ವಿವಿಧ ಲಸಿಕಾ ಕೇಂದ್ರಗಳಿಗೆ ಡಿಎಚ್‍ಓ, ಡಿಎಸ್‍ಓ ಭೇಟಿ:ಕೋವಿಡ್ ಲಸಿಕಾಕರಣ : ಬಾಗಲಕೋಟೆ ಮುಂಚೂಣಿಯಲ್ಲಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ : ಕೋವಿಡ್ ಲಸಿಕಾಕರಣದಲ್ಲಿ ಬಾಗಲಕೋಟೆ ಜಿಲ್ಲೆ ಮುಂಚೂಣಿಯಲ್ಲಿದ್ದು, ಸೆಪ್ಟೆಂಬರ 29 ರಂದು ಹಮ್ಮಿಕೊಂಡು ವಾರದ ಲಸಿಕಾ ಮೇಳದ ಅಂಗವಾಗಿ ವಿವಿಧ ಲಸಿಕಾ ಕೇಂದ್ರಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್.ದೇಸಾಯಿ ಹಾಗೂ ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೀಜಯ ಕಂಠಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಲಸಿಕಾಕರಣ ಪ್ರಗತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಾರದಲ್ಲಿ ಪ್ರತಿ ಬುಧವಾರ ಲಸಿಕಾ ಮೇಳ ಹಮ್ಮಿಕೊಳ್ಳುವಂತೆ ಸರಕಾರ ಆದೇಶಿಸಿದ್ದು, ಇಲ್ಲಿಯವರೆಗೆ ವಾರದ ನಾಲ್ಕು ಬುಧವಾರ ಲಸಿಕಾ ಮೇಳ ಹಮ್ಮಿಕೊಳ್ಳಲಾಗಿದ್ದು, ಸೆಪ್ಟೆಂಬರ 29 ರಂದು ನಡೆದ ಲಸಿಕಾ ಮೇಳದ ಅಂಗವಾಗಿ ವಿವಿಧ ತಾಲೂಕುಗಳಲ್ಲಿ ತೆರೆಯಲಾದ ಲಸಿಕಾ ಕೇಂದ್ರಗಳಿಗೆ ಡಿಎಚ್‍ಓ ಹಾಗೂ ಡಿಎಸ್‍ಓ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವಾರದ ಮೊದಲ ಬುಧವಾರ ಸೆಪ್ಟೆಂಬರ 8 ರಂದು 42932 ಜನರಿಗೆ ಲಸಿಕೆ ನೀಡಿದರೆ, 15 ರಂದು 4961, 22 ರಂದು 38844 ಹಾಗೂ 29 ರಂದು 46273 ಜನರಿಗೆ ಲಸಿಕೆ ನೀಡಲಾಗಿದೆ. ಅಲ್ಲದೇ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮ ದಿನವಾದ ಸೆಪ್ಟೆಂಬರ 17 ರಂದು ಒಟ್ಟು 85712 ಜನರಿಗೆ ಲಸಿಕೆ ನೀಡುವ ಮೂಲಕ ಗುರಿ ಮೀರಿ ದಾಖಲೆ ಮಾಡಲಾಗಿದೆ.

ಜಿಲ್ಲೆಯಲ್ಲಿ ಸೆಪ್ಟೆಂಬರ 30 ವರೆಗೆ ಒಟ್ಟು 14,04,616 ಜನರಿಗೆ ಲಸಿಕೆ ವಿತರಣೆಯಾಗಿದೆ. ಈ ಪೈಕಿ 10,35,794 ಮೊದಲ ಡೋಸ್ ಪಡೆದರೆ 3,69,122 ಜನ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಇದರಲ್ಲಿ ಕೋವಿಡಶಿಲ್ಡ 11,92,912 ಜನ ಪಡೆದುಕೊಂಡರೆ, ಕೊವ್ಯಾಕ್ಸಿನ್ 2,10,686 ಜನ ಪಡೆದುಕೊಂಡಿರುತ್ತಾರೆ. ತಾಲೂಕಾವಾರು ಇಲ್ಲಿಯವರೆಗೆ ಬಾದಾಮಿ 2,11,310, ಬಾಗಲಕೋಟೆ 2,37,062, ಬೀಳಗಿ 1,27,027, ಹುನಗುಂದ 2,40,033, ಜಮಖಂಡಿ 3,98,968, ಮುಧೋಳ 1,89,198 ಜನರು ಲಸಿಕೆ ಪಡೆದುಕೊಂಡಿರುತ್ತಾರೆ.

ಇಲ್ಲಿವರೆಗೆ ಆರೋಗ್ಯ ಕಾರ್ಯಕರ್ತೆಯರು 33620 ಜನ ಲಸಿಕೆ ಪಡೆದುಕೊಂಡರೆ, ಪ್ರಂಟ್‍ಲೈನ್ ವರ್ಕರ್ಸ್ 47448 ಜನ, 18-45 ವರ್ಷದೊಳಗಿನ 643330 ಜನ, 45-60 ವರ್ಷದೊಳಗಿನ 437527 ಜನ ಹಾಗೂ 60 ವರ್ಷ ಮೇಲ್ಪಟ್ಟ 242691 ಜನರ ಲಸಿಕೆ ಪಡೆದಿಕೊಂಡಿರುತ್ತಾರೆ.

Be the first to comment

Leave a Reply

Your email address will not be published.


*