ಜಿಲ್ಲಾ ಸುದ್ದಿಗಳು
ಹೊನ್ನಾವರ:
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೆಳಗಿನೂರು ನಾಜಗಾರ್ ದ ಸಂತೋಷ ಗೌಡ ಕೊಂಕಣ ರೈಲ್ವೇ ಡೈರೆಕ್ಟ್ ರ್ ಲೆವೆಲ್ ಅವಾರ್ಡ್ 2021 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಸಂತೋಷ ಗೌಡ ನಾಜಗಾರ್ ಇವರು ಕೊಂಕಣ ರೈಲ್ವೇ ಯಲ್ಲಿ ಪಾಯಿಂಟ್ಸ ಮೇನ್ ಉದ್ಯೋಗಿಯಾಗಿದ್ದು ಕಳೆದ ಒಂದು ತಿಂಗಳ ಹಿಂದೆ ಮಂಗಳೂರಿನ ಮಧ್ಯದಲ್ಲಿ ಚೆಕ್ರೈ ಟ್ರಾಕ್ಟ ಕಟ್ ಆಗಿರುವುದನ್ನು ನೋಡಿ ತಕ್ಷಣ ರೈಲು ತಡೆದು ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದರು. ಇದನ್ನು ರೈಲ್ವೇ ಇಲಾಖೆಯ ಮೇಲಾಧಿಕಾರಿಗಳು ಗಮನಿಸಿದ್ದರು. ಅಂದಿನ ದಿನ ಅವಗಢ ನಡೆದಿದ್ದರೆ ರೈಲ್ವೇ ಇಲಾಖೆಗೆ ಬಹುದೊಡ್ಡ ನಷ್ಟ ಆಗುತ್ತಿತ್ತು. ಈ ಮಹಾನಷ್ಟ ತಪ್ಪಿಸಿದ ಸಂತೋಷ ಗೌಡ ಅವರ ಕಾರ್ಯ ಚಾಣಾಕ್ಷತನಕ್ಕೆ ಮೆಚ್ಚಿ ರೈಲ್ವೇ ಇಲಾಖೆ ಡೈರೆಕ್ಟರ್ ಲೆವೆಲ್ ಅವಾರ್ಡ್ 2021 ನೀಡಿ ಗೌರವಿಸಿದೆ.
ಸಾಮಾನ್ಯ ಬಡ ಕುಟುಂಬದಲ್ಲಿ ಬಂದ ಸಂತೋಷ ಗೌಡ ಪ್ರಾಮಾಣಿಕ ಮತ್ತು ಶ್ರಮಜೀವಿ . ವಿಶೇಷವೆಂದರೆ ರೈಲ್ವೇ ಇಲಾಖೆಯಲ್ಲಿ ಉದ್ಯೋಗಿಯಾಗಿ ಸೇರಿಕೊಂಡ ಎರಡೇ ವರ್ಷದಲ್ಲಿ ಈ ಪ್ರಶಸ್ತಿಗೆ ಭಾಜನರಾದ ಅತ್ಯಂತ ಕಿರಿಯ ವಯಸ್ಸಿನ ಉದ್ಯೋಗಿಯಾಗಿರುವುದು ಇನ್ನೊಂದು ವಿಶೇಷವಾಗಿದೆ. ಇವರ ಸಾಧನೆಗೆ ತಾಲೂಕಿನ ಗಣ್ಯರು ಅಭಿನಂದಿಸಿದ್ದಾರೆ.
Be the first to comment