ಕನ್ನಡ ರಾಜ್ಯೋತ್ಸವ,ನಾಳೆ ಹಾಸ್ಯ ರಸಮಂಜರಿ ಕಾರ್ಯಕ್ರಮ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಇಳಕಲ್ಲ ತಾಲೂಕಿನ ಕೆಲೂರ ಗ್ರಾಮದ ಶ್ರೀ ಸಿರಿಗನ್ನಡ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘದ ವತಿಯಿಂದ ನಾಳೆ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಶ್ರೀ ಭುವನೇಶ್ವರಿ ದೇವಿ ಭಾವಚಿತ್ರವನ್ನು ಕುಂಭ,ಕಳಸ ಹಾಗೂ ಸಕಲ ವಾದ್ಯಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವುದರೊಂದಿಗೆ ನಡೆಯಲಿದೆ.

ಅಂದು ಸಾಯಂಕಾಲ 6 ಗಂಟೆಗೆ ರಂಗಮಂದಿರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಜರುಗುವುದು. ಕಾರ್ಯಕ್ರಮದ ದಿವ್ಯ ಸಾನಿದ್ಯ ಶ್ರೀ ಷ.ಬ್ರ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಡಾ.ಶಿವಕುಮಾರ ಸ್ವಾಮಿಗಳು ಸಿದ್ದನಕೊಳ್ಳ,ಶ್ರೀ ಮೇಘರಾಜೇಂದ್ರ ಮಹಾ ಪುರುಷರು ಮರನಾಳ ಇವರು ವಹಿಸುವರು. ಹುನಗುಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮ ಉದ್ಘಾಟಿಸುವರು, ಹುನಗುಂದ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಅಧ್ಯಕ್ಷತೆ ವಹಿಸುವುರು. ಮುಖ್ಯ ಅತಿಥಿಗಳಾಗಿ ಎಸ್.ಜಿ.ನಂಜಯ್ಯನಮಠ, ಎಸ್.ಆರ್.ನವಲಿಹಿರೇಮಠ,ಹುಸ್ಮಾನಗಣಿ ಹುಮನಾಬಾದ,ಅಪ್ಪಾಸಾಹೇಬ ನಾಡಗೌಡರ, ಮಹಾಂತೇಶ ಆರ್ ಪಾಟೀಲ್,ಗೌಡಪ್ಪ ಕೊಪ್ಪದ ಆಗಮಿಸುವರು.

ಸಮಾರಂಭದ ವಿಶೇಷ ಉಪನ್ಯಾಸಕರಾಗಿ ಜಿ.ಜಿ.ಹಿರೇಮಠ ಪ್ರಾಚಾರ್ಯರು ಸ.ಪ್ರ.ದ ಕಾಲೇಜು ಬದಾಮಿ,ಸಂಗಣ್ಣ ಗದ್ದಿ ಮಾಜಿ ತಾಲೂಕಾ ಸಾಹಿತ್ಯ ಪರಿಷತ್ ಅಧ್ಯಕ್ಷರು ಇಲಕಲ್ಲ ಇವರು ಆಗಮಿಸುವರು.ಸಂಜೆ 8ಕ್ಕೆ ಕಲಾ ಸಿಂಚನ ಮೆಲೋಡಿಸ್ ಯರಗಲ್ಲ ಇವರಿಂದ ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

Be the first to comment

Leave a Reply

Your email address will not be published.


*