ವಾಸಿಸಲು ಮನೆ ಇಲ್ಲ ಕುಡಿಯಲು ನೀರಿಲ್ಲ ಕಷ್ಟ ಯಾರಿಗೆ ಹೇಳುವುದು ಗೊತ್ತಿಲ್ಲ 

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಹೌದು ಇದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೇಷ್ಮೆ ನಗರ‌ ದೊಡ್ಡಬಳ್ಳಾಪುರ ತಾಲ್ಲೂಕಿನ ನಂದಿ‌ಮೋರಿ ಪಕ್ಕದಲ್ಲಿರುವ ಮುತ್ತಸಂದ್ರ 3 ನೇ ವಾರ್ಡ್ಎಂಬಲ್ಲಿ ಸುಮಾರು 30 ಕ್ಕೂ ಹೆಚ್ಚು ಕುಟುಂಬಗಳು ಸುಮಾರು 100 ಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಈ ಕುಟುಂಬದವರು ಶೆಡ್ ಗಳನ್ನು ಮಾಡಿಕೊಂಡು ವಾಸವಾಗಿದ್ದಾರೆ.ಮಳೆ ಗಾಳಿ ಚಳಿ ಬಿಸಿಲು ಇದರ ನಡುವೆ ಹಾವು ಮತ್ತು ವಿಷಜಂತುಗಳ ಕಾಟ ಈ ಕುಟುಂಬಗಳು ಸುಮಾರು ಇಪ್ಪತ್ತು ವರ್ಷಗಳಿಂದ ಇಲ್ಲಿಯೇ ವಾಸವಿದ್ದು ತಮ್ಮ ಜೀವನ ಸಾಗಿಸುತ್ತ ಬಂದಿದ್ದಾರೆ .ಇನ್ನೂ ಚುನಾವಣೆ ಬಂದ್ರೆ ಸಾಕು ಎಲ್ಲರು ಬರ್ತಾರೆ ಗೆದ್ದಮೇಲೆ ನಮ್ನಕಡೆ ನೋಡೊದೆ ಇಲ್ಲ ನಾವೇನು ಪಾಪ ಮಾಡಿದ್ದೇವೆ ಅಂತ ತಮ್ಮ ನೋವನ್ನ ಹೇಳಿಕೊಂಡಿದ್ದಾರೆ

CHETAN KENDULI

 ಇನ್ನಾದರು ಆದಷ್ಟು ಬೇಗಾ ನಮಗೆ ಮನೆ ನಿರ್ಮಾಣ ಮಾಡಲು ಜಾಗದ ಅವಕಾಶವನ್ನು ಮಾಡಿ ಕೊಡಿ ಅಂತ ತಮ್ಮ ಅಳಲನ್ನು‌ ತೋಡಿಕೊಂಡಿದ್ದಾರೆ.ಶೆಡ್ ಗಳಲ್ಲಿ ಜೀವನ ನಡೆಸುತ್ತಿರುವ ಕುಟುಂಬಗಳಕಡೆ ತಿರುಗಿ ನೋಡದ ಜನಪ್ರತಿನಿದಿಗಳು‌ ಒಂದು ಕಡೆ ನಾವೇನು ಮಾಡೋಕಾಗಲ್ಲ ಅಂತ ಕೈ ಕಟ್ಟಿ ಕುಳಿತ ಅಧಿಕಾರಿಗಳು ಮತ್ತೊಂದೆಡೆ ಇನ್ಯಾವಾಗ ಈ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಅನ್ನೊದು ಕಾದು ನೋಡಬೇಕಿದೆ ಆದಷ್ಟು ಬೇಗಾ ಜನಪ್ರತಿನಿದಿಗಳು ಅಧಿಕಾರಿಗಳು ಇತ್ತ ಗಮನಿಸಿ ಈ ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿಕೊಡಲಿ ಎಂಬುದೇ ಅಂಬಿಗ ನ್ಯೂಸ್ ನ ಕಳಕಳಿಯ ಮನವಿ

Be the first to comment

Leave a Reply

Your email address will not be published.


*