ಹಳದಿಪುರದಲ್ಲಿ ಐ.ಆರ್.ಬಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಪ್ರತಿಭಟನೆ; ಕಾಮಗಾರಿ ಪ್ರಾರಂಭಿಸದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ..

ವರದಿ- ಸುಚಿತ್ರಾ ನಾಯ್ಕ ಹೊನ್ನಾವರ

ರಾಜ್ಯ ಸುದ್ದಿಗಳು 

ಹೊನ್ನಾವರ

ತಾಲೂಕಿನ ಹಳದಿಪುರದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ನಡೆದ ಅನಾಹುತಗಳಿಗೆ ರೊಚ್ಚಿಗೆದ್ದ ಸ್ಥಳೀಯರು ಬುಧವಾರ ಪ್ರತಿಭಟನೆಗೆ ಇಳಿದ ಘಟನೆ ನಡೆದಿದೆ. ಐಆರ್‌ಬಿ ಕೊಟ್ಟ ಭರವಸೆಯಂತೆ ಸೋಮವಾರದಿಂದ ವಿವಿಧ ಬೇಡಿಕೆ ಹಾಗೂ ಬೀದಿ ದೀಪದಕಾಮಗಾರಿ ಕೆಲಸ ಪ್ರಾರಂಭ ಮಾಡಬೇಕು ಹಾಗೆ ನಡೆದುಕೊಳ್ಳದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಹೂಡುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.ಇದೆಲ್ಲದರ ಮಧ್ಯೆ ಸಾರ್ವಜನಿಕ ಹಿತಾಸಕ್ತಿಗಾಗಿ ಕೆಲವು ಪ್ರಜ್ಞಾವಂತರು ಮಾಹಿತಿ ಹಕ್ಕು ಅಧಿನಿಯಮದಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಐ.ಆರ್. ಬಿ. ಯ ನಡುವಿನ ಎಲ್ಲಾಒಪ್ಪಂದದ ಕುರಿತಂತೆ ಮಾಹಿತಿ ಪಡೆದು ನಿಗದಿತ ಸಮಯದೊಳಗೆ ಕೆಲಸ ಪ್ರಾರಂಭಿಸದೇ, ಬೇಡಿಕೆ ಈಡೇರದೇ ಇದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದಾಗಿ ಹಾಗೂ ಗುತ್ತಿಗೆ ಪಡೆದಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವ ಶಪಥ ಮಾಡಿದ್ದಾರೆ.

CHETAN KENDULI

ಹಣದ ಮದದಿಂದ ಮೆರೆಯುತ್ತಿರುವಕಂಪನಿಯ ವಿರುದ್ಧ ಈಗ ಪಂಚಾಯತ್ ಮಟ್ಟದಲ್ಲಿ ಹೋರಾಟ ನಡೆದಿದ್ದುಕೊಟ್ಟ ಭರವಸೆಯಲ್ಲಿ ಸ್ವಲ್ಪವೂ ವ್ಯತ್ಯಾಸವಾದರೂ ಇಡಿಯ ಜಿಲ್ಲೆಯ ಪ್ರತಿಭಟನೆಯಾಗಿ ಪರಿವರ್ತನೆ ಆಗುವ ಸಾಧ್ಯತೆಗಳಿವೆ.ತಹಶೀಲ್ದಾರ ಸಮ್ಮುಖದಲ್ಲಿ ಗುತ್ತಿಗೆ ಅಧಿಕಾರಿಗಳು ಸೋಮವಾರದಿಂದ ಕೆಲಸ ಪ್ರಾರಂಭಿಸುತ್ತೇವೆ ಹಾಗೂ ಎಲ್ಲಾ ಬೇಡಿಕೆ ಈಡೇರಿಸುತ್ತೇವೆ ಎಂದು ಭರವಸೆ ನೀಡದಾಗ ಪ್ರತಿಭಟನೆ ಮೊಟಕುಗೊಳಿಸಿ ನಿಗದಿತ ಸಮಯದೊಳಗೆ ಕಾಮಗಾರಿ ಪ್ರಾರಂಭಿಸದೇಇದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.

Be the first to comment

Leave a Reply

Your email address will not be published.


*