ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ನಗರದ ಶ್ರೀ ದುರ್ಗದೇವಿ ದೇವಸ್ಥಾನ ಮುಚಖಂಡಿ ತಾಂಡಾ ಹಾಗೂ ನವನಗರದ ಸೆಕ್ಟರ ಸಂಖ್ಯೆ-15ರ ಶ್ರೀ ಅಂಬಾಭವಾನಿ ದೇವಸ್ಥಾನ ದಿಂದ ಪ್ರಾರಂಭವಾಗಿ ಎರಡೂ ಪಾದಯಾತ್ರೆಯ ಮಾರ್ಗಗಳೂ APMC ಯಲ್ಲಿ ಸೇರಿ ಮುಚಖಂಡಿ ತಾಂಡಾದ ಶ್ರೀ ದುರ್ಗಾದೇವಿ ದರ್ಶನ ಪಡೆದು ವಿಶೇಷ ಪೂಜೆ, ಆರತಿ ಮಾಡುವದರ ಮುಖಾಂತರ ದೇವಿಯ ಆಶಿರ್ವಾದ ಪಡೆಯಲಾಯಿತು.
ಪೂಜೆಯ ನಂತರ ದೇವಸ್ಥಾನದ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಪ್ರಾಂತ ಸಹ ಸಂಘಟನಾ ಕಾರ್ಯದರ್ಶಿ ಮನೊಹರ ಮಠದ ಭಾರತದ ಹಿಂದೂ ಧರ್ಮದ ಶ್ರೇಷ್ಠತೆ,ಆಚರಣೆ,ಜಗತ್ತಿನಲ್ಲಿ ಎಲ್ಲೂ ಇಲ್ಲ. ದೇಶದಲ್ಲಿ ನೆಡೆಯುವ ಮತಾಂತರ, ಲವ್ ಜಿಹಾದ್ ದೇಶಕ್ಕೆ ಮಾರಕವಾಗಿದೆ. ಈ ದಿಸೆಯಲ್ಲಿ ಕಾರ್ಯ ಮಾಡಬೇಕಾಗಿದೆ ಎಂದು ಹೇಳಿದರು. ವೇದಿಕೆ ಮೇಲೆ ದೇವಸ್ಥಾನ ಅರ್ಚಕರು ಹಾಗೂ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷರು ಗಂಗಾಧರ ಮುರನಾಳ ಇದ್ದರು.
ಮುಚಖಂಡಿ ತಾಂಡಾ ಪ್ರಮುಖರಾದ ರವಿ ಚವ್ಹಾನ, ಬಸವರಾಜ ಚವ್ಹಾನ, ದಿಲೀಪ್ ರಾಠೋಡ, ಗೋಪಾಲ ಲಮಾಣಿ, ಶಂಕರ ಚವ್ಹಾನ, ಲಕ್ಷ್ಮಣ ಲಮಾಣಿ, ರವಿ ರಾಠೋಡ, ಪ್ರದೀಪ ನಾಯಕ ಕಾರ್ಯಕ್ರಮ ಪೂಜೆ ಹಾಗೂ ಕಾರ್ಯಕ್ರಮ ವ್ಯವಸ್ಥೆ ಮಾಡಿದರು.
ಈ ಸಂದರ್ಭದಲ್ಲಿ ಪಿ.ಎಚ್.ಪೂಜಾರ, ಶಿವು ಮೇಲ್ನಾಡ, ವಿಜಯ ಸುಲಾಖೆ, ಬಾಬುರಾಜೇಂದ್ರ ನಾಯಕ,ರವಿ ಕುಮಟಗಿ,ಅರುಣ ಲೊಕಾಪೂರ, ರಾಜು ನಾಯಕ, ಸಂಜಯ ಪವಾರ,ಕೃಷ್ಣ ರಾಜೂರ, ರಾಘು ಯಾದಗಿರಿ ಗಣೇಶ ಸುರಪೂರ ಉಪಸ್ಥಿತರಿದ್ದರು.
Be the first to comment