ಯೋಗದಿಂದ ಹಲವು ರೋಗಗಳು ದೂರ

ವರದಿ:ಶಾಂತಯ್ಯ ಯಾವಗಲ್ಲಮಠ

ಜಿಲ್ಲಾ ಸುದ್ದಿಗಳು

ಮಾನವ ತಾನು ಅನುಭವಿಸುವ ಎಲ್ಲ ಸುಖ ಸೌಭಾಗ್ಯಗಳಿಗೂ‌ ಮುಖ್ಯ ಕಾರಣ ದೇಹಾರೋಗ್ಯ ಭಾಗ್ಯ. ಅಂತಹ ದೇಹಾರೋಗ್ಯವು ಯೋಗಾಸನ ಮಾಡುವುದರಿಂದ ಲಭ್ಯವಾಗುತ್ತದೆ ಎಂದು ಇಲಕಲ್ಲನ ಯೋಗಪಟು ಗಿರೀಶ ಲದ್ವಾ ಹೇಳಿದರು.

ಬಾಗಲಕೋಟೆ:ಗುಡೂರ ಎಸ್ ಸಿ ಗ್ರಾಮದ ಶ್ರೀ ಜನಸ್ನೇಹಿ ಸ್ನೇಹಿತರ ಬಳಗ ಹಾಗೂ ಗ್ರಾಮದ ಯುವಕರ ಸಹಯೋಗದೊಂದಿಗೆ ನಡೆದ ಯೋಗ ಶಿಬಿರದ ಮುಕ್ತಾಯ ಸಮಾರಂಭ ಜರುಗಿತು.

ಈ ಸಭೆ ಕುರಿತು ಮಾತನಾಡಿದ ಗಿರೀಶ ಯೋಗವೆಂದರೆ ಇದು ಕೇವಲ ಶರೀರದ ಕಾಯಿಲೆಗಳ ಅವಶ್ಯಕತೆಗೆ ಅಷ್ಟೇ ಅಲ್ಲ, ಆತ್ಮದಲ್ಲಿ ಪರಮಾತ್ಮನನ್ನು ಕಾಣುವ ಸಾಧನೆ ಇದರಲ್ಲಿ ಅಡಕವಾಗಿದೆ ಮತ್ತು ಯೋಗಾಸನ ಮಾಡುವುದರಿಂದ ಯಾವುದೇ ರೋಗಗಳು ನಮ್ಮತ್ತ ಸುಳಿಯುವುದಿಲ್ಲ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ಹೊಳಿಯಪ್ಪ ರಾಂಪೂರ., ಶಶಿಧರ ರಾಯಬಾಗಿ., ವೀರಣ್ಣ ಮಾಯಾಚಾರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಮದ ಯೋಗ ಪಟುಗಳಾದ ರಮೇಶ ಹಾದಿಮನಿ., ನಾಗರಾಜ ಮಾಯಾಚಾರಿ ಹಾಗೂ ಶಿಕ್ಷಕರಾದ ಶರಣಪ್ಪ ತಾಳಿಕೋಟಿ ಯವರಿಗೆ ಬಳಗದ ವತಿಯಿಂದ ಸನ್ಮಾನ ಮಾಡಲಾಯಿತು. ಮತ್ತು ಶಿಬಿರಾರ್ಥಿಗಳಿಗೆ ಯೋಗ ನಡಿಗೆ ಆರೋಗ್ಯದ ಕಡೆಗೆ ಎಂಬ ಪುಸ್ತಕವನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ಚಿದಾನಂದ ರುದ್ರಾಪೂರಮಠ ನಿರೂಪಿಸಿ ವಂದಿಸಿದರು. ಧರ್ಮಣ್ಣ ಕೂಗಡಿ, ಬಸವರಾಜ ಗಾರವಾಡ,ರಫೀಕ ಇಟಗಿ, ರಿಯಾಜ ತಾಳಿಕೋಟಿ, ಶಶಿಕಾಂತ ಅಡಿಹಾಳ, ರವಿ ಜಡ್ರಾಂಕುಂಟಿ, ಭೀಮಸಿ ಹಡಪದ ಸೇರಿದಂತೆ ಗ್ರಾಮದ ಯುವಕರು ಶೀಬಿರಾರ್ಥಿಗಳು ಇತರರಿದ್ದರು.

Be the first to comment

Leave a Reply

Your email address will not be published.


*