ಜಿಲ್ಲಾ ಸುದ್ದಿಗಳು
ಹಿರಿಯ ನಾಗರಿಕರಿಗೆ ಸನ್ಮಾನ
ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಜಿಲ್ಲೆಯ 9 ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ನಾರಾಣಯ ಹಾನಾಪೂರ (ಕಲೆ & ಸಾಹಿತ್ಯ), ಗಂಗಯ್ಯ ಸಾರಂಗಮಠ (ಸಮಾಜ ಸೇವೆ), ಮಾರುತ್ತಿ ಜಗಥಾಪ (ಚಿತ್ರಕಲೆ, ಯೋಗಾಸನ), ಎಸ್.ಎಚ್.ವಾಸನದ (ಸಮಾಜ ಸೇವೆ), ಬೀರಪ್ಪ ಬಿಜ್ಜಗಾರ (ಭಕ್ತಿಗೀತೆ, ಭಾವಗೀತೆ, ಡೊಳ್ಳು), ಸುಭಾಸ ಹುಣಸಿಕಟ್ಟಿ (ಯೋಗ ಮತ್ತು ಜ್ಞಾನ), ಗುರಯ್ಯ ಕಂಬಿ (ಜಾನಪದ), ರಾಮಲಿಂಗ ಕಮಲದಿನ್ನಿ (ಶಿಕ್ಷಣ), ಗುರುಲಿಂಗಪ್ಪ ಸಜ್ಜನ (ಸಮಾಜ ಸೇವೆ).
ಬಾಗಲಕೋಟೆ : ಉತ್ತಮ ಸಮಾಜ ನಿರ್ಮಾಣಕ್ಕೆ ಹಿರಿಯ ಮಾರ್ಗದರ್ಶನ ಅಗತ್ಯವಾಗಿದ್ದು, ಅವರನ್ನು ಗೌರವದಿಂದ ಕಾಣಬೇಕೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಹೇಳಿದರು.
ನವನಗರದ ಬಿ.ಆರ್.ಅಂಬೇಡ್ಕರ ಭವನದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನರ ಕಲ್ಯಾಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಘಗಳ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಿರಿಯರ ವಿಚಾರ, ಮಾರ್ಗದರ್ಶನ ಪಾಲನೆ ಮಾಡಬೇಕು ಎಂದರು.
ಆಧುನಿಕತೆಯಿಂದ ನಮ್ಮ ದೈನಂದಿನ ಬದಲಾವಣೆಯಿಂದಾಗಿ ಹಿರಿಯರ ಕಾಳಜಿ ಬಹಳಷ್ಟು ಕಡಿಯಾಗುತ್ತಿದೆ. ಹೊರೆಯಾಗುತ್ತಿದ್ದಾರೆಂಬ ನಮೋಸ್ಥಿತಿಯಲ್ಲಿದ್ದಾರೆ. ಹಿರಿಯರ ಸಂರಕ್ಷಣೆಗೆ ಸರಕಾರ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಹಿರಿಯ ನಾಗರಿಕರ ಸಮಸ್ಯೆ ಏನೇ ಇದ್ದರೂ ಸಹಾಯವಾಣಿ 14567ಕ್ಕೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದಾಗಿದೆ. ವೃದ್ದ ಜೀವಿಗಳ ಪಾಲನೆ ಪೋಷನೆಯನ್ನು ಮಾಡದ ಮಕ್ಕಳ ವಿರುದ್ದ ನೇರವಾಗಿ ಉಪವಿಭಾಗಾಧಿಕಾರಿಗಳ ಸಮಿತಿಯಲ್ಲಿ ದೂರು ಸಲ್ಲಿಸಬಹುದಾಗಿದೆ ಎಂದರು.
ಪಾಲಕರನ್ನು ನೋಡಿಕೊಳ್ಳದೇ ಇರುವ ಕುರಿತು ದೂರು ಬಂದ ಹಿನ್ನಲೆಯಲ್ಲಿ ಸಂರಕ್ಷಣಾ ಕಾಯ್ದೆಯಡಿ ತಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿದ್ದರೂ ಸಹ ಮರಳಿ ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಳ್ಳುವಂತ ಕಾನೂನುಗಳು ಇವೆ. ಅಲ್ಲದೇ ಹಿರಿಯ ನಾಗರಿಕರಿಗಾಗಿಯೇ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಅವುಗಳ ಸದುಯಪಯೋಗ ಪಡಿಸಿಕೊಳ್ಳಲು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿ.ಪಂ ಸಿಇಓ ಟಿ.ಭೂಬಾಲನ ಮಾತನಾಡಿ ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ ಬುದ್ದಿ ಹೇಳಲು ಹಿರಿಯ ಮಾರ್ಗದರ್ಶನ ಅವಶ್ಯವಾಗಿದೆ. ಹಿರಿಯ ಜೀವಿಗಳು ತಮ್ಮ ಉತ್ತಮ ಆರೋಗ್ಯಕ್ಕೆ ವಿವಿಧ ಕ್ರೀಡೆ ಮತ್ತು ಸಾಂಸ್ಕøತಿ ಕಾರ್ಯಕ್ರಮಗಳಲ್ಲಿ ತೊಡಗಿಕೊಳ್ಳಬೇಕೆಂದು ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಲತಾ ಹುಲ್ಲೂರ ಮಾತನಾಡಿ ಹಿರಿಯ ಮಾರ್ಗದರ್ಶನಗಳನ್ನು ಪಾಲಿಸಿದಾಗ ಮಾತ್ರ ಉತ್ತಮ ಜೀವನ ಸಾಗಿಸಲು ಸಾಧ್ಯವಾಗುತ್ತದೆ. ಹಿರಿಯ ನಾಗರಿಕರಿರ ರಕ್ಷಣೆಗಾಗಿ ಸರಕಾರ ಅನೇಕ ಕಾನೂನುಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಯೋಜನಾ ಪ್ರಾಧಿಕಾರದ ಅದ್ಯಕ್ಷ ಬಸವಲಿಂಗಪ್ಪ ನಾವಲಗಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕಿ ಭಾರತಿ ಬಾಣಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾಗಿ ಆಗಮಿಸಿದ್ದ ಕುಮಾರೇಶ್ವರ ಆಸ್ಪತ್ರೆಯ ಡಾ.ಸಚಿತ ದೇಸಾಯಿ ಆರೋಗ್ಯದ ಸಲಹೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡ ವಿವಿಧ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರ ಹಾಗೂ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್.ವಾಯ್.ಕುಂದರಗಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಶ್ಮಾ ಗವಳಿ, ಹಿರಿಯ ನಾಗರಿಕರಾದ ಗೌರಮ್ಮ ಸಂಕಿನ ಸೇರಿದಂತೆ ಇತರರು ಉಪಸ್ಥಿತರಿದ್ದರು.
Be the first to comment