ಹೈ-ಕರ್ನಾಟಕಕ್ಕೆ ವಿವೇಚನಾ ಅನುದಾನ: ವಿಜಯನಗರಕ್ಕೆ ಬಂಪರ್ ಲಾಟರಿ

ವರದಿ: ಅಮರೇಶ ಕಾಮನಕೇರಿ


      ರಾಜ್ಯ ಸುದ್ದಿಗಳು


ಬೆಂಗಳೂರು: ಹೈದರಾಬಾದ್ ಕರ್ನಾಟಕ ಭಾಗಗಳಿಗೆ ಸಿಎಂ ಯಡಿಯೂರಪ್ಪ ಅವರು ವಿವೇಚನಾ ಕೋಟಾದ ಅಡಿ ಅನುದಾನವನ್ನನು ಬಿಡುಗಡೆ ಮಾಡಿದ್ದಾರೆ.

ಹೈದರಾಬಾದ್ ಕರ್ನಾಟಕ ಇನ್ನು ಮುಂದೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಲಿದ್ದಾರೆ

ಕೆಲವು ಕಾಂಗ್ರೆಸ್ ಆಡಳಿತದ ಕ್ಷೇತ್ರಗಳಿಗೆ ಈ ಮೊದಲು ನೀಡಿದ್ದ ಅನುದಾನವನ್ನು ಕಡಿತಗೊಳಿಸಲಾಗಿದೆ. ಇನ್ನುಳಿದಂತೆ ಬಹುತೇಕ ಕ್ಷೇತ್ರಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಆಗಿದೆ. ಉಪಚುನಾವಣೆ ನಡೆಯಲಿರುವ ಹೊಸಪೇಟೆ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗಿದೆ. ಜೊತೆಗೆ ಮಸ್ಕಿ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡಲಾಗಿದೆ.

Discretionary Grant Released Hyderabad Karnataka Region

ಹೊಸ ಪಟ್ಟಿಯ ಪ್ರಕಾರ ಬಿಜೆಪಿ ಆಡಳಿತವಿರುವ ಸುರಪುರ ಕ್ಷೇತ್ರಕ್ಕೆ 30 ಕೋಟಿ ನೀಡಲಾಗಿದೆ. ಯಾದಗಿರಿ (ಬಿಜೆಪಿ) 30 ಕೋಟಿ ಅನುದಾನ, ಸೇಡಂ (ಬಿಜೆಪಿ) 30 ಕೋಟಿ, ಬಿಜೆಪಿ ಶಾಸಕರಿರುವ ಚಿಂಚೋಳಿಗೆ 30 ಕೋಟಿ, ಬಿಜೆಪಿ ಆಡಳಿತದ ಗುಲ್ಬರ್ಗ ಗ್ರಾಮೀಣ ಕ್ಷೇತ್ರಕ್ಕೆ 30 ಕೋಟಿ, ಗುಲ್ಬರ್ಗ ದಕ್ಷಿಣಕ್ಕೆ 35 ಕೋಟಿ, ಆಳಂದ ಕ್ಷೇತ್ರಕ್ಕೆ 30 ಕೋಟಿ, ಔರದ್ ಗೆ 30 ಕೋಟಿ, ರಾಯಚೂರು ನಗರಕ್ಕೆ 40 ಕೋಟಿ, ದೇವದುರ್ಗಕ್ಕೆ 30 ಕೋಟಿ, ಕನಕಗಿರಿಗೆ 30 ಕೋಟಿ, ಗಂಗಾವತಿ ಗೆ 30 ಕೋಟಿ, ಯಲಬುರ್ಗಾ 30 ಕೋಟಿ, ಸಿರಗುಪ್ಪ ಕ್ಷೇತ್ರಕ್ಕೆ 30 ಕೋಟಿ, ಬಳ್ಳಾರಿ ನಗರಕ್ಕೆ 30 ಕೋಟಿ, ಕೂಡ್ಲಿಗಿ ಕ್ಷೇತ್ರಕ್ಕೆ 30 ಕೋಟಿ, ಹರಪನ ಹಳ್ಳಿಗೆ 30 ಕೋಟಿ, ಕಾಂಗ್ರೆಸ್‌ ಆಡಳಿತವಿರುವ ಮಸ್ಕಿಗೆ 110 ಕೋಟಿ, ಉಪಚುನಾವಣೆ ನಡೆಯಲಿರುವ ವಿಜಯನಗರ ಕ್ಷೇತ್ರಕ್ಕೆ 110 ಕೋಟಿ ಅನುದಾನ ನೀಡಲಾಗಿದೆ.

Be the first to comment

Leave a Reply

Your email address will not be published.


*