ಜಿಲ್ಲಾ ಸುದ್ದಿಗಳು
ಬಾಗಲಕೋಟೆ :ಕ್ರೀಡೆ ಮತ್ತು ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಆರೋಗ್ಯವನ್ನು ಪಡೆಯಬಹುದಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕು ಭಾರತಿ ಬಾಣಕರ ಹೇಳಿದರು.
ನವನಗರದ ಅಗ್ನಿಶಾಮಕ ದಳದ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಮತ್ತು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಂಡ ಕ್ರೀಡೆ ಮತ್ತು ಸಾಂಸ್ಕøತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಕಲಚೇತನರ ಕಲ್ಯಾಣಾಧಿಕಾರಿ ಸವಿತಾ ಕಾಳೆ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ, ಅಗ್ನಿಶಾಮಕ ಠಾಣಾಧಿಕಾರಿ ರಾಠೋಡ ಸೇರಿದಂತೆ ಆಯಾ ತಾಲೂಕಿನ ಎಂ.ಆರ್.ಡಬ್ಲೂಗಳು ಹಾಗೂ ಹಿರಿಯ ನಾಗರಿಕರು ಉಪಸ್ಥಿತರಿದ್ದರು. ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಉತ್ಪಾಹದಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ವಿವಿಧ ಸ್ಪರ್ಧೆಗಳಲ್ಲಿನ ವಿಜೇತರು
ಕ್ರೀಡಾ ವಿಭಾಗ (ಪುರುಷ) :
60-69 ವರ್ಷದೊಳಗಿನ ನಡಿಗೆ ಸ್ಪರ್ಧೆಯಲ್ಲಿ ಮಾಯಪ್ಪ ಹುಣಸಿಕಟ್ಟಿ (ಪ್ರಥಮ), ಸಂಗಯ್ಯ ಸಾರಂಗಮಠ (ದ್ವಿತೀಯ), ಸುರೇಶ ಗೌಡರ (ತೃತೀಯ), 70-79 ವರ್ಷದ ನಡಿಗೆಯಲ್ಲಿ ಬಿ.ಎಲ್.ಪೊಲೀಸ್ (ಪ್ರಥಮ), ಭೀಮಪ್ಪ ಪೂಜಾರಿ (ದ್ವಿತೀಯ), ಸಣ್ಣಹನಮಪ್ಪ ಕಟ್ಟೇನ್ನವರ (ತೃತೀಯ), 80 ವರ್ಷ ಮೇಲ್ಪಟ್ಟ ನಡಿಗೆಯಲ್ಲಿ ದರ್ಮಣ್ಣ ನೀರಲಕೇರಿ (ಪ್ರಥಮ), ಯಲ್ಲಪ್ಪ ಪಿಡ್ಡೆವ್ವಗೋಳ (ದ್ವಿತೀಯ), ಎಸ್.ಎಸ್.ಹೂಗಾರ (ತೃತೀಯ).
60-69 ವರ್ಷದೊಳಗಿನ ಬಕೀಟನಲ್ಲಿ ರಿಂಗ್ ಎಸೆಯುವ ಸ್ಪರ್ಧೆಯಲ್ಲಿ ಸಣ್ಣಹನಮಪ್ಪ ಕಟ್ಟೆನ್ನವರ (ಪ್ರಥಮ), ಕಾಶೀನಾಥಸ್ವಾಮಿ ಸಂಗೋಂದಿಮಠ (ದ್ವಿತೀಯ), ಬಸಯ್ಯ ಹಿರೇಮಠ (ತೃತೀಯ), 70-79 ವರ್ಷದೊಳಗಿನ ಸ್ಪರ್ಧೆಯಲ್ಲಿ ಭೀರಪ್ಪ ಬಿಜ್ಜಗಾರ (ಪ್ರಥಮ), ಮಾರುತಿ ಗುರವ (ತೃತೀಯ), ಸಿದ್ದಪ್ಪ ಮಣ್ಣೇರಿ (ತೃತೀಯ), 60-69 ವರ್ಷ ದೊಳಗಿನ ಕೇರಂ ಸ್ಪರ್ಧೆಯಲ್ಲಿ ಅಶೋಕ ಮುಂಡೆವಾಡಿ (ಪ್ರಥಮ), ಎಂ.ಬಿ.ಗೌಡರ (ದ್ವಿತೀಯ), 70-79 ವರ್ಷದೊಳಗಿನ ಸ್ಪರ್ಧೆಂiÀiಲ್ಲಿ ಪರಸಪ್ಪ ಗೌಡರ (ಪ್ರಥಮ), 80 ವರ್ಷ ಮೇಲ್ಪಟ್ಟವರ ಸ್ಫರ್ಧೆಯಲ್ಲಿ ಎಸ್.ಎನ್.ಹೂಗಾರ (ಪ್ರಥಮ), ರಂಗಯ್ಯ ಜಿಡಿ (ದ್ವಿತೀಯ) ಸ್ಥಾನ ಪಡೆದುಕೊಂಡಿದ್ದಾರೆ.
ಸಾಂಸ್ಕøತಿ ವಿಭಾಗ (ಪುರುಷ):
60-69 ವಯಸ್ಸಿನ ಏಕಪಾತ್ರ ಅಭಿನಯ ಸ್ಪರ್ಧೆಯಲ್ಲಿ ಬಸಯ್ಯ ಹಿರೇಮಠ (ಪ್ರಥಮ), 60-69 ವಯಸ್ಸಿನೊಳಗಿನ ಗಾಯನ ಸ್ಪರ್ಧೆಯಲ್ಲಿ ಸೋಮಯ್ಯ ಹಿರೇಮಠ (ಪ್ರಥಮ), ಕಾಳಿಂಗಪ್ಪ ಶರವಿ (ದ್ವಿತೀಯ), ಮಲ್ಲಪ್ಪ ಕಂಚು (ತೃತೀಯ), 70-79 ವರ್ಷದೊಳಗಿನ ಸ್ಪರ್ಧೆಯಲ್ಲಿ ಬಸವರಾಜ ಬಳ್ಳೊಳ್ಳಿ (ಪ್ರಥಮ), ನಾರಾಯಣ ಹಾನಾಪೂರ (ದ್ವಿತೀಯ), ಬಸಯ್ಯ ಹಿರೇಮಠ (ತೃತೀಯ), 80 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ವೀರಭದ್ರಪ್ಪ ನೀಲಗುಂದ (ಪ್ರಥಮ) ಸ್ಥಾನ ಪಡೆದುಕೊಂಡಿದ್ದಾರೆ.
ಕ್ರೀಡಾ ವಿಭಾಗ (ಮಹಿಳೆ) :
60-69 ವರ್ಷದೊಳಗಿನ ನಡಿಗೆ ಸ್ಪರ್ಧೆಯಲ್ಲಿ ಹನಮವ್ವ ಚಲವಾದಿ (ಪ್ರಥಮ), ಲೆಂಕವ್ವ ಹಿರೇಶೆಲ್ಲಿಕೇರಿ (ದ್ವಿತೀಯ), ನೇಂಬೆವ್ವ ಮಾಳಿ (ತೃತೀಯ), 70-79 ವರ್ಷದ ನಡಿಗೆಯಲ್ಲಿ ಕಮಲವ್ವ ಲಮಾಣಿ (ಪ್ರಥಮ), ಶಿವಲಿಂಗವ್ವ ಗಸ್ತಿ (ದ್ವಿತೀಯ), ಕಾಶಮ್ಮ ಕಂಠಿಮಠ (ತೃತೀಯ), 80 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಬಾಳವ್ವ ಬಂಗಿ (ಪ್ರಥಮ), ಬಸಮ್ಮ ಹಿರೇಮಠ (ದ್ವಿತೀಯ), ರುದ್ರವ್ವ ಬಾರಿಗಿಡದ (ತೃತೀಯ).
60-69 ವರ್ಷದೊಳಗಿನ ಬಕೀಟನಲ್ಲಿ ರಿಂಗ್ ಎಸೆಯುವ ಸ್ಪರ್ಧೆಯಲ್ಲಿ ಗಂಗವ್ವ ತುಂಗಳ (ಪ್ರಥಮ), ಭವಾಣಿ ಯರಗೊಪ್ಪ (ದ್ವಿತೀಯ), ಶಾರದಾ ಕಂಬಾರ (ತೃತೀಯ), 70-79 ವರ್ಷದೊಳಗಿನ ಸ್ಪರ್ಧೆಯಲ್ಲಿ ಬಾಳಮ್ಮ ಗೊಂದಿ (ಪ್ರಥಮ), ನಿಂಬೆವ್ವ ಮಾಳಿ (ತೃತೀಯ), ನೀಲವ್ವ ಡೇರಿಜಿ (ತೃತೀಯ), 60-69 ವರ್ಷದೊಳಗಿನ ಗಾಯನ ಸ್ಫರ್ಧೆಯಲ್ಲಿ ನಿಂಬೆವ್ವ ಮಾಳಿ (ಪ್ರಥಮ), ಚಂದ್ರವ್ವ ಪಡಸಲಗಿ (ದ್ವಿತೀಯ), ಗಂಗವ್ವ ಸವದಿ (ತೃತೀಯ), 70-79 ವರ್ಷದೊಳಗಿನ ಸ್ಪರ್ಧೆಯಲ್ಲಿ ನೀಲವ್ವ ಪರಸಪ್ಪನವರ (ಪ್ರಥಮ), ರೇಣವ್ವ ಚಲವಾದಿ (ದ್ವಿತೀಯ), ಪದ್ದವ್ವ ನಂದಿ (ತೃತೀಯ), 80 ವರ್ಷ ಮೇಲ್ಪಟ್ಟ ಸ್ಪರ್ಧೆಯಲ್ಲಿ ಗುರಮ್ಮ ಸಂಕೀನಮಠ (ಪ್ರಥಮ), ಶಿವಲಿಂಗವ್ವ ಗಸ್ತಿ (ದ್ವಿತೀಯ) ಸ್ಥಾನ ಪಡೆದುಕೊಂಡರು.
Be the first to comment