ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ತಾಲ್ಲೂಕು ಶಾಖೆ ಇಳಕಲ್ ವತಿಯಿಂದ ರಾಜ್ಯ ಪರಿಷತ್ ಸದಸ್ಯ ಈಶ್ವರ ಗಡ್ಡಿಯವರು ಪದೋನ್ನತಿ ಪಡೆದು ಶಿರಸ್ತೇದಾರ ಆದ ಪ್ರಯುಕ್ತ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಇಳಕಲ್ ತಾಲ್ಲೂಕು ರಾಜ್ಯೋತ್ಸವ ಪ್ರಶಸ್ತಿ ಪಡೆದ ಸರಕಾರಿ ನೌಕರರಾದ ಮಲ್ಲಿಕಾರ್ಜುನ ಅಂಗಡಿ,ಎಸ್ ಎಸ್ ರೇಶ್ಮಿ,ಎಸ್ ಡಿ ಮಲಗಿಹಾಳ,ವಿ ವಿ ನಂದರಗಿ,ಚೇತನ ಬೆನಕನಡೋಣಿ,ಮೆಹಬೂಬ ಆಗ್ರಾ,ಅಹಮದ್ ವಾಲಿಕಾರ,ಉತ್ತಮ ಸರ್ಕಾರಿ ಶಾಲೆಯೆಂದು ಆಯ್ಕೆ ಆದ ಸ.ಹಿ.ಪ್ರಾ.ಶಾಲೆ ಚಿಕನಾಳ ಶಾಲೆಯ ಮುಖ್ಯ ಗುರುಗಳಿಗೆ ಸಂಘದ ವತಿಯಿಂದ ಗೌರವ ಸನ್ಮಾನ ಕಾರ್ಯಕ್ರಮ ನಡೆಯಿತು ಹಾಗೂ ಸರಕಾರಿ ನೌಕರರ ಸಂಘಕ್ಕೆ ನೂತನ ನಾಮನಿರ್ದೇಶಿತ ಸದಸ್ಯರನ್ನಾಗಿ ಮಲ್ಲಿಕಾರ್ಜುನ ಪಿ ಗೋಟೂರ, ಶ್ರೀಕಾಂತ ಆವಿನ,ಶ್ರೀಮತಿ ಶೋಭಾ ಸಂಕದಾಳ,ಭೀಮಣ್ಣ ಹೊಸಮನಿ,ಶ್ರೀಮತಿ ಜಿ ಕೆ ಕುಂಟೋಜಿ, ಮನೋಹರ ಹಾದಿಮನಿ,ಸೋಮಲಿಂಗಯ್ಯ ಯಾವಗಲ್ಲಮಠ,ಗೋರಖನಾಥ ರಾಠೋಡ,ಝಡ್ ಐ ಸೊಂಡೂರ ರವರನ್ನು ತಾಲ್ಲೂಕು ಅಧ್ಯಕ್ಷರಾದ ಪರಶುರಾಮ ಪಮ್ಮಾರ ರವರು ನೇಮಕ ಮಾಡಿ ಪ್ರಮಾಣ ಪತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಈಶ್ವರ ಗಡ್ಡಿ ರವರು ಮಾತನಾಡಿ ಇಳಕಲ್ ತಾಲ್ಲೂಕು ಶಾಖೆಯು ರಾಜ್ಯ, ಜಿಲ್ಲಾ ಮಟ್ಟದಲ್ಲಿಯೇ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದ್ದು,ಸಂಘದಿಂದ ಆಗುತ್ತಿರುವ ಈ ಸನ್ಮಾನ ಕಾರ್ಯಕ್ರಮಕ್ಕೆ ಚಿರ ಋಣಿ ಯಾಗಿರುತ್ತೇನೆ ಎಂದರು. ಹಾಗೂ ಎಂ ಪಿ ಗೋಟೂರ,ಆರ್ ಎಂ ಮಾಸರಡ್ಡಿ,ಎಂ ಎಸ್ ಅಂಗಡಿ,ಪರಶುರಾಮ ಪಮ್ಮಾರ ವರು ಸಹ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಶ್ರೀಮತಿ ನಯನಾ ಕಾಟವಾ,ಸ್ವಾಗತವನ್ನು ಉಪಾಧ್ಯಕ್ಷರಾದ ಶರಣಬಸು ಕೊಣ್ಣೂರ,ಪ್ರಾಸ್ತಾವಿಕವಾಗಿ ಗೌರವಾಧ್ಯಕ್ಷರಾದ ಶರಣಪ್ಪ ಎನ್ ಗಡೇದ, ನಿರೂಪಣೆಯನ್ನು ಕಾರ್ಯದರ್ಶಿಗಳಾದ ಗುಂಡಪ್ಪ ಕುರಿ ಹಾಗೂ ಶಂಕರ ಖತ್ರಿ ರವರು ವಂದಿಸಿದರು.
Be the first to comment