ಸಾಮಾನ್ಯ ಸೇವಾ ಕೇಂದ್ರ ಕುರಿತು ತರಬೇತಿ ಕಾರ್ಯಾಗಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬಾಗಲಕೋಟೆ ವತಿಯಿಂದ ಕೇಂದ್ರ ಸರಕಾರದ ಸಾಮಾನ್ಯ ಸೇವಾ ಕೇಂದ್ರ ಕಾರ್ಯಕ್ರಮದ ಸೋಮವಾರ ಒಂದು ದಿನದ ತರಬೇತಿ ಕಾರ್ಯಾಗಾರ ಜರುಗಿತು.

ಬಾಗಲಕೋಟ ಜಿಲ್ಲೆಯ ಸಾಮಾನ್ಯ ಸೇವಾ ಕೇಂದ್ರ ಜಿಲ್ಲಾ ಪ್ರಬಂಧಕ ಶ್ರೀರಾಮ ಎನ್ ಅವರು ಕಾರ್ಯಾಗಾರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಜನಸಾಮಾನ್ಯರಿಗೆ ಸುಲಭದಲ್ಲಿ ಸೇವೆಗಳು ಲಭ್ಯವಾಗಲು ಸೇವಾಸಿಂಧು ಎಂಬ ಕಾರ್ಯಕ್ರಮ ಈಗಾಗಲೇ ಚಾಲನೆಯಲ್ಲಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಹೊಸದಾಗಿ ಕಾರ್ಯಕ್ರಮ ಪ್ರಾರಂಭಿಸಿದೆ. ಇದರಿಂದ ಜನ ಸಾಮಾನ್ಯರಿಗೆ ಸಹಕಾರಿಯಾಗಿದೆ. ಈ ಕಾರ್ಯಕ್ರಮದಡಿಯಲ್ಲಿ ಆಧಾರ ಕಾರ್ಡನಿಂದ ಹಿಡಿದು ಆಯುಷ್ಮಾನ್ ಕಾರ್ಡವರೆಗೆ ಸುಮಾರು 700 ಸೇವೆಗಳು ಲಭ್ಯವಿದೆ ಎಂದು ತಿಳಿಸಿದರು.

ತರಬೇತಿಯಲ್ಲಿ ಸಾಮಾನ್ಯ ಸೇವಾ ಕೇಂದ್ರದ ಕಾರ್ಯಕ್ರಮದ ಅನುಷ್ಟಾನ ಆನ್‍ಲೈನ್‍ದಲ್ಲಿ ಅರ್ಜಿ ಹಾಕುವ ವಿಧಾನಗಳ ಬಗ್ಗೆ ಮಾಹಿತಿಯನ್ನು ಶ್ರೀರಾಮ ಎನ್ ಹಾಗೂ ಚೇತನ್ ಸಾಮಾನ್ಯ ಸೇವಾ ಕೇಂದ್ರ ಜಿಲ್ಲಾ ಪ್ರಬಂಧಕರು ತಿಳಿಸಿದರು. ತರಬೇತಿ ಕಾರ್ಯಾಗಾರದಲ್ಲಿ ಬಾಗಲಕೋಟೆ ತಾಲೂಕು ಕ್ಷೇತ್ರ ಯೋಜನಾಧಿಕಾರಿಯಾದ ಜ್ಯೋತಿ ಜೋಳದ, ಜಿಲ್ಲಾ ಐಟಿ ಪ್ರಬಂಧಕರಾದ ಮಲ್ಲಿಕಾರ್ಜುನ, ಮುಧೋಳ, ಹುನಗುಂದ, ಜಮಖಂಡಿ, ಬಾದಾಮಿ, ಬಾಗಲಕೋಟೆ ತಾಲೂಕಿನ ಹಣಕಾಸು ಪ್ರಬಂಧಕರು, ಹಾಗೂ ಸಿಎಸ್‍ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*