಗಲು ಅನುಕೂಲ ವಾಗುತ್ತದೆ. ಇದರ ಸದುಪಯೋಗ ಎಲ್ಲ ಮಹಿಳೆಯರು ಪಡೆದುಕೊಳ್ಳಬೇಕು ಎಂದರು.
ಕಾಮಧೇನು ಸಂಸ್ಥೆಯ ಅಧ್ಯಕ್ಷರಾದ ರವಿ ಕುಮಟಗಿ ಮಾತನಾಡಿ ತರಬೇತಿಗೆ ಬಂದ ಮಾತೆಯರಿಗೆ ತಾವೂ ಹೊಲಿಗೆ ಹಾಗೂ ಬ್ಯೂಟಿಪಾರ್ಲರ್ ಕಲಿತು ಉದ್ಯೋಗ ಸೃಷ್ಟಿ ಮಾಡಬೇಕಂದರು.
ಕಾಮಧೇನು ಸಂಸ್ಥೆಯ ಸದಸ್ಯರಾದ ಸಂತೋಷ ಹೋಕ್ರಾಣಿ ಯವರು ಬಾಗಲಕೋಟೆ ಯಲ್ಲಿ ಉದ್ಯೋಗ ಕೊರತೆ ಇದೆ ಎರಡೂ ವರ್ಷದಿಂದ ಕೊರನ ದಿಂದ ಜನ ಜೀವನ ಸರಿಯಾಗಿ ಇಲ್ಲ ಆದ್ದರಿಂದ ತಾವು ತರಬೇತಿ ಪಡೆದು ಉದ್ಯೋಗ ಮಾಡಬೇಕು ಎಂದರು.
ಸಂಸ್ಥೆ ಕಾರ್ಯದರ್ಶಿ ವಿಜಯ ಸುಲಾಖೆ ಮಾತನಾಡಿ ನಾನು ಒಬ್ಬ ಟೇಲರ್ ಉದ್ಯೋಗಿ ನಾವು ಕಲಿತ ವಿದ್ಯೆ ಅದು ಮರೆಯಲು ಸಾದ್ಯವಿಲ್ಲ ಅದು ನಮಗೆ ನಾವು ಎಲ್ಲಿದ್ದರೂ ಬದುಕಲು ದೈರ್ಯ ಕೊಡುತ್ತದೆ ಆದ್ದರಿಂದ ಎಲ್ಲರೂ ಹೆಚ್ಚಿನ ಆಸಕ್ತಿ ಯಿಂದ ತರಬೇತಿ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಅರುಣ ಲೊಕಾಪೂರ, ರಾಜು ಬಾಸುತಕರ, ರಾಜು ಗೌಳಿ,ರಾಘು ಯಾದಗಿರಿ ಹಾಗೂ ತರಬೇತಿ ಪಡೆಯಲು ಬಂದಿರುವ ಮಾತೆಯರು ಉಪಸ್ಥಿತರಿದ್ದರು.
Be the first to comment