ಕೆಂಭಾವಿ :ರಕ್ತ ದಾನ ಶ್ರೇಷ್ಠವಾದದ್ದು ರಕ್ತ ದಾನ ಮಾಡುವ ಮೂಲಕ ಉತ್ತಮ ಆರೋಗ್ಯ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದು ಬಾಬುಗೌಡ ಮಾಲಿ ಪಾಟೀಲ್ ಹೇಳಿದರು. ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶ್ರೀ ಷ ಬ್ರ ಲಿಂ ಅಯ್ಯಪ್ಪಯ್ಯ ಶಿವಾಚಾರ್ಯ ಮಹಾಸ್ವಾಮಿಗಳು ಪುಣ್ಯ ಸ್ಮರಣೋತ್ಸವ ಅಂಗವಾಗಿ ಶ್ರೀ ಗುರು ಕಾಂತೇಶ್ವರ ಜನ ಕಲ್ಯಾಣ ಸೇವಾ ಪ್ರತಿಷ್ಠಾನ ಹಾಗೂ ಡಾ ಸುರಗಿಮಠ ರಕ್ತ ಕೇಂದ್ರ ಯಾದಗಿರಿ ಯವರ ಆಶ್ರಯದಲ್ಲಿ ಜರುಗಿದ ರಕ್ತ ದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು.
ರಕ್ತ ದಾನ ಮಾಡುವುದರಿಂದ ಆರೋಗ್ಯ ಸಮತೋಲನ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಚನ್ನಬಸವ ಶಿವಾಚಾರ್ಯರು ಈ ಸಂದರ್ಭದಲ್ಲಿ ಹೇಳಿದರು ರಕ್ತದಾನ ಮಾಡುವುದರಿಂದ ದೇಹ ಮನಸ್ಸು ಸದೃಢವಾಗುತ್ತದೆ ಸದ್ಭಕ್ತರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮತ್ತೊಬ್ಬರ ಜೀವ ಉಳಿಸೋಣ ಎಂದು ಹೇಳಿದರು, ಪ್ರಾಸ್ತಾವಿಕ ಮಾತನಾಡಿದ ಡಾ, ಹೇಮಾ ಹೇಳಿದರು. ರಕ್ತದಾನದ ಸದುಪಯೋಗದ ಕುರಿತು ಜಾಗೃತಿ ಮೂಡಿಸಿದರು, ಇದೆ ಸಂದರ್ಭದಲ್ಲಿ ಅಶೋಕ ಭಂಗ, ಶಿವುಕುಮಾರ ಉಮಾಕಾಂತ ಬಂದೇ, ಸೇರಿದಂತೆ ಅನೇಕರು ರಕ್ತದಾನ ಮಾಡಿದರು ತಾಲೂಕು ರೈತ ಸಂಘ ಅಧ್ಯಕ್ಷ ಎಚ್ ಆರ್ ಬಡಿಗೇರ, ಯಮನಪ್ಪ ಕುಂಬಾರ,ಡಾ ಯಂಕನಗೌಡ ಪಾಟೀಲ, ಎನ್ ಎಮ್ ನದಾಫ್, ಮಹೇಶ ಪಾಟೀಲ, ಹಾಗೂ ಡಾ ಸುರಗಿಮಠ ಆಸ್ಪತ್ರೆಯ ಸಿಬ್ಬಂದಿಗಳು, ಸುತ್ತಮುತ್ತಲಿನ ಶ್ರೀಮಠದ ಭಕ್ತರು ಭಾಗವಹಿಸಿದ್ದರು
Be the first to comment