ಕ್ರೀಡಾ ಸುದ್ದಿಗಳು
ಇಂಡಿಯನ್ ನ್ಯಾಷನಲ್ ಚಾಂಪಿಯನ್ ಗೌರವ್ ಗಿಲ್ ರೇಸ್ ಕಾರು ಅಪಘಾತ : ಬೈಕಿನಲ್ಲಿ ಇದ್ದ ಮೂವರ ಮೃತ್ಯು…
ಜೋಧಪುರ : ನಮ್ಮ ದೇಶದ ಹೆಮ್ಮೆಯ ಪುತ್ರ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್ ಶಿಪ್ ನ ವೇಳೆ ಅರ್ಜುನ ಪ್ರಶಸ್ತಿ ಪುರಸ್ಕೃತ ಗೌರವ್ ಗಿಲ್ ಅವರು ಚಲಾಯಿಸುತ್ತಿದ್ದ ಕಾರು ಮತ್ತು ಬೈಕ್ ಪರಸ್ಪರ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ.
ಇಲ್ಲಿ ಶನಿವಾರ ಚಾಂಪಿಯನ್ಸ್ ಯಾಚಾತ್ ಕ್ಲಬ್ ಎಫ್‌ಎಂಎಸ್‌ಸಿಐ ಇಂಡಿಯನ್ ನ್ಯಾಷನಲ್ ರ್ಯಾಲಿಯಲ್ಲಿ ಗಿಲ್ ಅವರ ಕಾರು ಫಿನಿಶಿಂಗ್ ಲೈನ್ ತಲುಪಲು ಇನ್ನೂ 150 ಮೀಟರ್ ದೂರ ಬಾಕಿ ಇದ್ದಾಗ ಎದುರಿನಿಂದ ಬಂದ ಬೈಕ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.
ಬೈಕ್ ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಆದರೆ ಅವರ್ಯಾರು ಹೆಲ್ಮೆಟ್ ಧರಿಸಿರಲಿಲ್ಲ ಎಂದು ತಿಳಿದು ಬಂದಿದೆ.
ರ್ಯಾಲಿ ವೇಳೆ ಸಂಘಟಕರು ಎಚ್ಚರಿಕೆ ನೀಡಿದ್ದರೂ ಬೈಕ್ ಸವಾರರು ಅಕ್ರಮವಾಗಿ ಟ್ರ್ಯಾಕ್ ಪ್ರವೇಶಿಸಿದ್ದರು ಎಂದು ಮೂಲಗಳು ತಿಳಿಸಿವೆ. ಕಾರ್ ಗೆ ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಲ್ಲಿದ್ದ ಮೂವರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ಗಿಲ್ ಅವರು ಗಾಯಗೊಂಡಿದ್ದಾರೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿಲ್ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್(ಐಎನ್‌ಆರ್‌ಸಿ)ನಲ್ಲಿ 6 ಬಾರಿ ಚಾಂಪಿಯನ್ ಆಗಿದ್ದರು. ಮೋಟಾರು ಸ್ಪೋರ್ಟ್ಸ್ ವಿಭಾಗದಲ್ಲಿ ಅರ್ಜುನ ಪ್ರಶಸ್ತಿ ಪುರಸ್ಕೃತ ಮೊದಲ ಚಾಲಕ ಎನಿಸಿಕೊಂಡಿದ್ದರು.ಅಪಘಾತದ ಬಳಿಕ ಮೋಟಾರು ರ್ಯಾಲಿ ರದ್ದಾಗಿದೆ.ಗಿಲ್ ಅವರ ಅಭಿಮಾನಿಗಳಿಗೆ ಅವರ ಅಪಘಾತದ ಸುದ್ದಿ ಬಹಳ ಆಘಾತ ಉಂಟುಮಾಡಿದೆ.ಗಿಲ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Be the first to comment