ಕೋಟಿ ಬೆಲೆಬಾಳುವ ಹವಾಮಾನ ಸಂಶೋಧನಾ ಯಂತ್ರ ಮೀನುಗಾರರಿಗೆ ಪತ್ತೆ….!!!

ವರದಿ-ಸುಚಿತ್ರಾ ನಾಯ್ಕ ಹೊನ್ನಾವರ

ಜಿಲ್ಲಾ ಸುದ್ದಿಗಳು 

ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಅರಬ್ಬಿ ಸಮುದ್ರದ ನೇತ್ರಾಣಿ ಮೂಲಕ ಮಹಾರಾಷ್ಟ್ರದ ಬಳಿ ತೇಲಿ ಹೋಗಿದೆ. ಲಕ್ಷ ದ್ವೀಪದಲ್ಲಿ ಹವಾಮಾನ ವೈಪರಿತ್ಯದಿಂದ ಕಳಚಿ ತೇಲಿ ಹೋಗಿದ್ದ ಹವಾಮಾನ ಸಂಶೋಧನಾ ಯಂತ್ರ ಪತ್ತೆ ಆಗಿದೆ. ಹವಾಮಾನ ಸಂಶೋಧನಾ ಯಂತ್ರ ಹತ್ತು ದಿನದಲ್ಲಿ ಏಳುನೂರು ಕಿಲೋಮೀಟರ್ ಸಮುದ್ರದಲ್ಲಿ ಕ್ರಮಿಸಿದೆ. ಕೋಟಿ ಬೆಲೆಬಾಳುವ ಯಂತ್ರವನ್ನು ಇಂದು ಕಾರವಾರದ ಮೀನುಗಾರರು ಹುಡುಕಿ ತಂದಿದ್ದಾರೆ. 

CHETAN KENDULI

ಅಕ್ಟೋಬರ್ 2 ರಂದು ಲಕ್ಷದ್ವೀಪ ಸಮುದ್ರದಲ್ಲಿ ಕಳಚಿಕೊಂಡಿದ್ದ ಯಂತ್ರ ಇಂದು (ಅಕ್ಟೋಬರ್ 20) ಪತ್ತೆ ಆಗಿದೆ. ಹವಾಮಾನ ವೈಪರಿತ್ಯದಿಂದ ಯಂತ್ರವು ಕಳಚಿಕೊಂಡು ತೇಲಿಹೋಗಿತ್ತು. ಬಳಿಕ ಇದೀಗ, ಮಹಾರಾಷ್ಟ್ರದ ಬಳಿ ಹವಾಮಾನ ಸಂಶೋಧನಾ ಯಂತ್ರ ಪತ್ತೆ ಆಗಿದೆ. ಕಾರವಾರದ ಮೀನುಗಾರರು ಯಂತ್ರವನ್ನು ಹುಡುಕಿ ತಂದಿದ್ದಾರೆ. ಕಾರವಾರದ ಸಾಗರ ವಿಜ್ಞಾನ ಕೇಂದ್ರಕ್ಕೆ ಯಂತ್ರ ರವಾನೆ ಮಾಡಲಾಗಿದೆ.

Be the first to comment

Leave a Reply

Your email address will not be published.


*