ತರಬೇತಿಯನ್ನು ಬಹಿಷ್ಕರಿಸಿ ಮನವಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: 2017 ರಲ್ಲಿ ತಿದ್ದುಪಡಿ ಮಾಡಿರುವ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮದಿಂದ ಸೇವಾನಿರತ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಗಂಭೀರ ಅನ್ಯಾಯವಾಗಿರುವುದನ್ನು ಖಂಡಿಸಿ ಮಾನ್ಯ ಉಪನಿರ್ದೇಶಕರು (ಅಭಿವೃದ್ಧಿ) ಡೈಟ್ ಇಳಕಲ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಳಕಲ್-ಹುನಗುಂದ ರವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಂಘದ ವತಿಯಿಂದ ಮನವಿಯನ್ನು ಸಲ್ಲಿಸಲಾಯಿತು.

ಸಿ & ಆರ್ ಮಾರಕ ತಿದ್ದುಪಡಿ ಬಗ್ಗೆ ಸಂಘಟನೆಯು ಹಲವಾರು ಬಾರಿ ಮಾನ್ಯ ಶಿಕ್ಷಣ ಸಚಿವರು, ಇಲಾಖಾ ಪ್ರಧಾನ ಕಾರ್ಯದರ್ಶಿಗಳು, ಆಯುಕ್ತರು ಜೊತೆ ಸಭೆ ನಡೆಸಿ ಶಿಕ್ಷಕರಿಗಾಗಿರುವ ಅನ್ಯಾಯದ ಕುರಿತು ಕೂಲಕೂಂಷವಾಗಿ ಚರ್ಚಿಸಿ ಮನವರಿಕೆ ಮಾಡಿ ಮನವಿ ಸಲ್ಲಿಸಿದರೂ ಈವರೆಗೂ ಪರಿಹಾರ ದೊರೆತಿಲ್ಲ.

ಆದ ಕಾರಣ ರಾಜ್ಯ ಸಂಘದ ನಿರ್ಣಯದ ಮೇರೆಗೆ ನಿಷ್ಟಾ 3.0 ತರಬೇತಿಗೆ ಲಾಗಿನ್ ಆಗದೆ ತರಬೇತಿಯನ್ನು ಬಹಿಷ್ಕರಿಸಲು ಬಾಗಲಕೋಟೆ ಜಿಲ್ಲಾಧ್ಯಕ್ಷರಾದ ಶ್ರೀ ಬಸವರಾಜ ಬಾಗೇನವರ, ಕಾರ್ಯದರ್ಶಿಗಳಾದ ಶ್ರೀ ಜಿ ಎಲ್‌ ಮುಲ್ಲಾ ರವರೊಂದಿಗೆ ಜಿಲ್ಲಾ ಸಂಘದ ಗೌರವಾಧ್ಯಕ್ಷರಾದ ಎ ಜಿ ರಾಂಪೂರ, ರಾಜ್ಯ ಮಾಧ್ಯಮ ಸಂಚಾಲಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ, ಜಿಲ್ಲಾ ಖಜಾಂಚಿಗಳಾದ ಮುತ್ತಣ್ಣ ಬೀಳಗಿ,ಇಳಕಲ್ ತಾಲ್ಲೂಕು ಅಧ್ಯಕ್ಷರಾದ ರಂಗನಾಥ ಮಾಸರಡ್ಡಿ, ಕಾರ್ಯದರ್ಶಿಗಳಾದ ಎಸ್ ಕೆ ಬಂಡರಗಲ್ ರವರ ನೇತೃತ್ವದಲ್ಲಿ ಡೈಟ್ ಇಳಕಲ್ ದಲ್ಲಿ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ಉಪನ್ಯಾಸಕರಾದ ಶ್ರೀಮತಿ ಸಾವಿತ್ರಿ ಕೊಂಡಗೋಳಿ ರವರು ತಮ್ಮ‌ ಮನವಿಯು ನ್ಯಾಯೋಚಿತವಾಗಿದ್ದು,ಮಾನ್ಯ ನಿರ್ದೇಶಕರು ಡಿಎಸ್ಇಆರ್ ಟಿ ರವರಿಗೆ ರವಾನೆ‌ ಮಾಡಲಾಗುವುದು ಎಂದರು.ಇದೇ ಸಂದರ್ಭದಲ್ಲಿ ಡೈಟ್ ಉಪನ್ಯಾಸಕರಾದ ಡಾ.ಎಂ ಎಂ ಬೆಳಗಲ್, ಪಿ ಎಸ್ ಅಂಗಡಿ,ಡಿ ಎಚ್ ಮುಂಡೇವಾಡಿ,ಶ್ರೀಮತಿ ಆರ್ ಎಸ್ ಪೂಜಾರಿ ಉಪಸ್ಥಿತಿರಿದ್ದರು.

ನಂತರ ಇಳಕಲ್-ಹುನಗುಂದ‌ ತಾಲ್ಲೂಕು ಘಟಕಗಳ ವತಿಯಿಂದ ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಮಹಾದೇವ ಬೆಳ್ಳೆನವರ ರವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿ ಮಾತನಾಡಿದ ಬಿಇಓ ರವರು ತಕ್ಷಣವೇ ನಿಮ್ಮ ಮನವಿಯನ್ನು ನಿರ್ದೇಶಕರಿಗೆ ಕಳುಹಿಸಿ ಪರಿಹರಿಸಲು ವಿನಂತಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಹುನಗುಂದ ತಾಲೂಕ ಅಧ್ಯಕ್ಷರಾದ ಎಸ್ ಬಿ ಶೀಲವಂತರ, ಕಾರ್ಯದರ್ಶಿಗಳಾದ ಡಿ ಎಂ‌ ಬಾಗವಾನ,ಇಳಕಲ್ ತಾಲ್ಲೂಕು ಅಧ್ಯಕ್ಷರಾದ ರಂಗನಾಥ ಮಾಸರಡ್ಡಿ, ಕಾರ್ಯದರ್ಶಿಗಳಾದ ಎಸ್ ಜೆ ಬಂಡರಗಲ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ, ಜಿಲ್ಲಾ ಖಜಾಂಚಿಗಳಾದ ಮುತ್ತಣ್ಣ ಬೀಳಗಿ,ಗೌರವಾಧ್ಯಕ್ಷರಾದ ಎ ಜಿ ರಾಂಪೂರ,ಪದಾಧಿಕಾರಿಗಳಾದ ಎಸ್ ಎಚ್ ಹೀರೆಕುಂಬಿ,ಎಚ್ ಎಸ್ ಪೂಜಾರಿ,ಎಸ್ ಎಸ್ ರೇಶ್ಮಿ,ಅಶೋಕ ಬಳ್ಳಾ,ವಿಜಯಲಕ್ಷ್ಮಿ ಬಿಜ್ಜಳ,ವಾಣಿ ರಾಮದುರ್ಗ, ಎ ಎನ್ ದೇವರಡ್ಡಿ,ಗೀತಾ ತಾರಿವಾಳ,ನಯನಾ ಕಾಟವಾ,ಗುಂಡಪ್ಪ ಕುರಿ,ಎ ಆರ್ ನಡುವಿನಮನಿ,ಕುಬೇರ ಹೊಂಗಲ್,ಎಸ್ ಜಿ ಬಂಗಾರಿ,ಎನ್ ಎಚ್ ಮಾರೆಣ್ಣವರ,ಶ್ರೀಶೈಲ ಕಡ್ಲಿಮಟ್ಟಿ,ಎಸ್ ವಿ ತಂತಗುಂಟಿ,ಪರಸಪ್ಪ ತಳವಾರ,ಹುಸೇನ ತಾಳಿಕೋಟಿ,ಹುನಕುಂಟಿ,ಕಣಗಿ ಹಾಗೂ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*