ತಾಯಿ ಟಿಕ್ ಟಾಕ್ ಮಾಡಲು ಮೊಬೈಲ್ ನೀಡಲು ನಿರಾಕರಣೆ ಬೆಂಗಳೂರನ ಯುವತಿ ನೇಣಿಗೆ ಶರಣು

ಕ್ರೈಮ್ ವರದಿ: ಶಿವರಾಜ ಎಸ


       ಕ್ರೈಮ್ ಫೋಕಸ್


ಟಿಕ್ ಟಾಕ್ ವ್ಯಾಮೋಹವು ಯುವ ಜನತೆಯನ್ನು ಸಾವಿನ ದವಡೆಗೆ ದುಡುತ್ತಿದೆ.

ಬೆಂಗಳೂರು: ಟಿಕ್ ಟಾಕ್ ನೋಡಲು ಮೊಬೈಲ್ ಕೊಡಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಯಾರು ಇಲ್ಲದ್ದನ್ನು ನೋಡಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಹನುಮಂತ ನಗರದ ನಿವಾಸಿ 19 ಪ್ರಿಯಾಂಕಾ ಟಿಕ್ ಟಾಕ್ ವ್ಯಾಮೋಹಕ್ಕೆ ಬಲಿಯಾಗಿದ್ದಾಳೆ. ಸಂಜೆ ಶಾಲೆಯಿಂದ ಮನೆಗೆ ಬಂದ ಪ್ರಿಯಾಂಕಾ ತಾಯಿಯ ಮೊಬೈಲ್ ತೆಗೆದುಕೊಂಡು ತನ್ನ ಗೆಳತಿಗೆ ಮನೆಗೆ ಹೋಗಲು ರೆಡಿಯಾಗಿರುತ್ತಾಳೆ. ಅದನ್ನು ಕಂಡ ತಾಯಿ ಮೊಬೈಲ್ ತೆಗೆದುಕೊಂಡು ಹೋಗಬೇಡ ಎಂದು ಬುದ್ಧಿವಾದ ಹೇಳಿ ಮೊಬೈಲ್ ಅನ್ನು ಕಿತ್ತು ಇಟ್ಟುಕೊಂಡಿದ್ದರು.

ಇದರಿಂದ ಕೋಪಗೊಂಡ ಪ್ರಿಯಾಂಕಾ ಸ್ನೇಹಿತೆ ಮನೆಗೆ ಹೋಗದೆ ತನ್ನ ಕೋಣೆಗೆ ಹೋಗಿದ್ದಾಳೆ. ಆಗ ತಾಯಿ ತಾನು ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ಹೋಗಿ ಬರುವಷ್ಟರಲ್ಲಿ ಪ್ರಿಯಾಂಕಾ ನೇಣಿಗೆ ಶರಣಾಗಿದ್ದಾಳೆ. ಈ ಸಂಬಂಧ ಹನುಮಂತ ನಗರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.

Be the first to comment

Leave a Reply

Your email address will not be published.


*